ಘನತ್ಯಾಜ್ಯ ವಸ್ತು ಸಂಗ್ರಹಣಾ ಘಟಕಕ್ಕೆ ಬೆಂಕಿ
ಬೈಲಹೊಂಗಲ 18- ಪಟ್ಟಣದ ದೇವಲಾಪೂರ ರಸ್ತೆಯಲ್ಲಿ ಸುಮಾರು 4 ಎಕರೆಯಲ್ಲಿರುವ ಘನತ್ಯಾಜ್ಯ ವಸ್ತು ಸಂಗ್ರಹಣಾ ಘಟಕದಲ್ಲಿರುವ ಅಪಾರ ಪ್ರಮಾಣದ ತ್ಯಾಜ್ಯ ವಸ್ತು ಬೆಂಕಿಗೆ ಆಹುತಿಯಾದ ಘಟನೆ ಸೋಮವಾರ ನಡೆದಿದೆ.
ಬೆಂಕಿಯ ತೀವ್ರತೆ ಹೆಚ್ಚಿಗೆ ಇದ್ದುದ್ದರಿಂದ ಭಾರಿ ಪ್ರಮಾಣದಲ್ಲಿ ಗಾಳಿಯಲ್ಲಿ ತೇಲಿದ ಹೋಗಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬೆಂಕಿಯನ್ನು ನಂದಿಸಲು ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಶ್ರಮಿಸಿದರು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.