ಜಮಖಂಡಿ

ಸಕಲ ಸರ್ಕಾರಿ ಗೌರವದೊಂದಿಗೆ ಯೋಧನಿಗೆ ಅಂತಿಮ ನಮನ

ಸಕಲ ಸರ್ಕಾರಿ ಗೌರವದೊಂದಿಗೆ ಯೋಧನಿಗೆ ಅಂತಿಮ ನಮನ

ಲೋಕದರ್ಶನ ವರದಿ,

ಜಮಖಂಡಿ 16: ಯೋಧರೊಬ್ಬರು ತ್ರೀ ಇಂಜಿನಿಯರಿಂಗ್ ರೆಜಿಮೆಂಟ್ ಯೋವಲ್ ಕಂಟೋನ್ಮೆಂಟ್ ಹಿಮಾಚಲ ಪ್ರದೇಶದಲ್ಲಿ ಸೇವೆಯಲ್ಲಿ ಇರುವಾಗ ಅನಾರೋಗ್ಯದಿಂದ ಸಾವನ್ನಪ್ಪಿದ ಹಿನ್ನಲೆ ತಾಲೂಕಾಡಳಿತದಿಂದ ಸರಕಾರಿ ಸಕಲ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಿ. ಶವ ಸಂಸ್ಕಾರ ಮಾಡಲಾಯಿತು.

ತಾಲ್ಲೂಕಿನ ಸಿದ್ದಾಪೂರ ಗ್ರಾಮದ ರಮೇಶ ಸುಭಾಸ ಹುದ್ದಾರ (38) ತ್ರೀ ಇಂಜಿನಿಯರಿಂಗ್ ರೆಜಿಮೆಂಟ್ ಯೋವಲ್ ಕಂಟೋನ್ಮೆಂಟ್ ಹಿಮಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸಿಸುತ್ತಿದ್ದರು. ಅವರ ಆರೋಗ್ಯ ಸರಿ ಇಲ್ಲದ ಹಿನ್ನಲೆ ಅವರು ಅನಾರೋಗ್ಯದ ಕಾರಣದಿಂದ ನಿಧನ ಹೊಂದಿದ್ದಾರೆ.

ಹಿಮಾಚಲ ಪ್ರದೇಶದಿಂದ ಅವರ ಶವವನ್ನು ಸಿದ್ದಾಪುರ ಗ್ರಾಮಕ್ಕೆ ತರಲಾಯಿತು. ಗ್ರಾಮದ ಪ್ರಮೂಕ ರಸ್ತೆಯ ಮೂಲಕ ತೆರದ ವಾಹನದಲ್ಲಿ ಮೆರವಣೆಗೆ ಮಾಡಲಾಗಿದ್ದು. ನಂತರ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ನಿಧನ ಹೊಂದಿದ ಯೋಧನ ಶವಕ್ಕೆ ಅಂತಿಮ ನಮನ ಸಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು.

ಪೊಲೀಸ್ ಇಲಾಖೆಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡುಗಳನ್ನು ಹಾರಿಸಿ. ರಾಷ್ಟ್ರ ಗೀತೆಯೊಂದಿಗೆ ತಾಲೂಕ ಆಡಳಿತ ಹಾಗೂ ಪೊಲೀಸ ಇಲಾಖೆ ಹಾಗೂ ಸೈನಿಕ, ಮಾಜಿ ಸೈನಿಕರಿಂದ ಸರಕಾರಿ ಗೌರವದೊಂದಿಗೆ ಅಂತಿಮ ನಮನವನ್ನು ಸಲಿಸಲಾಯಿತು.

ಅಂತಿಮ ನಮನದಲ್ಲಿ ತಹಶೀಲ್ದಾರ ಸದಾಶಿವ ಮಕ್ಕೋಜಿ, ಗ್ರಾಮೀಣ ಠಾಣಿಯ ಪಿ,ಎಸ್,ಐ ಗಂಗಾ ಬಿರಾದರ, ಹುಲ್ಯಾಳ ಆಶ್ರಮದ ಹರ್ಷಾನಂದ ಶ್ರೀಗಳು, ಮರೆಗುದ್ದಿ ಗುರುಪಾದೇಶ್ವರ ಶ್ರೀಗಳು, ಈರಯ್ಯ ಸ್ವಾಮೀಜಿ, ಡಾ,ಉಮೇಶ ಮಹಾಬಳಶೆಟ್ಟಿ, ಧರ್ಮಲಿಂಗಯ್ಯ ಗುಡಗುಂಟಿ, ತ್ರಿ ಇಂಜನಿಯರ್ ರೇಜಿಮೆಂಟ್ ಯೋವಲ್ ಕಂಟೋಮೆಂಟ್ ಹಿಮಾಚಲ ಪ್ರದೇಶ ಸುಭೇದಾರ ಬುಳಪ್ಪಾ ಮತ್ತು ಸೈನಿಕರು, ಮಾಜಿ ಸೈನಿಕರು ಹಾಗೂ ಪೊಲೀಸ್ ಸಿಬ್ಬಂದಿಗಳು, ಕುಟುಂಬಸ್ಥರು. ಗ್ರಾಮಸ್ಥರು ಅಂತಿಮ ನಮನದಲ್ಲಿ ಮತ್ತು ಶವ ಸಂಸ್ಕಾರದಲ್ಲಿ ಭಾಗಿಯಾಗಿದರು. ನಿಧನರಾದ ಯೋಧನಿಗೆ ಹೆತ್ತ ತಂದೆ,ತಾಯಿ, ಪತ್ನಿ ಮತ್ತು ಕುಟುಂಬಸ್ಥರ ಮತ್ತು ಗ್ರಾಮಸ್ಥರ ಆಕ್ರಂದ ಮುಟುವಂತೆ ಇತ್ತು.


ಸುದ್ದಿ ಓದಿ