ರಾಣೆಬೆನ್ನೂರ

ಸಾಲ ತೀರಿಸಲಾರದೆ ಮನ ನೊಂದ ರೈತ ಆತ್ಮಹತ್ಯೆ

ಸಾಲ ತೀರಿಸಲಾರದೆ ಮನ ನೊಂದ ರೈತ ಆತ್ಮಹತ್ಯೆ

ರಾಣಿಬೆನ್ನೂರ 18:  ಕೃಷಿ ಚಟುವಟಿಕೆಗೆ ಮಾಡಿದ ಸಾಲ ತೀರಿಸಲಾರದೆ ಮನ ನೊಂದ ರೈತನೊಬ್ಬ ಜಮೀನಿನಲ್ಲಿ ಕಟ್ಟಿಸಿದ ರೇಶ್ಮೆ ಸಾಕಾಣಿಕಾ ಚಪ್ಪರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕರೂರು ಗ್ರಾಮದಲ್ಲಿ ಗುರುವಾರ ನಡೆದಿದೆ.  

ಮೃತನ್ನು ಸೋಮಪ್ಪ ಕರಿಹನುಮಪ್ಪ ಹೊಸಮನಿ ಉರ್ಫ ತಳವಾರ (45) ಎಂದು ಗುರುತಿಸಲಾಗಿದೆ. ಮೃತನು ಕೃಷಿ ಚಟುವಟಿಕೆಗಾಗಿ ಕೆ.ವಿ.ಜಿ. ಬ್ಯಾಂಕ್ ಚಳಗೇರಿ, ವಿ.ಎಸ್‌.ಎಸ್‌. ಬ್ಯಾಂಕ್ ಕರೂರು, ಸ್ತ್ರೀಶಕ್ತಿ ಸಂಘ ಮತ್ತು ಕೈಗಡ ಸಾಲವಾಗಿ ಸುಮಾರು 18,40,000 ಲಕ್ಷ ರೂ. ಸಾಲವನ್ನು ಮಾಡಿಕೊಂಡಿದ್ದ. ತನ್ನ 4 ಎಕರೆ ಜಮಿನಿನಲ್ಲಿ ಕಳೆದ 4 ವರ್ಷಗಳಿಂದ ರೇಶ್ಮೆ ಬೆಳೆ ಬೆಳೆದಿದ್ದು ರೇಶ್ಮೆ ಬೆಲೆ ಕಡಿಮೆಯಾಗಿ ಬೆಲೆಯಲ್ಲಿ ತೀವ್ರ ಕುಸಿತ ಕಂಡಿದ್ದರಿಂದ ಮತ್ತು ನೀರಾವರಿ ಮೂಲ ಬೋರ್‌ವೆಲ್‌ನಲ್ಲಿ ನೀರು ಬತ್ತಿಹೋಗಿದ್ದರಿಂದ ಮಾಡಿದ ಸಾಲ ತೀರಿಸಲಾಗದೆ ಮನ ನೊಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಸುದ್ದಿ ಓದಿ