ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳವರೆಗೆ ಆಯೋಜಿಸಲಾದ ಪ್ರವಚನ ಕಾರ್ಯಕ್ರಮ
ಮಾಂಜರಿ 06: ಶರಣರ ವಚನಗಳು 12ನೇ ಶತಮಾನಕ್ಕೆ ಮಾತ್ರ ಸಿಮೀತವಾಗದೆ ಎಂದೆಂದಿಗೂ ಸಾರ್ವಕಾಲಿಕವಾಗಿದ್ದು, ಸಮರಸದ ಸಮಾಜ ನಿರ್ಮಾಣ ಮಾಡುವುದೇ ಶರಣರ ಆಶಯವಾಗಿತ್ತು ಎಂದು ಅಂಕಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಸುರೇಶ್ ಪಾಟೀಲ್ ತಿಳಿಸಿದರು.
ಅವರು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಶಿವಾಲಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಶಿವಾಲಯ ಕಮಿಟಿಯ ಸದಸ್ಯರಾದ ಅನಾಸಾಹೇಬ್ ಜಕಾತಿ ವಿವೇಕ್ ಕಮತೆ ವಿವೇಕ್ ನಷ್ಟೇ ತಮ್ಮನಿ ಗುಂಡುಕಲೆ ಬಿ ಎಂ ಕೋರೆ ಹಾಜರಿದ್ದರು
ಭಕ್ತಿ,ಕಾಯಕ ಮತ್ತು ದಾಸೋಹ ಅನುಭಾವದ ನೆಲೆಯಾಗಿದ್ದು, ಶರಣರ ವಚನಗಳು 12 ಶತಮಾನದಿಂದಲೂ ಚಿರಂತನವಾಗಿವೆ. ಸಮಾಜದಲ್ಲಿನ 3 ವಚನಗಳಿಗೆ ಮತ್ತು ವಿಚಾರಗಳಿಗೆ ವಿರೋಧವಿದ್ದರು, ಚರ್ಚೆ ಮತ್ತು ಮಂಥನ ಯಾವತ್ತೂ ನಿಲ್ಲಬಾರದು. ನಿಂತರೆ ವಿಷ ಅಮೃತವಾಗಲು ಸಾಧ್ಯವಿಲ್ಲ ಎಂದ ಸುರೇಶ ಪಾಟೀಲ್ ಹೇಳಿದರು
ಪ್ರಭು ಶ್ರೀರಾಮನು ಸಹ ಸಮಾಜ ಹಾಕಿದ ಗಡಿಯನ್ನು ಯಾವತ್ತೂ ದಾಟಲಿಲ್ಲ, ಅದರಂತೆ ಶರಣರು ಸಹ ಸಮಾಜದ ಯಾವುದೇ ಗಡಿಯನ್ನು ದಾಟದೇ ವಚನಗಳ ಮೂಲಕ ಸಮಾಜವನ್ನು ಕಟ್ಟಿ ಬೆಳೆಸುವ ಕೆಲಸ ಮಾಡಿದ್ದು, ಶರಣರ ಹಾಕಿದ ಮಾರ್ಗದಲ್ಲಿ ನಾವೆಲ್ಲರೂ ನಡೆಯುವ ಅವಶ್ಯಕತೆ ಬಹಳಷ್ಟಿದೆ ಎಂದು ಶಿವಾಲಯ ಕಮಿಟಿಯ ಸದಸ್ಯರಾದ ಅನ್ನಸಾಹೇಬ್ ಜಕಾತಿ ಹೇಳಿದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಗಣ್ಯರಿಂದ ದೀಪ ಬೆಳಗಿಸಿ ಉದ್ಘಾಟಿಸಲಾಯಿತು ವೇಳೆ ಅಂಕಲಿ ಗ್ರಾಮದ ಸದ್ಭಕ್ತರು ಹಾಗೂ ಗ್ರಾಮಸ್ಥರು ಹಾಜರಿದ್ದರು ಶಿವಾಲಯ ಕಮಿಟಿಯ ಕಾರ್ಯದರ್ಶಿಗಳಾದ ನಾಗೇಶ್ ಮಜುಕರ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು.