ಬೆಡ್ ಶೀಟ್ ಕೆಳಗೆ ಸಾಬೂನು ಇಡುವುದರಿಂದ ನಿದ್ರಾಹೀನತೆ ಪರಿಹಾರವಾಗಬಹುದೇ ?
ಈ ಶೀರ್ಷಿಕೆ ಓದಿದಾಗ ನಿದ್ರಾಹೀನತ ಪರಿಹಾರಕ್ಕೂ ಸಾಬೂನಿಗೂ ಏನು ಸಂಬಂಧ ಏಂಬ ಪ್ರಶ್ನೆ ನಿಮ್ಮಲ್ಲಿ ಉದ್ಬವವಾಗಿರುತ್ತದೆ. ಖಂಡಿತ ಸಂಬಂಧವಿದೆ. ವಿಚಿತ್ರ ಎನಿಸಿದರೂ ಇದು ಸತ್ಯ… ಮುಂದೆ ಓದಲು ಲಿಂಕ್ ಕ್ಲಿಕ್ ಮಾಡಿ
ಎಲ್ಲರಿಗೂ ರಾತ್ರಿ ಸಮಯ ಸ್ವಾಭಾವಿಕವಾದ ನಿದ್ರೆ ಬರುವುದಿಲ್ಲ. ವಿವಿಧ ಕಾರಣಗಳಿಂದಾಗಿ ನಿದ್ರೆ ಹತ್ತದೇ ಕಷ್ಟಪಡುವವರ ಸಂಖ್ಯೆ ಗಣನೀಯವಾಗಿದೆ. ಈ ತೊಂದರೆ ಪರಿಹಾರಕ್ಕೆ ಕೆಲವರು ಮದ್ಯಪಾನ; ಇನ್ನೂ ಕೆಲವರು ನಿದ್ರೆಗುಳಿಗೆ ಮೊರೆ ಹೋಗುತ್ತಾರೆ. ಇವು ತಾತ್ಕಲಿಕ ಪರಿಹಾರ ಕೊಡಬಹುದೇ ವಿನಃ ದೀರ್ಘಕಾಲಿಕ ಪರಿಣಾಮ ಖಂಡಿತ ಅಲ್ಲ.
ಸತತವಾಗಿ ನಿದ್ರೆಗೆಡುವುದು ದೈಹಿಕ-ಮಾನಸಿಕ ತೊಂದರೆಗಳಿಗೆ ಕಾರಣವಾಗುತ್ತದೆ. ವೃತ್ತಿ – ವೈಯಕ್ತಿಕ ಬದುಕಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಕಿರಿಕಿರಿ –ಸಿಡಿಮಿಡಿ – ಏಕಾಗ್ರತೆ ಕೊರತೆ ಉಂಟಾಗುತ್ತದೆ. ಆದ್ದರಿಂದಲೇ ಹಿರಿಯರು ನಿದ್ರೆಗೆಟ್ಟರೆ ಬುದ್ದಿಯೂ ಕೆಡುತ್ತದೆ ಎಂಬ ಮಾತನ್ನು ಹೇಳುತ್ತಿರುತ್ತಾರೆ.
ಸಾಮಾನ್ಯವಾಗಿ ಎಲ್ಲರೂ ಉದ್ವೇಗದ ಭಾವನೆಗಳಿಗೆ ಒಳಗಾಗುತ್ತಾರೆ. ಆದರೆ ಇದು ದೀರ್ಘಗಾಲ ಮುಂದುವರಿದರೆ ಅದು ದೈಹಿಕವಾಗಿ ಬೇರೆಬೇರೆ ಅಡ್ಡ ಪರಿಣಾಮ ಉಂಟು ಮಾಡಬಹುದು. ನಿದ್ರಾಹೀನತೆಗೂ ಕಾರಣವಾಗಬಹುದು. ರೆಸ್ಟ್ ಲೆಸ್ ಸಿಂಡ್ರೋಮ್ ಕೂಡ ಉಂಟಾಗಬಹುದು. ಈ ಸಮಸ್ಯೆ ಇದ್ದಾಗಲೂ ನಿದ್ರೆ ಹತ್ತುವುದು ಕಷ್ಟ.
ಏನಿದು ರೆಸ್ಟ್ಲೆಸ್ ಲೆಗ್ಸ್ ಸಿಂಡ್ರೋಮ್ ?
ಹಾಸಿಗೆ ಮೇಲೆ ಮಲಗಿದಾಗ ಮೊಣಕಾಲಿನಿಂದ ಕೆಳಗೆ ಸೆಳೆತ, ನಡುಕ ಉಂಟಾಗುತ್ತದೆ. ಆದರೆ ವ್ಯಕ್ತಿ ನಡೆದಾಡುವಾಗ ಈ ತೊಂದರೆ ಇರುವುದಿಲ್ಲ. ಚಲನೆ ನಿಲ್ಲಿಸಿದ ಬಳಿಕವಷ್ಟೇ ಈ ತೊಂದರೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ವಿಶ್ರಾಂತಿ ಪಡೆಯುವ ಸಮಯ ಇದರಿಂದ ತೊಂದರೆ ಹೆಚ್ಚು.
ಕಾರಣ ?
RLS ನ ನಿಖರ ಕಾರಣ ತಿಳಿದಿಲ್ಲ. ಇದು ಬಹುಶಃ ಮೆದುಳಿನಲ್ಲಿನ ನರ ಕೋಶಗಳ ಅಡಚಣೆಯಿಂದಾಗಿ ಚಲನೆ ಮತ್ತು ಪ್ರತಿವರ್ತನವನ್ನು ನಿಯಂತ್ರಿಸುತ್ತದೆ. ಈ ಸ್ಥಿತಿಯು ಆನುವಂಶಿಕವಾಗಿ ಕಂಡುಬರುತ್ತದೆ. ಕೆಲವೊಮ್ಮೆ, ಇದು ಕಡಿಮೆ ಕಬ್ಬಿಣದ ಮಟ್ಟಗಳು ಅಥವಾ ಮೂತ್ರಪಿಂಡ ವೈಫಲ್ಯ ಅಥವಾ ಮಧುಮೇಹದಂತಹ ಇತರ ದೀರ್ಘಕಾಲದ ಕಾಯಿಲೆಗಳ ಅಡ್ಡ ಪರಿಣಾಮದಿಂದಾಗಿಯೂ ಆಗಿರಬಹುದು.
ಲ್ಯಾವೆಂಡರ್ ಸೋಪ್
ರೆಸ್ಟ್ ಲೆಸ್ ಸಿಂಡ್ರೋಮ್ ಪರಿಹಾರಕ್ಕೆ ಲ್ಯಾವೆಂಡರ್ ಸೋಪ್ ಪರಿಹಾರ ನೀಡಬಹುದು ಎಂದು ಹೇಳಲಾಗುತ್ತದೆ. ಮೊಣಕಾಲಿನ ಕೆಳಭಾಗದಲ್ಲಿ ಅಥವಾ ಪಾದಗಳ ಬಳಿ ಬರುವಂತೆ ಹಾಸಿಗೆ ಹೊದಿಕೆ ಕೆಳಗೆ ಮಲಗುವ ಮುನ್ನ ಲ್ಯಾವೆಂಡರ್ ಸೋಪ್ ಇಟ್ಟರೆ ಕಾಲುಗಳು ಸೆಳೆತ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದೇ ಹೇಳಲಾಗುತ್ತದೆ.
ಪುರಾವೆ ಏನು ?
ಲ್ಯಾವೆಂಡರ್ ಸೋಪ್ ತಂತ್ರವನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಲಾಗಿಲ್ಲ, ಆದರೆ ಇದು ನಿಜವಾಗಿಯೂ ಕೆಲಸ ಮಾಡುತ್ತದೆ ಎಂದು ಅನೇಕ ಮಂದಿ ಅಭಿಪ್ರಾಯಪಟ್ಟಿದ್ದಾರೆ. ಇದು ಪ್ಲಾಸೀಬೊ ಪರಿಣಾಮವನ್ನು ಹೊಂದಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಬಳಸುತ್ತಿರುವವರಲ್ಲಿ ಅಚ್ಚರಿಯಿದೆ. ಆದರೆ ಓರ್ವ ಮಹಿಳೆ ರೆಸ್ಟ್ ಲೆಸ್ ಲೆಗ್ ಸಿಂಡ್ರೋಮ್ ನಿಂದ ಬಳಲುತ್ತಿದ್ದ ತನ್ನ ಪತಿಗೆ ತಿಳಿಯದಂತೆ ಆತ ಮಲಗುವ ಮುನ್ನ ಆತನ ಪಾದಗಳ ಸನಿಹ ಲ್ಯಾವೆಂಡರ್ ಸೋಪ್ ಇಡತೊಡಗಿದ್ದರು. ಈ ಬಳಿಕ ಆತ ಚೆನ್ನಾಗಿ ನಿದ್ರಿಸತೊಡಗಿದ. ತನ್ನ ಪತ್ನಿ ಸೋಪ್ ಇಟ್ಟಿದ್ದ ಸಂಗತಿ ಆತನಿಗೆ ತಿಳಿದಿರಲಿಲ್ಲ ಎಂದು ಹೇಳಲಾಗಿದೆ. ಆದ್ದರಿಂದ ಇದು ಪ್ಲಾಸಿಬೋ ಪರಿಣಾಮವಲ್ಲ ಎಂದು ಹೇಳಲಾಗಿದೆ.
ನಿರ್ದಿಷ್ಟ ಕಂಪನಿಯ ಲ್ಯಾವೆಂಡರ್ ಸೋಪ್ ಬಗ್ಗೆ ಹೇಳಿದ್ದರೆ ಅದು ಆ ಕಂಪನಿ ತನ್ನ ಉತ್ಪನ್ನದ ಮಾರಾಟ ಹೆಚ್ಚಿಸಿಕೊಳ್ಳಲು ಮಾಡಿರುವ ಪ್ರಚಾರದ ತಂತ್ರ ಎಂದು ಭಾವಿಸಬಹುದಾಗಿತ್ತು. ಆದರೆ ಎಲ್ಲಿಯೂ ಯಾವುದೇ ಕಂಪನಿ ಉತ್ಪನ್ನದ ಬಗ್ಗೆ ಹೇಳಿಲ್ಲ. ಆದ್ದರಿಂದ ಈ ರೀತಿ ಲ್ಯಾವೆಂಡರ್ ಸೋಪು ಬಳಸಿ ನೋಡಬಹುದು. ಅದರಿಂದ ಪರಿಣಾಮವಾಗದಿದ್ದರೆ ಸೋಪ್ ಸ್ನಾನಕ್ಕಂತೂ ಪ್ರಯೋಜನಕ್ಕೆ ಬರುತ್ತದೆ !