ರಾಣೆಬೆನ್ನೂರ

ಆರೋಗ್ಯಯುತ ಜೀವನಕ್ಕೆ ಸ್ವಚ್ಛ ಪರಿಸರ ಅಗತ್ಯ: ಡಾ. ಸರಸ್ವತಿ

ಆರೋಗ್ಯಯುತ ಜೀವನಕ್ಕೆ ಸ್ವಚ್ಛ ಪರಿಸರ ಅಗತ್ಯ: ಡಾ. ಸರಸ್ವತಿ

ರಾಣೀಬೆನ್ನೂರ 09: ವಿದ್ಯಾರ್ಥಿಗಳು ಸುಂದರ ಪರಿಸರಕ್ಕಾಗಿ ನಿತ್ಯವೂ ಕ್ಷಣಕಾಲವಾದರೂ ಚಿಂತನೆ ನಡೆಸಿದಾಗ ಮಾತ್ರ ಆರೋಗ್ಯಯುಕ್ತ ಜೀವನಕ್ಕೆ ಸಹಕಾರಿಯಾಗಲಿದೆ ಕಾಲೇಜು ವಿದ್ಯಾರ್ಥಿಗಳು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ(ಪಕ್ವಾಡ) ಘಟಕದಲ್ಲಿ ಸೇರೆ​‍್ಡಗೊಂಡು ಶಿಕ್ಷಣದ ಜೊತೆಗೆ ಸಾಮಾಜಿಕ ಸೇವೆಯಲ್ಲಿ-ಪಾಲ್ಗೊಳ್ಳಬೇಕಾದ ಇಂದಿನ ಅಗತ್ಯವಿದೆ ಎಂದು ಎನ್ ಎಸ್‌ಎಸ್ ಯೋಜನಾಧಿಕಾರಿ ಡಾ. ಸರಸ್ವತಿ ಬಮ್ಮನಾಳ ಹೇಳಿದರು.  

ಅವರು ಇಲ್ಲಿನ ಆರ್‌ಟಿಇಎಸ್ ಕಾಲೇಜಿನ ಎನ್‌ಎಸ್‌ಎಸ್ ಘಟಕವು ಆಯೋಜಿಸಿದ್ದ ಸ್ವಚ್ಛತಾ ಕಾರ್ಯ ಯೋಜನೆಯ ಉದ್ದೇಶ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಈ ದೇಶದ ಭವಿಷ್ಯದ ನಾಗರೀಕರು ಭಾರತೀಯ ಸಂಸ್ಕೃತಿ ಅಳವಡಿಸಿಕೊಂಡು ಇತಿಹಾಸದ ಪುನರುತ್ಥಾನಕ್ಕಾಗಿ ಮುಂದಾಗಬೇಕು ಇದರಿಂದಲೇ ಮತ್ತಷ್ಟು ಅಭಿವೃದ್ಧಿ ಪಥದತ್ತ ಸಾಗುತ್ತದೆ. ಶಿಕ್ಷಣ ಜೊತೆಗೆ ಸಾಮಾಜಿಕ ಕಾಳಜಿ ಸೇವೆಯನ್ನು ಅಳವಡಿಸಿಕೊಂಡಾಗ ಮಾತ್ರ ಆ ವಿದ್ಯಾರ್ಥಿ ಮಾನಸಿಕ-ದೈಹಿಕ ಮತ್ತು ಬೌದ್ಧಿಕವಾಗಿ ಬೆಳೆದು ಸಮಾಜದಲ್ಲಿ ಸಮಗ್ರ ವ್ಯಕ್ತಿತ್ವ ನಿರೂಪಿಸಿಕೊಳ್ಳಲು ಈ ಯೋಜನೆ ಸಹಕಾರಿಯಾಗಲಿದೆ ಎಂದರು.  

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಫ.ಎಚ್‌.ಮಾಚೇನಹಳ್ಳಿ ಅವರು ಸಮಾಜ ಮುಖಿ ಕಾರ್ಯದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಾಗ ಮಾತ್ರ ಅವರು ಭವಿಷ್ಯದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಾಗುವುದು. ಇತಿಹಾಸದ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ನಮ್ಮ ವೇದ ಕಾಲದ ಋಷಿಮುನಿಗಳು ತಮ್ಮ ನಿತ್ಯದ ಬದುಕಿನಲ್ಲಿ ಭವಿಷ್ಯದ ನಿರ್ಮಾಣಕ್ಕಾಗಿ  ಮತ್ತು ಆರೋಗ್ಯ ಜೀವನಕ್ಕಾಗಿ ಯೋಗ-ಧ್ಯಾನ-ಪ್ರಾಣಾಯಾಮ ಅಳವಡಿಸಿದ್ದರಿಂದಲೇ ಅವರು ನೂರಾರು ವರ್ಷಗಳ ಕಾಲ ಯಾವುದೇ ರೋಗ-ರುಜಿನಗಳಿಲ್ಲದೇ ಬದುಕಲು ಸಾದ್ಯವಾಗಿದೆ. ಅದೇ ರೂಪದಲ್ಲಿ ಇಂದು ಸ್ವಚ್ಛತಾ ಕಾರ್ಯದ ಮೂಲಕ ಕ್ರೀಯಾಶೀಲರಾಗಲು ಎನ್‌ಎಸ್‌ಎಸ್ ಯೋಜನೆಯು ಜಾರಿಯಾಗಿದೆ ಎಂದು ವಿವರಿಸಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಕಾಲೇಜಿನ ಆವರಣ ಸೇರಿದಂತೆ ಹತ್ತಾರು ಎಕರೆ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಸೇವಾ ಕಾರ್ಯ ಮೆರೆದರು. ಸಂಪನ್ಮೂಲ ವ್ಯಕ್ತಿ ಎಲ್‌.ಎಂ. ಮಾವಿನತೋಪ ಅವರು ವ್ಯಕ್ತಿತ್ವ ನಿರ್ಮಾಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ವಿಷಯ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಡಾ.ಡಿ.ವಿ. ಜಂಗಣ್ಣನವರ ಐಕ್ಯೂಎಸಿ ಸಂಯೋಜಕ ಡಾ. ಮಧುಕುಮಾರ ಆರ್, ಡಾ. ಪಿ.ಬಿ.ಕೊಪ್ಪದ, ಡಾ.ಆರ್‌.ಎಸ್‌.ರಡ್ಡೇರ, ಡಿ.ಟಿ.ಲಮಾಣಿ, ಎಂ.ಎಸ್‌.ಕೊರಚರ, ಆರ್‌.ಎಸ್‌.ನಾಯಕ್ ಸೇರಿದಂತೆ ಮತ್ತತರೆ ಉಪಮ್ಯಾಸಕರು, ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರಂಜಿತ ಸಂಗಡಿಗರು ಪ್ರಾರ್ಥಿಸಿದರು, ಅಮೀಶಾ ಸ್ವಾಗತಿಸಿದರು, ಕವನಾ ಮರಾಠೆ ನಿರೂಪಿಸಿ, ಎನ್‌.ಎಂ.ವರ್ಷಿಣಿ ವಂದಿಸಿದರು. 


ಸುದ್ದಿ ಓದಿ