ಪೌಷ್ಟಿಕ ಆಹಾರ ಸೇವನೆಯಿಂದ ಪೌಷ್ಟಿಕಾಂಶವುಳ್ಳ ಹಾಲು ಕುಡಿಸಲು ಸಾಧ್ಯ: ಡಾ. ಪಾರ್ವತಿ ಪಳೂಟಿ
ಕುಷ್ಟಗಿ. 09: ಸ್ತನ್ಯಪಾನ ಸಪ್ತಾಹ ಅಂಗವಾಗಿ ಸೋಮವಾರ ಪಟ್ಟಣದ ಇನ್ನರ್ ವೀಲ್ ಕ್ಲಬ್ ವತಿಯಿಂದ ಇಲ್ಲಿನ ಮಾರುತಿ ನಗರದ ಮಾರುತೇಶ್ವರ ದೇವಸ್ಥಾನದಲ್ಲಿ ಸ್ತನ್ಯ ಪಾನ ಜಾಗೃತಿ ಕಾರ್ಯಕ್ರಮ ನಡೆಯಿತು.
ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಶೆಟ್ಟರ್ ಮಾತನಾಡಿ ಸ್ತನ್ಯಪಾನ ಜಾಗೃತಿ ಮೂಡಿಸುವುದು ಇಂದಿನ ಗರ್ಭಿಣಿ ಸ್ತ್ರೀಯರಿಗೆ ಹಾಗೂ ಬಾಣಂತಿಯರಿಗೆ ಅತಿ ಅವಶ್ಯವಾಗಿದೆ ಎಂದು ಹೇಳಿದರು.
ಡಿಸ್ಟಕ್ ಎಡಿಟರ್ ಡಾ. ಪಾರ್ವತಿ ಪಳೂಟಿ ಸ್ತನ್ಯಪಾನದ ಮಹತ್ವ ಹಾಗೂ ಜಾಗೃತಿ ಕುರಿತು ಮಹಿಳೆಯರಿಗೆ ಮಾಹಿತಿ ನೀಡಿದ ಅವರು ವಿಶ್ವ ಆರೋಗ್ಯ ಸಂಸ್ಥೆ 1991ರಲ್ಲಿ ಈ ಜಾಗೃತಿಯನ್ನು ಆರಂಭಿಸಿತು. ಮನೆಯಲ್ಲಿ ಹಿರಿಯರು ಮೊದಲನೇ ಮೊದಲ ಒಂದು ತಾಸಿನಲ್ಲಿ ಬಂದಂತಹ ಸ್ತನ್ಯವನ್ನು ಮಗುವಿಗೆ ಕುಡಿಸದೆ ಹಾಗೆ ಚೆಲ್ಲಲು ಹೇಳುತ್ತಾರೆ. ಪೌಷ್ಟಿಕ ಆಹಾರದಿಂದ ಮಾತ್ರ ತಾಯಿಯು ಮಗುವಿಗೆ ಉತ್ತಮ ಪೌಷ್ಟಿಕ ಅಂಶವುಳ್ಳ ಹಾಲನ್ನು ಕುಡಿಸಲು ಸಾಧ್ಯ ಎಂದು ಹೇಳಿದರು.
ಇನ್ನರವೀಲ್ ಅಧ್ಯಕ್ಷೆ ಶಾರದ ಶೆಟ್ಟರ್ ಹಾಗೂ ಕಾರ್ಯದರ್ಶಿ ವಂದನಾ ಗೋಗಿಯವರು ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯವನ್ನು ಮಾಡಿದರು. ನಂತರ ಐರನ್ ಕ್ಯಾಲ್ಸಿಯಂ ಹಾಗೂ ವಿಟಮಿನ್ ಸಿರಪ್ ಗಳನ್ನು ಗರ್ಭಿಣಿ ಸ್ತ್ರೀಯರಿಗೆ ಹಾಗೂ ಬಾಣಂತಿಯರಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆಯ ಸಿಬ್ಬಂದಿ ಶೋಭಾ ಗುನ್ನಾಳ, ಸಿಸ್ಟರ್ ವಿದ್ಯಾ, ಆಶಾ ಕಾರ್ಯಕರ್ತೆಯರಾದ ಹನುಮವ್ವ, ಮಂಜುಳಾ ಟೀಚರ್ ಮತ್ತಿತರರು ಭಾಗವಹಿಸಿದ್ದರು. ವಂದನಾ ಗೋಗಿ ವಂದನಾರ್ಪಣೆ ಮಾಡಿದರು.