ನಿರೋಗಿ ಮಾನಸಿಕ ಆರೋಗ್ಯಕ್ಕೆ ವ್ಯಸಮುಕ್ತ ಜೀವನವೇ ಕಾರಣ: ಡಾ. ಚಂದ್ರಶೇಖರ್ ಹಳಿಂಗಳೆ
ಕಾಗವಾಡ 28 : ವ್ಯಸನಮುಕ್ತಿ ಮತ್ತು ಮಾನಸಿಕ ಆರೋಗ್ಯದ ಅಗತ್ಯವಿರುವವರಿಗೆ ಸೇವೆ ಸಲ್ಲಿಸುವ ಕನಸಿನೊಂದಿಗೆ 2009 ರಲ್ಲಿ ಸಾಂಗಲಿ ಜಿಲ್ಲೆಯ ಮಿರಜ ಪಟ್ಟಣದಲ್ಲಿ ನಿರ್ಮಲ ಆಸ್ಪತ್ರೆ, ವ್ಯಸನಮುಕ್ತಿ ಮತ್ತು ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಿ, ಲಕ್ಷಾಂತರ ಜನರು ನೆಮ್ಮದಿಯ ಜೀವನಕ್ಕೆ ಮರಳಲು ಮನೋವೈದ್ಯ ಡಾ. ಚಂದ್ರಶೇಖರ ಹಳಿಂಗಳೆೆ ಪ್ರಯತ್ನಿಸುತ್ತಿದ್ದಾರೆ. ಅವರಿಗೆ ತಾಯಿ ನಿರ್ಮಲಾ, ತಂದೆ ಅಪ್ಪಾಸಾಹೇಬ, ಪತ್ನಿ ಸ್ತ್ರೀರೋಗ ತಜ್ಞೆ ಡಾ. ನಿಶಾ ಹಲಿಂಗೆಳೆೆ ಮತ್ತು ಇಬ್ಬರು ಹೆಣ್ಣುಮಕ್ಕಳು ಬೆನ್ನಲುಬಾಗಿ ನಿಂತಿದ್ದು, 4 ಹಾಸಿಗೆಗಳೊಂದಿಗೆ ಪ್ರಾರಂಭಗೊಂಡ ಆಸ್ಪತ್ರೆ ಇಂದು 200 ಹಾಸಿಗೆಗಳ ಆಸ್ಪತ್ರೆಯಾಗಿ ಹೊರಹೊಮ್ಮಿದೆ.
ಸುಮಾರು 90 ಉದ್ಯೋಗಿಗಳು ಮತ್ತು ವೈದ್ಯರು ತಂಡವು ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ ರಾಜ್ಯಗಳಲ್ಲಿ ವ್ಯಸನಮುಕ್ತಿ ಮತ್ತು ಮಾನಸಿಕ ಅಸ್ವಸ್ಥತೆ ಉಪಚಾರದಲ್ಲಿ ಹೆಸರುವಾಸಿಯಾಗಿದೆ. ಜೊತೆಗೆ ಡಾ. ಚಂದ್ರಶೇಖರ ಹಳಿಂಗಳೆ ಅವರು ಪತ್ರಿಕೆಗಳಲ್ಲಿ ಲೇಖನಗಳು, ರೇಡಿಯೋ, ಎಫ್ಎಂ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಜನರಲ್ಲಿ ವ್ಯಸನಮುಕ್ತಿಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಒತ್ತಡ ನಿರ್ವಹಣೆ, ವ್ಯಸನಮುಕ್ತಿ ಮತ್ತು ಮಾನಸಿಕ ಅಸ್ವಸ್ಥತೆಯ ಕುರಿತು ಉಪನ್ಯಾಸಗಳನ್ನು ನೀಡಿತ್ತಿದ್ದಾರೆ. ಅವರ ಈ ಸೇವೆಯನ್ನು ಗುರುತಿಸಿ, 2014 ರಲ್ಲಿ ಮಹಾರಾಷ್ಟ್ರ ಸರ್ಕಾರ ‘ಮಹಾತ್ಮ ಗಾಂಧಿ ವ್ಯಸನಮುಕ್ತಿ ಸೇವಾ ಪ್ರಶಸ್ತಿ;ಯನ್ನು ನೀಡಿ ಗೌರವಿಸಿದೆ.
ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿರುವ ಡಾ. ಚಂದ್ರಶೇಖರ ಹಳಿಂಗಳೆ ಅವರು ವೃದ್ಧರಿಗಾಗಿ ನಿರ್ಮಲ ವೃದ್ಧ ವಿಹಾರ ಮತ್ತು ಸ್ಮುತಿ ಆಧಾರ್ ಕೇಂದ್ರವನ್ನು ಪ್ರಾರಂಭಿಸಿ, ನಿರ್ಗತಿಕ ವೃದ್ಧರಿಗೆ ಆಸರೆಯಾಗಿದ್ದಾರೆ. ಚಿಕ್ಕಮಕ್ಕಳಲ್ಲಿ ಬೆಳೆಯುತ್ತಿರುವ ಮಾನಸಿಕ ಸಮಸ್ಯೆಗೆ ಆಟಿಸಂ ಕಲಿಕಾ ಕೇಂದ್ರ, ನಿರ್ಮಲ ನರ ಮನೋವೈದ್ಯಶಾಸ್ತ್ರ ಕೇಂದ್ರ, ನಿರ್ಮಲ ಫೌಂಡೇಶನ್ ಮತ್ತು ಡಾ. ಹಳಿಂಗಳೆ ಫೌಂಡೇಶನ್ ಸ್ಥಾಪಿಸಿದ್ದಾರೆ.
ಭವಿಷ್ಯದಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯರ ಮಾನಸಿಕ ಅಸ್ವಸ್ಥತೆ ಮತ್ತು ವ್ಯಸನದ ಮೂಲವನ್ನು ಕಂಡು ಹಿಡಿದು, ಜೀವನವನ್ನು ಆರೋಗ್ಯಕರವಾಗಿಸಲು ಶ್ರಮಿಸುತ್ತಿರುವ ಡಾ. ಚಂದ್ರಶೇಖರ ಹಳಿಂಗಳೆ ಅವರಿಗೆ ಜನ್ಮದಿನದ ಶುಭಾಶಯಗಳು.