ಸಮತೋಲನದಿಂದ ಕೂಡಿದ ಬಜೆಟ್
ಲೋಕದರ್ಶನ ವರದಿ
ರಾಣೇಬೆನ್ನೂರ 06: ಇಂದು ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಂದ ಮಂಡನೆಯಾದ ಕರ್ನಾಟಕ ರಾಜ್ಯ ಬಜೆಟ್ 2022-2023 ನೇ ಸಾಲಿನ ಆಯವ್ಯಯ ಮುಂಗಡ ಪತ್ರವು ಸಮತೋಲನದಿಂದ ಕೂಡಿದೆ. ಯಾವುದೇ ಹೊಸ ತೆರಿಗೆ ಹಾಕದೆ, ಕರೋನಾ ಸಂಕಷ್ಟದ ನಡುವೆಯೂ ಯಾರಿಗೂ ಅಸಮದಾನವಾಗದಂತೆ ಬಜೆಟ್ ಮಂಡಿಸಿದ್ದಾರೆ. ಮಹಿಳೆಯರಿಗಾಗಿ ಭರಪೂರ ಕೊಡುಗೆ ನಿಡಿದ್ದಾರೆ. ಮಹಿಳೆಯರ ಸಬಲಿಕರಣ ಮತ್ತು ಉದ್ದಿಮೆದಾರರಿಗೆ 43,188 ಕೋಟಿ ಮಿಸಲು. ಒಟ್ಟು ಬಜೆಟ್ ಗಾತ್ರವು 265 720 ಕೊಟಿ ರೂ , ಕೃಷಿ ಗೆ 33,700 ಕೋಟಿ, ಸರ್ವೋದಯ ಮತ್ತು ಕ್ಷೇಮಾಭಿರುದ್ದಿ 68,479 ಕೋಟಿ. ಆರ್ಥಿಕ ಅಭಿವೃದ್ದಿ 55,657 ಕೋಟಿ, ಬೆಂಗಳೂರು ಸಮಗ್ರ ಅಭಿವೃದ್ದಿ 8,409 ಕೋಟಿ, ಸಂಸ್ಕೃತಿ ಸುಧಾರಣೆ ಮತ್ತು ಸಾರ್ವಜನಿಕ ಸೇವೆ 56,710 ಕೋಟಿ, ಮಕ್ಕಳ ಅಭ್ಯುದಯಕ್ಕಾಗಿ 40,944 ಕೋಟಿ ರೂಗಳನ್ನು ಕೈಗಾರಿಕೆ ಉಳಿದಂತೆ ಶಿಕ್ಷಣ ಕ್ಷೇತ್ರಕ್ಕೆ , ಸರಕಾರಿ ಶಾಲೆಗಳ ಮೂಲಬೂತ ಸೌಕರ್ಯ ಪಾಠ ಮತ್ತು ಪಿಠೋಪಕರಣ, ಶೌಚಾಲಯ, ಕಂಪ್ಯೂಟರ ಪ್ರಯೋಗಾಲಯ, ಉರ್ದುಶಾಲೆಗಳಿಗೆ ಅನುದಾನ ಹಿಗೆ ಶಿಕ್ಷಣ ಕ್ಷೇತ್ರಕ್ಕೆ ಅನುದಾನವನ್ನು ವದಗಿಸಿದ್ದಾರೆ. 7 ಕೃಷಿ ವಿಶ್ವವಿದ್ಯಾಲಯಗಳನ್ನು ಮತ್ತು 15,000 ಡಿಜಿಟಲ್ ಗ್ರಂಥಾಲಯ ಸ್ಥಾಪನೆ, 15,000 ಶಿಕ್ಷಕರ ನೆಮಕ ಒಟ್ಟಾರೆಯಾಗಿ ಮಾನವ ಸಂಪನ್ಮೂಲದ ಮೇಲೆ 3000 ಕೋಟಿ ರೂ ಹುಡಿಕೆ.
ರಾಜ್ಯದ ನೀರಾವರಿ ಯೋಜನೆಗಳಿಗೆ ಬಂಪರ ಕೊಡುಗೆಗಳನ್ನು ನಿಡಿದ್ದಾರೆ,ಕಳಸಾಬಂಡೂರಿ ಯೋಜನೆಗೆ ರೂ. 1000 ಕೋಟಿ, ಭದ್ರಾ ಮೇಲ್ದಂಡೆ ಯೋಜನಿಗಳಿಗೆ ರೂ. 3000 ಕೋಟಿ, ಎತ್ತಿನ ಹೊಳೆ ಯೋಜನೆ ರೂ. 3000 ಕೋಟಿ, ಮೇಕೆದಾಟು ಯೋಜನೆಗೆ ರೂ. 1000 ಕೋಟಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ರೂ. 5000 ಕೋಟಿ ಮೀಸಲಿಟ್ಟಿದ್ದಾರೆ. ಹಾವೇರಿ ಮತ್ತು ಹಿರೇಕೆರೂರನಲ್ಲಿ ಮೆಕ್ಕೆಜೋಳ ಸಂಶೊದನಾ ಕೆಂದ್ರ ಸ್ಥಾಪನೆ ಮತ್ತು ರಾಣೇಬೆನ್ನೂರಿನಲ್ಲಿ ಜವಳಿ ಪಾರ್ಕ ಸ್ಥಾಪನೆ, ಸವಣೂರಿನಲ್ಲಿ ಹೊಸ ಆಯರ್ವೇದ ಕಾಲೇಜು ಮತ್ತು ರೈತರಿಗೆ ಡಿಸೆಲ್ ಮೇಲೆ ಸಹಾಯದ ನೀಡಿದ್ದು ಸ್ವಾಗತಾರ್ಹ. ಹುಬ್ಬಳ್ಳಿಯಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಹೃದ್ರೋಗ ಕೇಂದ್ರ ಸ್ಥಾಪನೆ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ 75 ತಾಲ್ಲೂಕು ಆಸ್ಪತ್ರೆಗಳ ಮ್ಯಾಪಿಂಗ್, ತಾಲ್ಲೂಕು ಮಟ್ಟದಲ್ಲಿ ಹೃದಯ ಸಂಬಂಧಿ ಚಿಕಿತ್ಸೆ ಒದಗಿಸಲು ಬಜೆಟ್ ನಲ್ಲಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಈ ಬಜೆಟ್ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಬಜೆಟ್ ಆಗಿದೆ. ಮತ್ತು ಸಮಗ್ರ ಕರ್ನಾಟಕದ ಅಭಿವೃದ್ದಿಗೆ ಪೂರಕವಾದ ಬಜೆಟ್.