ಕಾಂಗ್ರೆಸ್ ಅಭ್ಯರ್ಥಿಯಾಗಿ ಎ.ಬಿ.ಪಾಟೀಲ ನಾಮಪತ್ರ ಸಲ್ಲಿಕೆ
ಲೋಕದರ್ಶನ ವರದಿ
ಸಂಕೇಶ್ವರ 18: ಹುಕ್ಕೇರಿ ಮತ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎ.ಬಿ.ಪಾಟೀಲ ಅವರು ಇಂದು ಸಹಕಾರಿ ಹಿರಿಯ ರಾಜಕಾರಣಿ ಡಿ.ಟಿ.ಪಾಟೀಲ ಇವರ ಪಾದಗಳಿಗೆ ನಮಸ್ಕರಿಸಿ ಅಪಾರ ಕಾರ್ಯಕರ್ತರೊಂದಿಗೆ ಆಗಮಿಸಿ ತಮ್ಮ ನಾಮ ಪತ್ರವನ್ನು ಚುನಾವಣೆ ಅಧಿಕಾರಿಗಳಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯ ಜಿತೇಂದ್ರ ಮರಡಿ, ಮಾಜಿ ಮಂತ್ರಿ ಶಶಿಕಾಂತ ನಾಯಿಕ ದೀಲೀಪ್ ಹೊಸಮನಿ, ವಿನಯಗೌಡಾ ಪಾಟೀಲ, ಪುರಸಭೆಯ ಕಾಂಗ್ರೆಸ್ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.