ಕೊವಿಡ್- ದೇಶದಲ್ಲಿ ಒಂದೇ ದಿನ ೯೬ ಸಾವಿರ ಪ್ರಕರಣಗಳು ವರದಿ, ೫೨ ಲಕ್ಷ ದಾಟಿದ ಒಟ್ಟು ಸಂಖ್ಯೆ
ನವದೆಹಲಿ, ಸೆಪ್ಟೆಂಬರ್ 18: ದೇಶದಲ್ಲಿ ಶುಕ್ರವಾರ ಒಂದೇ ದಿನ ೯೬ ಸಾವಿರ ಹೊಸ ಕೊವಿಡ್ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ ೫೨ ಲಕ್ಷ ದಾಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಕಳೆದ ೨೪ ತಾಸಿನಲ್ಲಿ ಹೊಸ ೯೬,೪೨೪ ಪ್ರಕರಣಗಳ ಸೇರ್ಪಡೆಯೊಂದಿಗೆ ಸದ್ಯ, ಒಟ್ಟು ಪ್ರಕರಣಗಳ ಸಂಖ್ಯೆ ೫೨,೧೪,೬೭೮ರಷ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ೧೦,೧೭,೭೫೪ರಷ್ಟಿದೆ.
ಕಳೆದ ೨೪ ತಾಸಿನಲ್ಲಿ ೮೭,೪೭೨ ಸೋಂಕಿತರು ಗುಣಮುಖರಾಗುವುದರೊಂದಿಗೆ ಒಟ್ಟು ಸಂಖ್ಯೆ ೪೧ ಲಕ್ಷ ದಾಟಿದೆ. ಸದ್ಯ, ಗುಣಮುಖರಾದವರ ಸಂಖ್ಯೆ ೪೧,೧೨,೫೫೨ರಷ್ಟಿದೆ.
ಕಳೆದ ೨೪ ತಾಸಿನಲ್ಲಿ ೧,೧೭೪ ಮಂದಿ ಸೋಂಕಿಗೆ ಬಲಿಯಾಗುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ ೮೪,೩೭೨ಕ್ಕೆ ಏರಿದೆ ಎಂದು ಸರ್ಕಾರದ ಗುರುವಾರದ ಮಾಹಿತಿ ತಿಳಿಸಿದೆ.
ಸದ್ಯ, ಚೇತರಿಕೆ ಪ್ರಮಾಣ ಶೇ ೭೮.೮೬ರಷ್ಟಿದ್ದರೆ, ಸಾವಿನ ಪ್ರಮಾಣ ಶೇ ೧.೬೨ರಷ್ಟಿದೆ.
ಈ ಮಧ್ಯೆ, ಕಳೆದ ೨೪ ತಾಸಿನಲ್ಲಿ ೧೦,೦೬,೬೧೫ ಮಾದರಿಗಳನ್ನು ಪರೀಕ್ಷಿಸುವುದರೊಂದಿಗೆ ಒಟ್ಟು ಪರೀಕ್ಷೆಗಳ ಸಂಖ್ಯೆ ೬,೧೫,೭೨,೩೪೩ಕ್ಕೆ ಏರಿದೆ..
ಮಹಾರಾಷ್ಟ್ರ ಕೋವಿಡ್ ನಿಂದ ಹೆಚ್ಚು ಬಾಧಿತವಾಗಿದ್ದು, ಸದ್ಯ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೩ ಲಕ್ಷ ದಾಟಿದೆ.
ಜಾಗತಿಕವಾಗಿ ಅತಿಹೆಚ್ಚು ಬಾಧಿತವಾದ ದೇಶಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಭಾರತ ಮತ್ತು ಬ್ರೆಜಿಲ್ ಇವೆ.