ಕೋವಿಡ್ 19 : ದೇಶದಲ್ಲಿ ಒಂದೇ ದಿನ 96.5 ಸಾವಿರ ಪ್ರಕರಣ ದಾಖಲು
ನವದೆಹಲಿ, ಸೆಪ್ಟೆಂಬರ್ 11: ದೇಶದಲ್ಲಿ ಒಂದೇ ದಿನ ಕೋವಿಡ್ 19 ನ 96,551 ಹೊಸ ಪ್ರಕರಣಗಳು ದಾಖಲಾಗಿದ್ದು, 1,209 ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಹೊಸ ಪ್ರಕರಣಗೋಂದಿಗೆ ದೇಶದ ಒಟ್ಟಾರೆ ಸಾಂಕ್ರಾಮಿಕ ಪ್ರಮಾಣವು 45 ಲಕ್ಷ ದಾಟಿದ್ದು, ಪ್ರಸ್ತುತ ಈ ಸಂಖ್ಯೆ 45,62,415 ರಷ್ಟಿದೆ.
ಇಲ್ಲಿಯವರೆಗೆ 76,271 ಮಂದಿ ಕೊರೋನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. ಸಾವಿನ ಪ್ರಮಾಣವು ಪ್ರಸ್ತುತ ಶೇಕಡಾ 1.67 ರಷ್ಟಿದೆ.
ದೇಶದಲ್ಲಿ ಪ್ರಸ್ತುತ ದೇಶದಲ್ಲಿ 9,43,480 ಸಕ್ರಿಯ ಪ್ರಕರಣಗಳಿವೆ.
ಗುರುವಾರದಿಂದ ಗುಣಪಡಿಸಿದ ಪ್ರಕರಣಗಳು 70,880 ಆಗಿದ್ದು, ದೇಶದಲ್ಲಿ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 35,742,663 ಕ್ಕೆ ತಲುಪಿದೆ.
ಕಳೆದ 24 ಗಂಟೆಗಳಲ್ಲಿ 11,63,542 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ ನಡೆಸಿದ ಒಟ್ಟು ಪರೀಕ್ಷೆ 5,40,97,975 ಕ್ಕೆ ತಲುಪಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಾಹಿತಿ ನೀಡಿದೆ.
ಜಾಗತಿಕವಾಗಿ ಅಮೆರಿಕ ಇದುವರೆಗೆ 62 ಲಕ್ಷ ಪ್ರಕರಣಗಳ ಎಣಿಕೆಯೊಂದಿಗೆ ಅಗ್ರ ಸ್ಥಾನದಲ್ಲಿದೆ, ಭಾರತ ಎರಡನೇ ಸ್ಥಾನದಲ್ಲಿದ್ದರೆ, ಬ್ರೆಜಿಲ್ ಮೂರನೇ ಸ್ಥಾನದಲ್ಲಿದೆ.