ಅಪಾರ ಕಾವ್ಯ ಸಂಸಾರಕ್ಕೆ ಕವಿಯೇ ಬ್ರಹ್ಮ: ಬಿರಾದಾರ
ಸಿಂದಗಿ 18: ಅಪಾರ ಕಾವ್ಯ ಸಂಸಾರಕ್ಕೆ ಕವಿಯೇ ಬ್ರಹ್ಮ. ಅವನಿಗೆ ರುಚಿಸುವಂತೆ ಇಡೀ ವಿಶ್ವವನ್ನೇ ಬದಲಿಸುವವನೇ ಕವಿ ಎಂದು ಆರ್ಶ ವಿದ್ಯಾಲಯದ ಪ್ರಾಚಾರ್ಯ ಶಿವಪ್ಪಗೌಡ ಬಿರಾದಾರ ಹೇಳಿದರು.
ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶನಿವಾರ 88ನೇ ತ್ರಿಮೂರ್ತಿ ಶಿವ ಜಯಂತಿ ಹಾಗೂ ಮಹಾಶಿವರಾತ್ರಿ ಪ್ರಯುಕ್ತ ಹಮ್ಮಿಕೊಂಡ ಶಿವಸ್ಮೃತಿ ಕವಿಗೋಷ್ಠಿ ಹಾಗೂ ಕಾವ್ಯ ಕುಂಚ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾವ್ಯ ಹುಟ್ಟಲು ಮುಖ್ಯ ಕಾರಣ ಪ್ರತಿಭೆ. ಕಾವ್ಯದ ಬೀಜ, ಕಾವ್ಯ ಗಂಗೋತ್ರಿ ಇದು ಕವಿಯಲ್ಲಿರುವ ವಿಶಿಷ್ಟ ಶಕ್ತಿ, ಹೊಳಪು ತೇಜಸ್ಸುಮಯವಾಗಿದೆ.
ಕಾವ್ಯವು ಸತತ ಅಧ್ಯಯನದ ಮೂಲಕ ರಚನೆಯಾಗುತ್ತದೆ. ಆಗ ಕವಿಯು ಚೇತನವನ್ನು ಅಚೇತನವನ್ನಾಗಿ, ಅಚೇತನವನ್ನು ಸಚೇತನವನ್ನಾಗಿ ಮಾಡಬಲ್ಲ ಕವಿಗೆ ವರ್ತಮಾನ, ಭೂತ, ಭವಿಷತ್ತನ್ನು ತೋರುವ ಸಾಮರ್ಥ್ಯವಿರಬೇಕು ಎಂದರು.
ಅತಿಥಿಯಾಗಿ ಸ್ಥಳೀಯ ಎಚ್ ಜಿ ಕಾಲೇಜಿನ ಉಪನ್ಯಾಸಕ ಸಿದ್ದಲಿಂಗ ಕಿಣಗಿ ಮಾತನಾಡಿ, ಆತ್ಮಜ್ಞಾನವನ್ನ ಪಡೆಯಲು, ಬದುಕಿಗೆ ಬೇಕಾಗಿರುವ ನೆಮ್ಮದಿ ಮತ್ತು ಪ್ರೀತಿಯನ್ನು ಪಡೆಯಲು ಆಧ್ಯಾತ್ಮಿಕ ಕೇಂದ್ರಗಳು ಅತ್ಯಂತ ಹೆಚ್ಚು ಪರಿಣಾಮವನ್ನು ಬೀರುತ್ತವೆ. ಸಿಂದಗಿಯಲ್ಲಿ ಓಂ ಶಾಂತಿ ಆಧ್ಯಾತ್ಮಿಕ ಕೇಂದ್ರವು ಮಾಡುತ್ತಿರುವ ವಿವಿಧ ಚಟುವಟಿಕೆಗಳು ಸಮಾಜಮುಖಿಯಾಗಿವೆ ಎಂದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕಿ ಪವಿತ್ರಾಜಿ ಸಾನಿಧ್ಯ ವಹಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ನಡೆದ ಕಾವ್ಯ ಕುಂಚ ಕಾರ್ಯಕ್ರಮದಲ್ಲಿ ಗುಂಡಣ್ಣ ಕುಂಬಾರ, ಕಾವ್ಯ ನಾಯ್ಕ, ಎಮ್.ಬಿ.ಅಲ್ದಿ, ಪ್ರಕಾಶ ಮೂಡಲಗಿ ಮೀನಾಕ್ಷಿ ವಾಗ್ಮೊರೆ, ಡಾ. ಪ್ರಶಾಂತ ಬಮ್ಮಣ್ಣಿ, ಎಸ್.ಸಿ. ಬಿರಾದಾರ, ಮಹಾಂತೇಶ ನಾಗೋಜಿ, ಶೃದ್ದಾನಂದ ಬಡಿಗೇರ, ಪ್ರಹ್ಲಾದ ಜಿಕೆ ಭಾಗವಹಿಸಿದ್ದರು. ಅಲ್ಲದೆ 20 ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು.
ಈ ವೇಳೆ ಮನಗೂಳಿ ಕಾಲೇಜಿನ ಪ್ರಾಚಾರ್ಯ ಡಾ ಬಿ.ಜಿ.ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಾಕುಮಾರ ಕೆಂಪೇಗೌಡ, ವಿಜಯಕುಮಾರ ತೇಲಿ, ತಾನಾಜಿ ಕನಸೆ, ಎಸ್ ಎಸ್ ಬುಳ್ಳಾ, ಎಸ್ ವೈ ಬಿರಾದಾರ, ಶಿಕ್ಷಕ ಸಿದ್ದಲಿಂಗ ಚೌಧರಿ, ಸೀಮಾ, ಕೆ ಎಸ್ ಪತ್ತಾರ, ಎಸ್ ಎಸ್ ಪಾಟೀಲ, ಪರಿಮಳಾ ಪಾಟೀಲ, ಐಶ್ವರ್ಯ, ಮೇಘಾ, ಶಿಕ್ಷಕಿ ಪ್ರೇಮಾ ನಾಯಕ, ಶಿವನಗೌಡ ಬಿರಾದಾರ ಸೇರಿದಂತೆ ಮತ್ತಿತರಿದ್ದರು. ಕುಮಾರಿ ಕಾವ್ಯ ನಾಯಕ ಡಾ ಪ್ರಕಾಶ ರಾಗರಂಜನಿ ಪ್ರಾರ್ಥಿಸಿದರು.