ರಾಷ್ಟ್ರೀಯ

ಕಟ್ಟಡ ದುರಂತ 78 ಜನರ ರಕ್ಷಣೆ,ಮುಂದುವರೆದ ರಕ್ಷಣಾ ಕಾರ್ಯ

ಕಟ್ಟಡ ದುರಂತ 78 ಜನರ ರಕ್ಷಣೆ,ಮುಂದುವರೆದ ರಕ್ಷಣಾ ಕಾರ್ಯ

ಮುಂಬೈ,ಆಗುಸ್ಟ್ 26: ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಐದು ಅಂತಸ್ತಿನ ಕಟ್ಟಡ ದುರಂತದಲ್ಲಿ ಮಡಿದವರ ಸಂಖ್ಯೆ ಏರುತ್ತಿದ್ದು,  ಈವರೆಗೆ 16  ಮಂದಿ ಸಾವನ್ನಪ್ಪಿದ್ದಾರೆ.

7 ಪುರುಷರು ಮತ್ತು 9 ಮಹಿಳೆಯರು ಸೇರಿದಂತೆ 16 ಮಂದಿ ಸಾವನ್ನಪ್ಪಿದ್ದು, ಓರ್ವ ವ್ಯಕ್ತಿ ಕಾಣೆಯಾಗಿದ್ದಾನೆ. ಇದುವರೆಗೆ  78 ಜನರನ್ನು ಪರಿಹಾರ ತಂಡ ರಕ್ಷಣೆ ಮಾಡಿದೆ.

 

ಎನ್ ಡಿ ಆರ್ ಎಫ್ ತಂಡದಿಂದ  ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ಅವಶೇಷಗಳಡಿ ಸಿಲುಕಿರುವವರನ್ನು  ಹೊರೆತೆಗೆಯುವ ಕಾರ್ಯ ನಡೆದಿದೆ  ಎಂದು  ಪೊಲೀಸರು ತಿಳಿಸಿದ್ದಾರೆ.ಈ ನಡುವೆ  ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಸಂದೇಶದಲ್ಲಿ  ಹಾರೈಸಿದ್ದಾರೆ.

 


ಸುದ್ದಿ ಓದಿ