ರಾಷ್ಟ್ರೀಯ

ಛತ್ತೀಸ್ ಗಡದಲ್ಲಿ ಭೀಕರ ಅಪಘಾತ: 7 ಜನರ ದುರ್ಮರಣ

ಛತ್ತೀಸ್ ಗಡದಲ್ಲಿ  ಭೀಕರ  ಅಪಘಾತ:  7 ಜನರ ದುರ್ಮರಣ

ನವದೆಹಲಿ, ಸೆಪ್ಟೆಂಬರ್. 5: ಛತ್ತೀಸ್ಗಢದಲ್ಲಿ ಕಾರ್ಮಿಕರು ಪ್ರಯಾಣ ಮಾಡುತ್ತಿದ್ದ  ಬಸ್ , ಟ್ರಕ್ ಗೆ  ಡಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ  7 ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 

ಈ ಘಟನೆಯಲ್ಲಿ ಇತರೆ  ಇನ್ನು 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಛತ್ತೀಸ್ಗಢದ ರಾಯ್ಪುರದ ಚೆರಿ ಖೇಡಿಯಲ್ಲಿ ಇಂದು ಈ ಘಟನೆ ಸಂಭವಿಸಿದೆ.  

 ಒಡಿಶಾದ ಗಂಜಮ್ನಿಂದ ಗುಜರಾತ್ನ ಸೂರತ್ಗೆ ಬಸ್ ಪ್ರಯಾಣಿಸುತ್ತಿದ್ದಾಗ ಇಂದು ಮುಂಜಾನೆ ಈ ದುರ್ಘಟನೆ ನಡೆದಿದೆ ಅಪಘಾತಕ್ಕೀಡಾಗಿರುವ ಬಸ್ಸಿನಲ್ಲಿ  ಸುಮಾರು 70 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ .  ಈ ದುರ್ಘಟನೆಯಲ್ಲಿ ಮೃತಪಟ್ಟವರಿಗೆ ಒಡಿಶಾ ಸರ್ಕಾರ 2 ಲಕ್ಷ ರೂಪಾಯಿ  ಪರಿಹಾರ ಘೋಷಿಸಿದೆ. 


ಸುದ್ದಿ ಓದಿ