ಶಿಗ್ಗಾವಿ ಕ್ಷೇತ್ರದ ಉಪಚುನಾವಣೆಗೆ ಭರತನಿಗೆ ಬಿಜೆಪಿ ಟಿಕೆಟ್ ಘೋಷಣೆ
ಶಿಗ್ಗಾವಿ 20: ಮಾಜಿ ಸಿ.ಎಂ. ಬಸವರಾಜ ಬೊಮ್ಮಾಯಿ ಹಾವೇರಿ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದು ತಮ್ಮ ಪುತ್ರ ಭರತ ಬೊಮ್ಮಾಯಿಗೆ ಬಿಜೆಪಿ ಟಿಕೇಟ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನಾಗಿ ಭರತ ಬೊಮ್ಮಾಯಿಗೆ ಟಿಕೆಟ್ ಘೋಷಣೆ ಮಾಡಿದೆ.
ಭರತ ಬೊಮ್ಮಾಯಿ ಪರಿಚಯ : ಬಸವರಾಜ ಬೊಮ್ಮಾಯಿ-ಚನ್ನಮ್ಮ ದಂಪತಿಗಳ ಪುತ್ರನಾಗಿರುವ ಭರತ ಬೊಮ್ಮಾಯಿ ಹುಟ್ಟಿದ್ದು 31 ಮಾರ್ಚ್ 1989ರಲ್ಲಿ. ಸಿಂಗಪುರದಲ್ಲಿನ ಪ್ರಸಿದ್ಧ ಸಿಂಗಾಪುರ್ ಮ್ಯಾನೇಜ್ಮೆಂಟ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದಿರುವ ಇವರು ಯುಎಸ್ಎನ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ತಂದೆ ಮಾಜಿ ಸಿಎಂ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ಕೈಗಾರಿಕೋದ್ಯಮಿಯಾಗಿ ಹೆಸರು ಮಾಡಿರುವ ಇವರು ಆಟೋಟೆಕ್ ಇಂಜಿನಿಯರ್ಸ್, ವೆಲ್ಟೆಕ್ ಕಾರ್ೊರೇಷನ್ ಇಂಡಸ್ಟ್ರಿ, ಐಶ್ವರ್ಯ ಎನರ್ಜಿ ಮ್ಯಾಗ್ನೆಟಿಕ್ ಇಂಜಿನಿಯರ್ಸ್ ,ಐ ಬಿ ಕ್ಯೂ ಅಪಾರೆಲ್ಸ್, ಪ್ರಭಂಜನ ಆಪಾರೆಲ್ಸ್ ಸೇರಿದಂತೆ ಅನೇಕ ಉದ್ಯಮಗಳನ್ನು ನಡೆಸುತ್ತಿದ್ದಾರೆ.
ಇವರು ಪ್ರಾರಂಭಿಸಿದ ಮತ್ತು ಅಭಿವೃದ್ಧಿಪಡಿಸಿದ ಕಂಪನಿಗಳು ಯುವ ಮನಸ್ಸುಗಳನ್ನು ಬೆಂಬಲಿಸಲು ಮತ್ತು ಪೋಷಿಸಲು ಸಾರ್ವಜನಿಕ ಖಾಸಗಿ ಪಾಲುದಾರಿಕೆಗಳನ್ನು ಬೆಂಬಲಿಸಲು ಮತ್ತು ಕೇಂದ್ರೀಕರಿಸಲು ಉದಯೋನ್ಮುಖ ಪ್ರವೃತ್ತಿಗಳು ಮತ್ತು ಉತ್ತಮ ಅಭ್ಯಾಸಗಳನ್ನು ಅಳವಡಿಸುತ್ತಿವೆ. ಒಬ್ಬ ವಾಣಿಜ್ಯೋದ್ಯಮಿಯಾಗಿ ಹಂತ ಹಂತವಾಗಿ ಯಶಸ್ಸು ಕಂಡಿರುವ ಇವರು ಇದೀಗ ತಮ್ಮ ಕುಟುಂಬದ ರಾಜಕೀಯ ಹಿನ್ನಲೆಯ ಮೂಲಕ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಪಡೆದಿದ್ದಾರೆ.