ರಾಷ್ಟ್ರೀಯ

ಖಾಸಗಿ ಪ್ರಯೋಗಾಲಯಗಳಲ್ಲಿ ಪ್ಲಾಸ್ಮಾ ಪ್ರತ್ಯೇಕಿಸಲು 7,500 ರೂ ದರ ನಿಗದಿ

ಖಾಸಗಿ ಪ್ರಯೋಗಾಲಯಗಳಲ್ಲಿ ಪ್ಲಾಸ್ಮಾ ಪ್ರತ್ಯೇಕಿಸಲು 7,500 ರೂ ದರ ನಿಗದಿ

ಬೆಂಗಳೂರು, ಅಕ್ಟೋಬರ್ 3: ಕೊರೋನಾ ಸೋಂಕಿಗೆ ಪ್ಲಾಸ್ಮಾ ಚಿಕಿತ್ಸೆ ನೀಡುವ ಪ್ರಕ್ರಿಯೆಯನ್ನು ತೀವ್ರಗೊಳಿಸಲಾಗಿದ್ದು, ಖಾಸಗಿ ಪ್ರಯೋಗಾಲಯಗಳಲ್ಲಿ ರಕ್ತದಿಂದ ಒಂದು ಯೂನಿಟ್ ಪ್ಲಾಸ್ಮ ಸಂಗ್ರಹಿಸಲು ರಾಜ್ಯ ಸರ್ಕಾರ 7,500 ರೂ ದರ ನಿಗದಿಪಡಿಸಿದೆ.

ಕೊರೋನಾ ಸೋಂಕಿನಿಂದ ಗುಣಮುಖರಾದವರು ರಕ್ತದಾನ ಮಾಡಿದರೆ ಸರ್ಕಾರ ಇಂತಹವರಿಗೆ 5 ಸಾವಿರ ರೂ ಪ್ರೋತ್ಸಾಹ ದರ ನಿಗದಿ ಮಾಡಿದೆ. ರಕ್ತದಿಂದ ಪ್ಲಾಸ್ಮಾ ಪ್ರತ್ಯೇಕಿಸಲು ಬಳಸುವ ಕಿಟ್ ಗಳ ದರ ಮತ್ತು ಮಾನವ ಸಂಪನ್ಮೂಲದ ಅಗತ್ಯತೆ ಪರಿಗಣಿಸಿ ಕಳೆದ ತಿಂಗಳು ನಡೆದ ಕಾರ್ಯಪಡೆ ಸಭೆಯಲ್ಲಿ ದರ ನಿಗದಿ ಮಾಡಲು ತೀರ್ಮಾನಿಸಲಾಗಿತ್ತು.

ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ – ಐಸಿಎಂಆರ್ ಅನುಮೋದಿತ ಖಾಸಗಿ ಪ್ರಯೋಗಾಲಯಗಳಲ್ಲಿ ಪ್ಲಾಸ್ಮಾ ಪ್ರತ್ಯೇಕಿಸುವ ಪ್ರಕ್ರಿಯೆಗೆ 7,500 ರೂ ದರ ನಿಗದಿ ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಜಾರಿಮಾಡಿದೆ.

ಸೋಂಕಿನಿಂದ ಗುಣಮುಖರಾದ ರಕ್ಷದಾನಿಗಳಿಗೆ ಐದು ಸಾವಿರ ರೂ ನೀಡುವ ಸರ್ಕಾರದ ಪ್ರಸ್ತಾವನೆಗೂ ಸಹ ತಜ್ಞ ವೈದ್ಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ರಕ್ತದಾನ ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಪ್ರತಿರೋಧ ಲೆಕ್ಕಿಸದೇ ಪ್ರೋತ್ಸಾಹ ಧನ ನೀಡುತ್ತಿದೆ.

ಸುದ್ದಿ ಓದಿ