ರಾಷ್ಟ್ರೀಯ

ಬಿಗಿಪಟ್ಟು ಹಿಡಿದ ರೈತರು , 6 ನೇ ಸುತ್ತಿನ ಮಾತುಕತೆ ರದ್ದು, ಪರಿಹಾರ ಕಾಣದ ಬಿಕ್ಕಟ್ಟು

ಬಿಗಿಪಟ್ಟು ಹಿಡಿದ  ರೈತರು ,  6 ನೇ  ಸುತ್ತಿನ ಮಾತುಕತೆ  ರದ್ದು, ಪರಿಹಾರ ಕಾಣದ ಬಿಕ್ಕಟ್ಟು

ನವದೆಹಲಿ,  ಡಿಸೆಂಬರ್ 9: ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ರಾತ್ರಿ ಪ್ರತಿಭಟನಾ ನಿರತ ರೈತ ನಾಯಕರ ಜೊತೆ  ನಡೆಸಿದ ಸಭೆ ವಿಫಲವಾಗಿದ್ದು, ಪರಿಣಾಮ ಇಂದು ನಡೆಯಬೇಕಿದ್ದ  ಮಹತ್ವದ 6 ನೇಸುತ್ತಿನ ಮಾತುಕತೆ ರದ್ದಾಗಿದೆ  ಎರಡು ಕಡೆಯವರು ತಮ್ಮ ಬಿಗಿ ಪಟ್ಟು ಸಡಿಲ ಮಾಡದ ಕಾರಣ  ಬಿಕ್ಕಟ್ಟು ಎಂದಿನಂತೆ ಮುಂದುವರೆದಿದೆ.

ಕೇಂದ್ರ ಗೃಹ ಸಚಿವರು ಸಚಿವರು ಕರೆದಿದ್ದ  ಮಾತಕತೆ ಸಭೆ ಯಲ್ಲಿ 13ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದು, ಎರಡೂ ಕಡೆಯವರು ಪಟ್ಟು ಸಡಲಿಸದೆ , ತಮ್ಮ ನಿಲುವುಗಳಲ್ಲಿ ದೃಢವಾಗಿ ಉಳಿದಿದ್ದರಿಂದ 'ಅನೌಪಚಾರಿಕ ಮಾತುಕತೆ  ವಿಫಲವಾಗಿದೆ.   

ಕಾಯ್ದೆಗಳಿಗೆ ಮಾಡಬಹುದಾದದ ತಿದ್ದುಪಡಿಗಳ ಬಗ್ಗೆ ಲಿಖಿತ ಭರವಸೆ ಕೊಡಲಾಗುವುದು ಎಂದು ಅಮಿತ್ ಶಾ ಮನವಿ ಮಾಡಿದರೂ, ರೈತ ಮುಖಂಡರು ಕಾಯ್ದೆಗಳನ್ನು ಕೂಡಲೇ  ರದ್ದು ಮಾಡಬೇಕೆಂದು ಬಿಗಿ ಪಟ್ಟುಹಿಡಿದರು.ಇಂದು  ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ನೇತೃತ್ವದ ಸಚಿವರ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಿಗದಿಯಾಗಿದ್ದರೂ, ರೈತ ಮುಖಂಡರು ತಾವು ಭಾಗವಹಿಸುವುದಿಲ್ಲ ಮತ್ತು ಸರ್ಕಾರದ ಪ್ರಸ್ತಾಪವನ್ನು ಚರ್ಚಿಸಲು ಮೊದಲು ಸಭೆ ಸೇರಿ ನಂತರವೇ  ಮುಂದಿನ ಕ್ರಮ, ಹೆಜ್ಜೆ ಎಂದು ಹೇಳಿದ್ದಾರೆ.

 ಈಗಾಗಲೇ ಸಿಂಘು ಗಡಿಯಲ್ಲಿ ಸಾವಿರಾರು ರೈತರು ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಜಾರಿಗೆ ತಂದಿರುವ ಮೂರು  ಕೃಷಿ ಸಂಬಂಧಿತ ಕಾಯ್ದೆಗಳನ್ನು ಕೂಡಲೇ ರದ್ದು ಮಾಡಲೇಬೇಕೆಂದು ಪಟ್ಟು ಹಿಡಿದಿದ್ದಾರೆ.

ರೈತ ಸಂಘಟನೆಗಳು  ಕರೆ ನೀಡಿದ್ದ ನಿನ್ನೆಯ ಭಾರತ ಬಂದ್ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ದೇಶದ ಬಹುತೇಕ ರಾಜ್ಯಗಳಿಗೆ ಬಂದ್ ಬಿಸಿ ತಟ್ಟಿತು. ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಹಲವು ರಾಜ್ಯಗಳಲ್ಲಿ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದು, ಕೆಲವೆಡೆ ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆ ಸಭೆ,  ರಸ್ತೆ -ರೈಲು ತಡೆ ನಡೆಸಿದ್ದರು. 

ಸುದ್ದಿ ಓದಿ