ಶಿಗ್ಗಾವ್

ವನಹಳ್ಳಿ ಶಾಲೆಯಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವ

ವನಹಳ್ಳಿ ಶಾಲೆಯಲ್ಲಿ 68ನೇ ಕರ್ನಾಟಕ  ರಾಜ್ಯೋತ್ಸವ

ಶಿಗ್ಗಾವಿ 03: ತಾಲೂಕಿನ ವನಹಳ್ಳಿ ಪ್ಲಾಟ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜಯ ಕರ್ನಾಟಕ ಸಂಘಟನೆ ಶಿಗ್ಗಾವಿ ತಾಲೂಕಾ ಘಟಕ ಹಾಗೂ ವನಹಳ್ಳಿ ಗ್ರಾಮ ಘಟಕ ವತಿಯಿಂದ 68ನೇ ಕರ್ನಾಟಕ  ರಾಜ್ಯೋತ್ಸವದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪೆನ್‌ಗಳನ್ನು ವಿತರಿಸಿ ಆಚರಿಸಲಾಯಿತು. 

ಶಿಗ್ಗಾವಿ ತಾಲೂಕ ಜಯಕರ್ನಾಟಕ ಸಂಘಟನೆ ಅದ್ಯಕ್ಷ ಹನುಮಂತಪ್ಪ ಬಂಡಿವಡ್ಡರ, ತಾಲೂಕ ಶಹರ ಘಟಕ ಅಧ್ಯಕ್ಷ ನಿಂಗಪ್ಪ ಶಿವಳ್ಳಿ, ಗ್ರಾಪಂ ಅದ್ಯಕ್ಷ ಗಂಗಾಧರ ಕಲ್ಮಠ, ತಾಲೂಕ ಸಹಕಾರ್ಯದರ್ಶಿ ಗೋವಿಂದಪ್ಪ ವಾಲಿಕಾರ, ವನಹಳ್ಳಿ ಗ್ರಾಮ ಘಟಕ ಅಧ್ಯಕ್ಷ ಯಲ್ಲಪ್ಪ ವಡ್ಡರ, ಎಸ್‌ಡಿಎಂಸಿ ಉಪಾಧ್ಯಕ್ಷ ಹಾಲಪ್ಪ ವಡ್ಡರ, ಶಾಲೆಯ ಹಳೆ ವಿದ್ಯಾರ್ಥಿಗಳಾದ ಬಸವರಾಜ್ ಬಡ್ನಿ, ಪ್ರಥಮ ದರ್ಜೆ ಗುತ್ತಿಗೆದರಾದ ಮಂಜುನಾಥ ಬಡ್ನಿ ಸೇರಿದಂತೆ ವನಹಳ್ಳಿ ಗ್ರಾಮ ಪಂಚಾಯತಿಯ ಪಿಡಿಓ ಹಾಗೂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ