ರಾಣೆಬೆನ್ನೂರ

67ನೇ ಕರ್ನಾಟಕ ರಾಜ್ಯೋತ್ಸವ: ಆಟೋ ಚಾಲಕರಿಗೆ ಸಮವಸ್ತ್ರಗಳ ವಿತರಣೆ

67ನೇ ಕರ್ನಾಟಕ ರಾಜ್ಯೋತ್ಸವ: ಆಟೋ  ಚಾಲಕರಿಗೆ ಸಮವಸ್ತ್ರಗಳ ವಿತರಣೆ

ರಾಣೆಬೆನ್ನೂರು 01:  ನಾಡು ನುಡಿ ಸಂಸ್ಕೃತಿ ಭಾಷೆ ಸಂರಕ್ಷಣೆಯಲ್ಲಿ ಮತ್ತು ಅವುಗಳ ಪಾಲನೆ ಪೋಷಣೆಯಲ್ಲಿ ಆಟೋ ಚಾಲಕರ ಮತ್ತು ಮಾಲಕರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಪತ್ರಕರ್ತ ಕೆ. ಎಸ್‌.ನಾಗರಾಜ್ ಹೇಳಿದರು. ಅವರು ಮಂಗಳವಾರ ಇಲ್ಲಿನ ಸರ್ಕಾರ ಹೆರಿಗೆ ಆಸ್ಪತ್ರೆ ಬಳಿಯ ಚೌಡೇಶ್ವರಿ ದೇವಿ ಆಟೋ ಚಾಲಕರ ಸಂಘವು ಆಯೋಜಿಸಿದ್ದ 67ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ, ನಗರಸಭಾಧ್ಯಕ್ಷ ರೂಪಾ ರಾಘವೇಂದ್ರ ಚಿನ್ನಿಕಟ್ಟಿ ಅವರು ಉಡುಗೊರೆಯಾಗಿ ನೀಡಿದ, ಚಾಲಕರ ಸಮವಸ್ತ್ರ  ವಿತರಿಸಿ ಮಾತನಾಡಿದರು. ಆಟೋ ಚಾಲಕರು ಮತ್ತು ಮಾಲಕರು, ನಾಡು ಸೇರಿದಂತೆ  ದೇಶದಾದ್ಯಂತ ತಮ್ಮ ಆಟೋಗಳ ಮೂಲಕ, ಈ ದೇಶದ ಮತ್ತು ನಾಡಿನ  ಭಾಷೆ, ಸಂಸ್ಕೃತಿ  ಮತ್ತು ನಟ- ನಟಿಯರ ಚಿತ್ರಗಳ ಪ್ರಚಾರದಲ್ಲಿ, ಯಾವುದೇ ಪ್ರತಿ ಫಲಾಪೇಕ್ಷೆ ಬಯಸದೆ, ಸದ್ದಿಲ್ಲದೆ ತಮ್ಮ ಕಾಯಕವನ್ನು ಮಾಡುತ್ತಾರೆ ಅವರು ನಿಜವಾದ ಸಮಾಜ ಸೇವಕರು. ಎಂದರು. ಹಗಲು,ರಾತ್ರಿ ಮಳೆ, ಚಳಿ, ಎನ್ನದೆ ತಮ್ಮ ಕಾಯಕದ ಮೂಲಕ, ಪ್ರಯಾಣಿಕರ ಸೇವೆ ಮಾಡುತ್ತಾರೆ. ಅವರಿಗೂ ಸಹ ಅನೇಕ ಸಮಸ್ಯೆಗಳಿವೆ. ಆಟೋ ಚಾಲನೆಯ ಮೂಲಕ, ಉದ್ಯೋಗ ಸೃಷ್ಟಿಸಿಕೊಂಡಿರುವ  ಅವರಿಗೆ, ಸರಕಾರಗಳು ಸಮಸ್ಯೆಗಳನ್ನು ಆಲಿಸಿ ಅವರಿಗೂ ಸಹ, ಇತರರಂತೆ ಸಮಾನತೆಯ ಬದುಕು ಸಾಗಿಸಲು ಸಹಾಯ ಹಸ್ಥ.ನೀಡಬೇಕಾದ ಇಂದಿನ ಅಗತ್ಯವಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ವೀರೇಶ್ ಬಳ್ಳಾರಿ ಅವರು, ನಿತ್ಯವೂ ಬದುಕಿನ ಬಂಡಿ ಎಳೆಯಲು ಕಾರ್ಮಿಕರಾಗಿ ದುಡಿಯುವ ನಮಗೆ ಇದುವರೆಗೂ ಸರಕಾರದಿಂದ ಅಥವಾ ನಗರಸಭೆಯಿಂದ ಯಾವುದೇ ಸೌಲಭ್ಯಗಳು ದೊರಕಿಲ್ಲ.  

ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತೇವೆ, ನಗರಸಭೆ, ಶಾಸಕರು ನಮ್ಮ ಸಮಸ್ಯೆಗಳಿಗೆ ಸ್ಪಂದಿಸಬೇಕು, ಸರ್ಕಾರ ರಾಜ್ಯದಲ್ಲಿ ಆಟೋ ಚಾಲಕ ಮಾಲಕರ ಕ್ಷಮಾಭಿವೃದ್ಧಿ  ಸಂಘ, ಸ್ಥಾಪಿಸಬೇಕು, ಅಗತ್ಯವಿರುವವರಿಗೆ ಆಶ್ರಯ ಮನೆಗಳು ನೀಡಬೇಕು. ಮಕ್ಕಳ ಕಲ್ಯಾಣಕ್ಕಾಗಿ  ಸಮುದಾಯ ಭವನ ನಿರ್ಮಿಸಬೇಕು ಎಂದು ಮನವಿ ಮಾಡಿದರು. ಮುಖ್ಯ ಅತಿಥಿಯಾಗಿದ್ದ ವಂದೇ ಮಾತರಂ ಯುವಕ ಸ್ವಯಂ ಸೇವಾ ಸಂಸ್ಥೆ, ಅಧ್ಯಕ್ಷ ಜಗದೀಶ್ ಕೆರೋಡಿ ಅವರು, ಸರ್ಕಾರ ಮಟ್ಟದಲ್ಲಿ,, ಆಟೋ ಚಾಲಕರ ಬೇಡಿಕೆ ಈಡೇರಿ ಕೆಗಾಗಿ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ, ಸಂಘಟಿತ ವರ್ಗವಿದಾಗಿದ್ದರಿಂದ ನಮ್ಮನ್ನು ಕಡೆಗಣಿಸಲಾಗುತ್ತಿದೆ ಕೂಡಲೇ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ಮಂಜು ಗಳಗನಾಥ, ರವಿ ಕೆರೋಡಿ, ಚಿಕ್ಕಪ್ಪ  ಚಕ್ರಸಾಲಿ, ಧರ್ಮಪ್ಪ ಬಡಿಗೇರ್,  ಮಂಜಪ್ಪ ಹಾವೇರಿ, ಮಣಿಕಂಠ ಚಕ್ರಸಾಲಿ, ಮಾಲತೇಶ್ ವಡ್ಡರ, ನಾಗರಾಜ ಓಲೆಕಾರ್,ಯಲ್ಲಪ್ಪ ಯಡಚಿ, ಮೌನೇಶ ಹಳ್ಳಿ,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಅಜ್ಜಪ್ಪ ನಾಯಕ್ ಸ್ವಾಗತಿಸಿದರು. ಪ್ರವೀಣ್ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗಪ್ಪ ಅಡಿವಿ ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ