ಕರೂರು ಗ್ರಾಮದಲ್ಲಿ 66ನೇ ಕನ್ನಡ ರಾಜ್ಯೋತ್ಸವ
ಲೋಕದರ್ಶನ ವರದಿ
ರಾಣೇಬೆನ್ನೂರು 03: ಕರ್ನಾಟಕ ರಾಜ್ಯೋತ್ಸವ ಕೇವಲ ನವೆಂಬರ್ 1 ಕ್ಕೆ ಮಾತ್ರ ಸಿಮಿತವಾಗಬಾರದು, ಕನ್ನಡಿಗರ ಈ ಹಬ್ಬವು ನಿತ್ಯ ನಿರಂತರವಾಗಿರಬೇಕು. ಮನೆ ಮತ್ತು ಮನಗಳಲ್ಲಿ ವಿಜ್ರಂಭಿಸಬೇಕು ಅಂದಾಗ ಮಾತ್ರ ಕನ್ನಡಿಗರು ಸ್ವಾಭಿಮಾನಿಗಳಾದಂತಾಗುತ್ತದೆ. ಎಂದು ಜಿಲ್ಲಾ ಕನ್ನಡ ರಕ್ಷಣ ವೇದಿಕೆ ಮಹಿಳಾ ಅಧ್ಯಕ್ಷೆ ಸುನೀತಾ ಭಾರ್ಕಿ ಹೇಳಿದರು.
ಅವರು ತಾಲೂಕಿನ ಕರೂರು ಗ್ರಾಮದ ಐಎಪಿ ಫಾರಂ ಸೆರವ್ಸ್ ಪ್ರೈ. ಲಿ ಕಂಪನಿಯಲ್ಲಿ ಆಯೋಜಿಸಲಾಗಿದ್ದ 66ನೇ ಕನ್ನಡ ರಾಜ್ಯೋತ್ಸವ ದ್ವಜಾರೋಹಣ ನೆರವೆರಿಸಿ ಮಾತನಾಡಿದರು. ಕನ್ನಡ ನಾಡು ಶ್ರೀಗಂಧದ ಬಿಡು, ಕರುನಾಡು ಕನ್ನಡಾಂಭೆಯ ನಾಡು, ಅಲ್ಲಲ್ಲಿ ಚದುರಿ ಹೂಗಿದ್ದ ಕನ್ನಡ ನಾಡು ಮತ್ತು ಭಾಷಿಕರನ್ನು ಒಂದುಗೂಡಿಸಿ ಕರ್ನಾಟಕ ಎಕಿಕರಣವಾಗಿ ದೇಶದಲ್ಲಿ ರಾಜ್ಯವು ಉನ್ನತ ಹೆಸರಿನಲ್ಲಿ ಸ್ಥಾನವನ್ನು ಪಡೆದು ಗುರುತಿಸಿಕೂಂಡಿದೆ. ಕನ್ನಡ ಮತ್ತು ಕನ್ನಡ ತನವನ್ನು ಉಳಿಸಿ ಬೆಳೆಸಿಕೂಂಡು ಸಾಗಿದಾಗ ಮಾತ್ರ ನಮ್ಮ ತನವನ್ನು ನಾವು ಅಳವಡಿಸಿಕೂಂಡಂತಾಗುತ್ತದೆ ಎಂದರು.
ಚಂದ್ರಶೇಖರ ಕುಂಬಳೂರು, ಗೀರೀಶ ಎಸ್.ಎಂ. ಬಸವಂತ ಜಾಧವ್, ಮಾಲತೇಶ್, ಕಿರಣಕುಮಾರ, ಚಂದ್ರಶೇಖರ, ಪ್ರವೀಣ, ಮಂಜುಳಾ, ಅಶ್ವಿನಿ ಸಿ.ಕೆ, ನಾಗಪ್ಪ ಕಕ್ಕರಗೊಳ್ಳ ಸೇರಿದಂತೆ ಮತ್ತಿತರರ ಗಣ್ಯರು ಗ್ರಾಮದ ಮುಖಂಡರು ಪಾಲ್ಗೂಂಡಿದ್ದರು.