ರಾಷ್ಟ್ರೀಯ

ಕೋವಿಡ್ 19 : ದೇಶಾದ್ಯಂತ 24 ಗಂಟೆಯಲ್ಲಿ 60,975 ಹೊಸ ಪ್ರಕರಣ, 848ಕ್ಕೂ ಅಧಿಕ ಸಾವು

ಕೋವಿಡ್ 19 : ದೇಶಾದ್ಯಂತ 24 ಗಂಟೆಯಲ್ಲಿ 60,975 ಹೊಸ ಪ್ರಕರಣ, 848ಕ್ಕೂ ಅಧಿಕ ಸಾವು

ನವದೆಹಲಿ, ಆಗುಸ್ಟ್ 25: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 60,975 ಹೆಚ್ಚು ಕೋವಿಡ್ -19 ಪ್ರಕರಣಗಳು ಮತ್ತು 848 ಸಾವುಗಳು ದಾಖಲಾಗಿದ್ದರೆ, ಚೇತರಿಕೆ ಪ್ರಮಾಣವು ಶೇಕಡಾ 75.92 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಇತ್ತೀಚಿನ ಸೇರ್ಪಡೆಗಳೊಂದಿಗೆ, ಒಟ್ಟು ಪ್ರಕರಣಗಳ ಸಂಖ್ಯೆ 31,67,323 ತಲುಪಿದ್ದರೆ, ಸಾವಿನ ಸಂಖ್ಯೆ 58,390 ಕ್ಕೆ ಏರಿದೆ.

ಸಚಿವಾಲಯದ ನವೀಕರಣದ ಪ್ರಕಾರ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 7,04,348 ಮತ್ತು 24,04,585 ರಷ್ಟು ಚೇತರಿಕೆಯಾಗಿದೆ. .

 ಕಳೆದ 24 ಗಂಟೆಗಳಲ್ಲಿ 9,25,383 ಪರೀಕ್ಷೆಗಳನ್ನು ನಡೆಸಲಾಗಿದ್ದು, ಈವರೆಗೂ ಒಟ್ಟು 3,68,27,520 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಾಹಿತಿ ನೀಡಿದೆ. 

ಹೆಚ್ಚು ಪೀಡಿತವಾಗಿರುವ ಮಹಾರಾಷ್ಟ್ರದಲ್ಲಿ ಸೋಂಕು ಪ್ರಕರಣಗಳು 6,93,398 ಕ್ಕೆ ಏರಿದರೆ, ತಮಿಳುನಾಡಿನಲ್ಲಿ 3,85,352, ಆಂಧ್ರಪ್ರದೇಶದಲ್ಲಿ 3,61,712 ಪ್ರಕರಣಗಳಿವೆ. 

ಸಾವಿನ ಸಂಖ್ಯೆ ಮಹಾರಾಷ್ಟ್ರದಲ್ಲಿ 22,782, ತಮಿಳುನಾಡಿನಲ್ಲಿ 6,614 ಮತ್ತು ಆಂಧ್ರಪ್ರದೇಶದಲ್ಲಿ 3,368 ಕ್ಕೆ ಏರಿದೆ.

ಜಾಗತಿಕವಾಗಿ,  59 ಲಕ್ಷಕ್ಕೂ ಹೆಚ್ಚು ಸೋಂಕುಗಳೊಂದಿಗೆ ಅಮೆರಿಕ ಮೊದಲ ಸ್ಥಾನದಲ್ಲಿದ್ದು, 2ನೇ ಸ್ಥಾನದಲ್ಲಿರುವ ಬ್ರೆಜಿಲ್  36 ಲಕ್ಷ ಸೋಂಕು ಪ್ರಕರಣ ದಾಖಲಿಸಿದೆ. ಅಮೆರಿಕ ಅತಿ ಹೆಚ್ಚು 1.80 ಲಕ್ಷ ಸಾವುನೋವುಗಳನ್ನು ದಾಖಲಿಸಿದರೆ, ಬ್ರೆಜಿಲ್ನಲ್ಲಿ 1.15 ಲಕ್ಷ ಸಾವುಗಳು ದಾಖಲಾಗಿವೆ.

ಭಾರತವು, ಸೋಂಕಿನ ವಿಷಯದಲ್ಲಿ ಮೂರನೇ ಸ್ಥಾನದಲ್ಲಿ ಮತ್ತು ಸಾವುನೋವುಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 

ಸುದ್ದಿ ಓದಿ