ರಾಷ್ಟ್ರೀಯ

ಕೋವಿಡ್ ಸೋಂಕು : ಒಂದೇ ದಿನ 60 ಸಾವಿರ ಚೇತರಿಕೆ ದಾಖಲು

ಕೋವಿಡ್ ಸೋಂಕು : ಒಂದೇ ದಿನ 60 ಸಾವಿರ ಚೇತರಿಕೆ ದಾಖಲು

ನವದೆಹಲಿ, ಆಗುಸ್ಟ್ 19: ದೇಶದಲ್ಲಿ ಕೋವಿಡ್ 19 ನಿಂದ ಚೇತರಿಸಿಕೊಂಡವರ ಸಂಖ್ಯೆ ಬುಧವಾರ 60 ಲಕ್ಷ ದಾಟಿದೆ. 24 ಗಂಟೆಗಳಲ್ಲಿ 60,091 ರಷ್ಟು ದಾಖಲೆ ಪ್ರಮಾಣದ ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ಮಂಗಳವಾರದಿಂದ 60,091 ಕೋವಿಡ್ ರೋಗಿಗಳನ್ನು ಗುಣಪಡಿಸಲಾಗಿದೆ ಮತ್ತು ದೇಶಾದ್ಯಂತ ಚೇತರಿಕೆಯ ಪ್ರಮಾಣವು ಈಗ ಶೇಕಡ 73.64 ಕ್ಕೆ ಸುಧಾರಿಸಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಸಕ್ರಿಯ ಪ್ರಕರಣಗಳು 3,348 ರಷ್ಟಿದ್ದು, ಪ್ರಸ್ತುತ 6,76,514 ಸಕ್ರಿಯ ಪ್ರಕರಣಗಳಿಗೆ ನೆಲೆಯಾಗಿದೆ. ಒಂದೇ ದಿನ ದೇಶಾದ್ಯಂತ ಸಾಂಕ್ರಾಮಿಕ ರೋಗದಿಂದಾಗಿ 1092 ಸಾವುಗಳು ಸಂಭವಿಸಿದೆ. ಮೃತರ ಒಟ್ಟು ಸಂಖ್ಯೆ 52,889 ಕ್ಕೆ ತಲುಪಿದ್ದರೆ, ಶೇಕಡಾವಾರು ಕೋವಿಡ್ ಸಾವಿನ ಪ್ರಮಾಣ 1.91 ರಷ್ಟಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಕಾರ, ಮಂಗಳವಾರದಿಂದ 3,17,42,782 ಕೋವಿಡ್ ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದೆ. ಮಹಾರಾಷ್ಟ್ರವು ಗರಿಷ್ಠ 1,56,920 ಸಕ್ರಿಯ ಪ್ರಕರಣ ಹೊಂದಿದ್ದು, ಸಾವಿನ ಸಂಖ್ಯೆ 20,687 ಕ್ಕೆ ತಲುಪಿದೆ. ಇದರೊಂದಿಗೆ ದೇಶದಲ್ಲಿ ಇಲ್ಲಿಯವರೆಗೆ ಅತಿಹೆಚ್ಚು ಸಂಖ್ಯೆಯ ಕೋವಿಡ್ ಪ್ರಕರಣಗಳನ್ನು ಹೊಂದಿರುವ ರಾಜ್ಯವಾಗಿದೆ.

ಸುದ್ದಿ ಓದಿ