ಯಕ್ಸಂಬಾ ಅಭಿವೃದ್ಧಿಗೆ 6.84 ಕೋಟಿ ರೂ. ಮಂಜೂರು: ಶಾಸಕ ಗಣೇಶ
ಲೋಕದರ್ಶನ ವರದಿ
ಚಿಕ್ಕೋಡಿ 28: ತಾಲೂಕಿನ ಯಕ್ಸಂಬಾ ಪಟ್ಟಣದ ಸಮಗ್ರ ಅಭಿವೃದ್ಧಿ ಮಾಡುವ ಸಂಕಲ್ಪ ನಮ್ಮದಾಗಿದೆ. ಇಡೀ ರಾಜ್ಯದಲ್ಲಿ ಯಕ್ಸಂಬಾ ಪಟ್ಟಣನವನ್ನು ಹೈಟಿಕ ನಗರವನ್ನಾಗಿಸಲು ಪಣತೊಡಲಾಗಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.
ಯಕ್ಸಂಬಾ ಪಟ್ಟಣದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಪಟ್ಟಣ ಪಂಚಾಯತಿ ಚುನಾವಣೆ ವೇಳೆ ನಗರದ ಜನರಿಗೆ ನೀಡಿದ ವಾಗ್ದಾನದಂತೆ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ನೇತೃತ್ವದಲ್ಲಿ ಪಟ್ಟಣ ಪಂಚಾಯತಿ ಸದಸ್ಯರನ್ನೊಳ್ಳಗೊಂಡು ಅಭಿವೃದ್ಧಿ ಕಾರ್ಯ ಭರದಿಂದ ನಡೆಯಲಿವೆ ಎಂದರು.
ಯಕ್ಸಂಬಾ ಪಟ್ಟಣದಿಂದ ಮಲಿಕವಾಡ ಗ್ರಾಮಕ್ಕೆ ಹೋಗುವ ಮಧ್ಯದಲ್ಲಿ ಇರುವ ಹಳ್ಳಕ್ಕೆ ಹೊಸದಾಗಿ ಸಿಡಿ ನಿರ್ಮಿಸಿ ಅಪೋರ್ಚ ರಸ್ತೆ ನಿರ್ಮಾಣಕ್ಕೆ 1.54 ಕೋಟಿ ರೂ. ಯಕ್ಸಂಬಾ ಪಟ್ಟಣದ ಮಲಿಕವಾಡ ಮುಖಾಂತರ ಮಲಿಕವಾಡ-ದತ್ತವಾಡ ಬ್ರಿಜ್ ಕಂ ಬಾಂದಾರ ನಿರ್ಮಾಣಕ್ಕೆ 3.34 ಕೋಟಿ ರೂ ಹಾಗೂ ಯಕ್ಸಂಬಾ ಚಿಕ್ಕೋಡಿ ರಸ್ತೆಯಿಂದ ಕರ್ನಾಟಿಕ ಕೋಡಿ ಮತ್ತು ಚೆನ್ನಮ್ಮ ನಗರದ ಕಾಲೋನಿಯಲ್ಲಿ ರಸ್ತೆ ನಿರ್ಮಾಣಕ್ಕೆ 3 ಕೋಟಿ ರೂ ಹೀಗೆ ಒಟ್ಟು 6.84 ಕೋಟಿ ರೂ ಮಂಜೂರಾಗಿದೆ ಎಂದರು.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೂಕ್ತ ನಿಗಾ ವಹಿಸಿ ಗುತ್ತಿಗೆದಾರರ ಕಡೆಯಿಂದ ಗುಣಮಟ್ಟದ ರಸ್ತೆ ಕಾಮಗಾರಿ ನಿರ್ಮಿಸಬೇಕು ಎಂದು ಸೂಚಿಸಿದರು.
ಪಟ್ಟಣ ಪಂಚಾಯತ್ ಸದಸ್ಯರಾದ ಸುನೀಲ ಸಪ್ತಸಾಗರೆ. ಉಮೇಶ ಸಾತವಾರ. ಚಿದಾನಂದ ಬೆಳ್ಳೆ. ಜಂಬು ಮಕಾನಾದಾರ. ಮಾರುತಿ ಮಾನೆ. ದೀಲೀಪ ದೇಸಾಯಿ. ರಾಜು ಬಾಗೇವಾಡಿ ಮುಂತಾದವರು ಇದ್ದರು.