ರಾಜಗುರು ಯೋಗಿ ರಾಜೇಂದ್ರ ಶ್ರೀಗಳ 5ನೇ ವರ್ಷದ ಪುಣ್ಯಾರಾಧನೆ
ಶಿಗ್ಗಾವಿ 16: ಗಂಗಿಭಾವಿಯ ಮಠಕ್ಕೆ ತನ್ನದೇ ಆದ ಪರಂಪರೆ ಇದೆ ಅನೇಕ ಹಿರಿಯರು ಮಠದ ಅಭಿವ್ರದ್ದಿಗಾಗಿ ಶ್ರಮಿಸಿದ್ದಾರೆ ಅಂತಹ ಪೂಜ್ಯರಲ್ಲಿ ರಾಜಯೋಗಿಂದ್ರ ಮಹಾಸ್ವಾಮಿಜಿಗಳು ಒಬ್ಬರಾಗಿದ್ದಾರೆ ಎಂದು ಷ.ಬ್ರ. ಗೋಸಲ ಚನ್ನಬಸವೇಶ್ವರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಗಂಗಿಭಾವಿ ಸುಕ್ಷೇತ್ರದ ರಾಜಗುರು ಯೋಗಿ ರಾಜೇಂದ್ರ ಮಹಾಸ್ವಾಮಿಗಳ 5 ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ವಹಿಸಿ ಮಾತನಾಡಿದವರು ಮಠದ ಬೆಳವಣಿಗೆಗೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಅಂತಹ ಮಹಾಸ್ವಾಮೀಜಿಗಳ ಆಶೀರ್ವಾದ ನಮ್ಮೆಲ್ಲರ ಮೇಲೆ ಸದಾ ಇರತ್ತೆ ಅವರು ಅಪಾರ ಭಕ್ತ ಸಮೂಹವನ್ನು ಹೊಂದಿದ್ದರು ಹಾಗಾಗಿ ಇಂದು ತಾವೆಲ್ಲರು ಸೇರಿ ಅವರ ಗದ್ದುಗೆ ನಿರ್ಮಾಣ ಕಾರ್ಯಕ್ಕೆ ತನು ಮನ ಧನದಿಂದ ಸಹಾಕಾರ ನೀಡಬೇಕೆಂದರು.
ಸಮ್ಮುಖವನ್ನು ಶಿಕಾರಿಪೂರ ತಾಲೂಕು ಸಾಲೂರ ಮಠದ ಷ.ಬ್ರ ಗುರುಲಿಂಗ ಜಂಗಮ ಮಹಾಸ್ವಾಮಿಗಳು ವಹಿಸಿ ಮಾತನಾಡಿ ಪೂಜ್ಯರಾದ ರಾಜಯೋಗಿಂದ್ರ ಮಹಾಸ್ವಾಮಿಜಿಗಳು ಈ ಭಾಗದಲ್ಲಿ ಸಾಕಷ್ಟು ಅನುಷ್ಟಾನವನ್ನು ಮಾಡಿ ಭಕ್ತರ ಶಕ್ತಿಯಾಗಿ ಕಾಯಕ ನಿಷ್ಟರಾಗಿದ್ದರು ಅಂಥವರ ಮಾರ್ಗದಲ್ಲಿ ನಾವೂ ನಿವೆಲ್ಲರು ನಡೆಯೋಣ ಎಂದರು.
ರುದ್ರಾಭಿಷೇಕ, ಅಷ್ಟೋತ್ತರ ಶತನಾಮಾವಳಿ, ಮಹಾ ಮಂಗಳಾರುತಿ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ರೇಣುಕಾರಾದ್ಯಾ ಹಿರೇಮಠ, ಮೃತ್ಯುಂಜಯ ಹಿರೇಮಠ, ಇವರಿಂದ ಜರುಗಿದವು. ನಂತರ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಚೆನ್ನಪ್ಪ ಬಿಂದ್ಲಿ, ಮಹಾದೇವಯ್ಯ ಹಿರೇಮಠ, ನೀಲಕಂಠಗೌಡ ಪಾಟೀಲ, ಅರ್ಜಪ್ಪ ಲಮಾಣಿ, ಮಹಾದೇವಪ್ಪ ದೆವತಿ, ಈರಣ್ಣಾ ಡವಗಿ, ಬಸಣ್ಣ ಬರದೂರ, ಚಂದ್ರು ಬಾರಿಗಿಡದ, ಚನ್ನಬಸಯ್ಯ ಹಿರೇಮಠ, ತಾಲೂಕಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಕಾಳಪ್ಪ ಬಡಿಗೇರ, ನ್ಯಾಯವಾದಿ ಬಸವರಾಜ ರಾಗಿ, ಪ್ರಕಾಶ ಹಾದಿಮನಿ, ಡಾ, ಬಿ.ಸಿ.ಹಿರೇಮಠ, ಡಾ,ಮಂಜುಳಾ ಹಿರೇಮಠ, ಬಸನಗೌಡ ಪಾಟೀಲ, ನಿಂಗಪ್ಪ ಓಲೇಕಾರ(ಕೆಂಗಾಪೂರ), ಪತ್ರಕರ್ತ ಬಿ.ಎಸ್.ಹಿರೇಮಠ, ಆಸ್ಪಕಲಿ ಮತ್ತೇಖಾನ, ಸೇರಿದಂತೆ ಹೊಸೂರ, ಯತ್ನಳ್ಳಿ, ಅ.ಮ.ಕೋಪ್ಪ ಗ್ರಾಮದ ಸದ್ಬಕ್ತರು ಪಾಲ್ಗೊಂಡಿದ್ದರು. ಸಹ ಪ್ರಾದ್ಯಾಪಕ ಶರೀಫ್ ಮಾಕಪ್ಪನವರ ಕಾರ್ಯಕ್ರಮ ನಿರ್ವಹಿಸಿದರು.