ಮಹಾತ್ಮ ಗಾಂಧಿಯವರ ಕನಸಿನ ಕೂಸು ಎಂದರೆ ಎನ್ ಎಸ್ ಎಸ್
ಶಿಗ್ಗಾವಿ 26: ಶ್ರೀ ರಂಭಾಪುರೀ ಜಗದ್ಗುರು ವೀರಗಂಗಾಧರ ಸ್ವ ಪ ಪೂ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ 54 ನೇ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು,
ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾಕ್ಟರ್ ಡಿ ಸಿ ಪಾವಟೆ ಪ್ರಶಸ್ತಿ ವಿಜೇತ ಡಾ ಸಿ ಎಸ್ ಕುಮ್ಮೂರ ಪ್ರಾಚಾರ್ಯರು ಸ ಪ್ರ ಕಾಲೇಜು ಶಿಗ್ಗಾವಿ, ಇವರು ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು "ಮಹಾತ್ಮ ಗಾಂಧಿಯವರ ಕನಸಿನ ಕೂಸು ಎಂದರೆ ಎನ್ ಎಸ್ ಎಸ್ ಮತ್ತು ರಾಷ್ಟ್ರ ನಿರ್ಮಾಣದ ಮೊದಲ ಹೆಜ್ಜೆ ಎಂದರೆ ರಾಷ್ಟ್ರ ಸೇವಾ ಇಂತಹ ದೇಶ ಸೇವಾ ಮನೋಭಾವದಿಂದ ಯುವಕರು ತಮ್ಮನ್ನು ತಾವು ತೊಡಗಿಸಿಕೊಂಡು ನಡದರೆ ಗಾಂಧಿಯವರ ಕನಸಿನ ಕೂಸು ಹೆಮ್ಮರವಾಗಿ ಬೆಳೆದು ಸದೃಢ ಭಾರತ ನಿರ್ಮಾಣ ನಿಮ್ಮ ಕೈಯಲ್ಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪದವಿ ಕಾಲೇಜಿನ ಪ್ರಾಚಾರ್ಯ ಡಾ. ತೊಂಡಿಹಾಳ ಮಾತನಾಡಿ ಸ್ವಯಂ ಸೇವಕರಲ್ಲಿ ಸಿಸ್ತು ಬೆಳೆಯಬೇಕಾದರೆ ಹಾಗೂ ವಿದ್ಯಾರ್ಥಿಗಳ ಭವಿಷ್ಯ ಉಜ್ವಲ ಮತ್ತು ನಾಯಕತ್ವದ ಗುಣಗಳನ್ನು ಹೊಂದಿರುವ ಎನ್ ಎಸ್ ಎಸ್ ಘಟಕವು ಸ್ಪೂರ್ತಿಯಿಂದ ಕೂಡಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಪ್ರೊ ಶಿವಯ್ಯ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರೊ ಎಸ್ ಎನ್ ತೀರ್ಥ ಅಧ್ಯಕ್ಷೀಯ ನುಡಿಗಳನ್ನು ಆಡಿದರು. ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತ ಡಾ ಸಿ ಎಸ್ ಕುಮ್ಮೂರ ಪ್ರಾಚಾರ್ಯರಿಗೆ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪ್ರೊಪೇಸರಗಳಾದ ಎಂ ಎಸ್ ಸಿದ್ದಪ್ಪನವರ, ಎಸ್ ವಿ ಬಳಿಗಾರ್, ಎಂ ಎಸ್ ಸಂಗಣ್ಣನವರ, ಎನ್ ಸಿ ನಾಯಕ, ಎಸ್ ಎಸ್ ಚಿಕ್ಕಮಠ ಸರ್ವ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ವಯಂ ಸೇವಕಿಯರಾದ ಕುಮಾರಿ ಗಂಗಾ ಶೆಟ್ಟರ್ ಹಾಗೂ ಲಕ್ಷ್ಮೀ ಯಲಿವಾಳ ಕಾರ್ಯಕ್ರಮ ನಿರೂಪಿಸಿದರು ಕುಮಾರಿ ಪ್ರೇಮಾ, ಅಕ್ಷತಾ ಹಾಗೂ ಸಂಗಡಿಗರು ಪ್ರಾರ್ಥಿಸಿ ಎನ್ ಎಸ್ ಎಸ್ ಗೀತೆ ಹಾಡಿದರು.