ಫಿಟ್ ಇಂಡಿಯಾ ಮೂವ್ ಮೆಂಟ್ : 500 ಯೋಧರು ಭಾಗಿ
ಜಮ್ಮು, ಸೆಪ್ಟೆಂಬರ್. 14: ಯಾರು ಸದೃಢರಾಗಿರುತ್ತಾರೋ
ಅವರಿಗೆ ಜಯ ಖಚಿತ ಎಂದು ಜಮ್ಮು ಕಾಶ್ಮೀರದ ಬಿಎಸ್ಎಫ್ ಅಧಿಕಾರಿ ಜಮ್ವಾಲ್ ಯೋಧರಿಗೆ ಕಿವಿಮಾತು ಹೇಳಿದ್ದಾರೆ.
ಕ್ರೀಡಾ ಸಚಿವಾಲಯದ ಆಶ್ರಯದಲ್ಲಿ 'ಫಿಟ್ ಇಂಡಿಯಾ ಮೂವ್ಮೆಂಟ್' ಅಡಿಯಲ್ಲಿ ಆಯೋಜಿಸಿದ್ದ ಓಟದಲ್ಲಿ ಸುಮಾರು 500 ಅಧಿಕಾರಿಗಳು, ಅಧೀನ ಅಧಿಕಾರಿಗಳು ಮತ್ತು ಯೋಧರು ಭಾಗವಹಿಸಿದ್ದರು.
ಕೋವಿಡ್ -19 ನಿಯಮಾವಳಿ ಅನುಸರಿಸಿ ಓಟದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರತಿಯೊಬ್ಬರೂ ದೈಹಿಕವಾಗಿ ಸದೃಢರಾಗಿರಲು ಸೈನಿಕರು ಮತ್ತು ಅವರ ಕುಟುಂಬ ಸದಸ್ಯರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.
"ಪ್ರಸ್ತುತ ಸನ್ನಿವೇಶ ಮತ್ತು ಜೀವನಶೈಲಿಯಲ್ಲಿ ನಾವು ಹಣಗಳಿಕೆಗೆ ಒತ್ತು ನೀಡುತ್ತಾ, ನಮ್ಮ ಆರೋಗ್ಯವನ್ನು ಹಣಕ್ಕಾಗಿ ಮರೆತಿದ್ದೇವೆ. ಆದರೆ ಆರೋಗ್ಯವು ನಮ್ಮ ನಿಜವಾದ ಸಂಪತ್ತು ಎಂದು ಹೇಳಿದ್ದಾರೆ.
"ನಾವು ನಿಯಮಿತ ಫಿಟ್ನೆಸ್ ಕಾರ್ಯಕ್ರಮಗಳು ಮತ್ತು ಯೋಗದ ಸಹಾಯದಿಂದ ಔಷಧಿ ವೆಚ್ಚವನ್ನು ಕಡಿಮೆ ಮಾಡಬಹುದು. ನಮ್ಮ ಕುಟುಂಬ, ಮಕ್ಕಳು ಮತ್ತು ಸಮಾಜವನ್ನು ಫಿಟ್ ಇಂಡಿಯಾ ಆಂದೋಲನಕ್ಕೆ ಪ್ರೋತ್ಸಾಹಿಸಬೇಕು." ಎಂದಿದ್ದಾರೆ.