ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ, ಎನ್ಓಸಿ ದೃಢೀಕೃತಕ್ಕೆ ತಲಾ 500ರೂಪಾಯಿ ಶುಲ್ಕ ನಿಗಧಿ ಸಭೆಯಲ್ಲಿ ತೀಮರ್ಾನ: ಗಂಗಾಧರಸ್ವಾಮಿ ಹಿರೇಮಠ
ಲೋಕದರ್ಶನ ವರದಿ
ಕುಷ್ಟಗಿ 23: ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ ಹಾಗೂ ಎನ್ಓಸಿ ದೃಢೀಕೃತ ಪ್ರತಿಯನ್ನು ತಲಾ 500 ರೂಪಾಯಿ ಶುಲ್ಕ ಪಡೆದುಕೊಳ್ಳಲು ಸಭೆಯಲ್ಲಿ ನಿಗಧಿ ಪಡಿಸಿ ಸರ್ವ ಸದಸ್ಯರು ತಿಮರ್ಾನಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಹೇಳಿದರು.
ಪುರಸಭೆ ವತಿಯಿಂದ ಮಂಗಳವಾರ ಬೆಳಗ್ಗೆ ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಸರ್ವ ಸದಸ್ಯರ ತುತರ್ು ಸಭೆಯ (ವಿಶೇಷ) ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು ಕಾಟಾಚಾರಕ್ಕೆ ಮುನ್ಸಿಪಾಲಿಟಿ ನೌಕ್ರಿ ಮಾಡಬೇಡಿ ಅಂತರಾತ್ಮ ಮೆಚ್ಚುವ ಹಾಗೆ ಸರಕಾರಿ ಸೇವೆಯನ್ನು ಸಲ್ಲಿಸಬೇಕು ಎಂದು ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಕೊಪ್ಪಳ ರಸ್ತೆ, ಡಾ. ರಾಜಕುಮಾರ ಕಲ್ಯಾಣ ಮಂಟಪದ ಬಳಿ ಇರುವ ಪುರಸಭೆಯ ನಿವೇಶಗಳನ್ನು ಕೂಡಲೇ ಸ್ವಚ್ಛಗೊಳಿಸಿ ಶೆಡ್ ನಿಮರ್ಾಣ ಮಾಡಿ ಬಾಡಿಗೆ ನೀಡಲು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
2022- 23ನೇ ಶಾಲೆಗೆ ಎಸ್.ಎಪ್.ಸಿ,15ನೇ ಹಣಕಾಸು ಯೋಜನೆಯಡಿಯಲ್ಲಿ ಕ್ರಿಯಾಯೋಜನೆ ತಯಾರಿಸುವುದು ಹಾಗೂ ನೀರು ಸರಬರಾಜು ಮತ್ತು ವಿದ್ಯುತ್ ವಿಭಾಗಕ್ಕೆ ಬೇಕಾಗುವ ಸಾಮಗ್ರಿಗಳು ವಾಷರ್ಿಕ ಟೆಂಡರ್ ಕರೆಯಲು ಒಪ್ಪಿಗೆ ಸೂಚಿಸಿದರು.
ಅಬಕಾರಿ ನಿರೀಕ್ಷಕರ ಕಟ್ಟಡಕ್ಕೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಯ ಅಂಗನವಾಡಿ ಕಟ್ಟಡ ನಿಮರ್ಾಣ ಮಾಡಲು ನಗರದಲ್ಲಿರುವ ಲೇಔಟಗಳಲ್ಲಿನ ಕೆಲವು ಸಿ.ಎ ಸೈಟ್ ಗಳನ್ನು ಗುರುತಿಸಿ ಹಂತ ಹಂತವಾಗಿ ನೀಡಲಾಗುವುದು ಎಂದು ಅಧ್ಯಕ್ಷ ಹಾಗೂ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ಅವಧಿ ಮೀರಿದ ಕಾಮಗಾರಿಗಳನ್ನು ಪಟ್ಟಿ ಮಾಡಿ ಯಾವ ಕಾರಣಗಳಿಂದ ಸ್ಥಗಿತಗೊಂಡಿವೆ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳಲು ತಿಮರ್ಾನಿಸಿದರು.
ನಗರದ ಪುರಸಭೆ ಜಾಗೆಯಲ್ಲಿ ಅನಧಿಕೃತವಾಗಿ ಇಟ್ಟುಕೊಂಡಿರುವ ಡಬ್ಬಾ ಅಂಗಡಿಗಳಿಗೆ ಜೆಸ್ಕಾಂ ನವರು ವಿದ್ಯುತ್ ಸಂಪರ್ಕ ನೀಡದಿರುವಂತೆ ಕಟ್ಟುನಿಟ್ಟಿನ ನೋಟಿಸ್ ನೀಡಬೇಕು ಹಾಗೂ ವಾಡರ್್ ನಂಬರ್ 5ರಲ್ಲಿ ಚರಂಡಿ ಕಾಮಗಾರಿ ಈಗಾಗಲೇ
ಪುರಸಭೆಯಿಂದ ಅನುಮೋದನೆ ಗೊಂಡಿದೆ ಅಧಿಕಾರಿಗಳು ಸ್ಥಳ ಪರಿಶೀಲನೆ ವಿಳಂಬದಿಂದ ಕಾಮಗಾರಿ ಕುಂಠಿತವಾಗಿದೆ ಎಂದು ಸದಸ್ಯ ಚಿರಂಜೀವಿ ಹಿರೇಮಠ ಆರೋಪಿಸಿದರು. ನಗರದಲ್ಲಿರುವ ಎಲ್ಲಾ ಚರಂಡಿಗಳು ತುಂಬಿ ದುನರ್ಾತ ಬೀರುತ್ತಿವೆ ಇವುಗಳನ್ನು ಕೂಡಲೇ ಸ್ವಚ್ಛಗೊಳಿಸಿ ಬ್ಲೀಚಿಂಗ್ ಪೌಡರ್ ಸಿಂಪಡಿಸುವಂತೆ ಸದಸ್ಯ ರಾಜು ಪತ್ತಾರ್ ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ತಾಕೀತು ಮಾಡಿದರು. ಹೊಸ ನಳದ ಜೋಡಣೆ ಪರವಾನಿಗೆಗಾಗಿ ಕನ್ಸಲ್ಟೆಂಟ್ ಸನದ 500 ಶುಲ್ಕ ಪಡೆಯಲು ಅಧ್ಯಕ್ಷ ಗಂಗಾಧರ ಸ್ವಾಮಿ ಸಭೆಗೆ ತಿಳಿಸಿದರು ಇದಕ್ಕೆ ಉತ್ತರಿಸಿದ ಸದಸ್ಯ ಮೈನುದ್ದೀನ್ ಮುಲ್ಲಾ 500 ರೂಪಾಯಿ ಶುಲ್ಕ ಪಡೆಯುವುದು ಬೇಡ ಇದರಿಂದ ಬಡವರಿಗೆ ಹೊರೆಯಾಗುತ್ತದೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಒಪ್ಪಿಗೆ ಸೂಚಿಸಿ ಎಂದು ಅಧ್ಯಕ್ಷರಿಗೆ ತಿಳಿಸಿದರು.
ಕುಷ್ಟಗಿ ಪಟ್ಟಣದ ವಾಪ್ತಿಯಲ್ಲಿ ವಿದ್ಯುತ್ ಕಂಬ ಜೋಡಣೆ, ಟಿಸಿ ಬದಲಾವಣೆ, ವಿದ್ಯುತ್ ತಂತಿ ಅಳವಡಿಕೆ ಸೇರಿದಂತೆ ಇನ್ನಿತರೆ ಹಲವು ಕಾಮಗಾರಿಗಳ ಬಗ್ಗೆ ಜೆಸ್ಕಾಂ ಕಚೇರಿಗೆ ಅಜರ್ಿ ಸಲ್ಲಿಸಲಾಗಿದೆ ಇದುವರೆಗೂ ಜೆಸ್ಕಾಂ ಇಲಾಖೆಯವರು ಕ್ಯಾರೇ ಎನ್ನುತ್ತಿಲ್ಲ ಮುಂದಿನ ದಿನಮಾನಗಳಲ್ಲಿ ಸದಸ್ಯರೊಂದಿಗೆ ಜೆಸ್ಕಾಂ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಅವರು ಜೆಸ್ಕಾಂ ಎಇಇ ಮಂಜುನಾಥ ಅವರಿಗೆ ಎಚ್ಚರಿಕೆ ನೀಡಿದರು.
ಇದಕ್ಕೆ ಉತ್ತರಿಸಿದ ಜೆಸ್ಕಾಂ ಎಇಇ ನಿಮ್ಮ ಪುರಸಭೆ ವತಿಯಿಂದ ಸಲ್ಲಿಸಿದ ಕೆಲವು ಕಾಮಗಾರಿಗಳನ್ನು ಆಡಳಿತಾತ್ಮಕ ಮಂಜೂರಾತಿ ಗಾಗಿ ಮೇಲ್ಮಟ್ಟದ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗಿದೆ ಅನುಮೋದನೆಗೊಂಡ ನಂತರ ಹರಿತವಾಗಿ ಕೆಲಸವನ್ನು ನಿರ್ವಹಿಸಲಾಗುವುದು ಎಂದು ಅಧ್ಯಕ್ಷರು ಹಾಗೂ ಸರ್ವ ಸದಸ್ಯರಿಗೆ ತಿಳಿಸಿದರು.
ಪಾರ್ಮ ನಂ-3 ಕುರಿತು ಪಟ್ಟಣದಲ್ಲಿ ತುಂಬಾ ಸಮಸ್ಯೆ ಉಂಟಾಗಿದೆ ಕಾನೂನಿನ ಚೌಕಟ್ಟಿನಲ್ಲಿ ಹೊಂದಿರುವ ಆಸ್ತಿಗಳ ಮೂಲ ಮಾಲೀಕರಿಗೆ ಕಡ್ಡಾಯವಾಗಿ ಪಾರ್ಮ ನಂ-3 ವಿತರಿಸುವಂತೆ ಸದಸ್ಯ ವಿರೇಶ ಬೆದವಟ್ಟಿ ಅಧ್ಯಕ್ಷ ಹಾಗೂ ಅಧಿಕಾರಿಗಳನ್ನು ಒತ್ತಾಯಿಸಿದರು.
ಗುತ್ತಿಗೆ ಆಧಾರದ ಮೇಲೆ ಕಚೇರಿಗೆ ಮುಖ್ಯ ಅಧಿಕಾರಿಗಳವರೆಗೆ ವಾಹನ ತೆಗೆದು ಕೊಳ್ಳುವ ಬಗ್ಗೆ. ವಾಷರ್ಿಕ ಜಾಹೀರಾತು ಟೆಂಡರ್ ಕರೆಯುವ ಕುರಿತು. ಕನ್ಸಲ್ಟೆಂಟ್ ಇಂಜಿನಿಯರ್ ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ ತೆಗೆದುಕೊಳ್ಳುವ ಬಗ್ಗೆ ಹಾಗೂ ಈಗಾಗಲೇ ಕರೆಯಲಾಗಿರುವ ಟೆಂಡರ್ ಮತ್ತು ಇದರ ಅನುಮೋದನೆ ನೀಡುವುದು ಕಚೇರಿಗೆ ಸಲಹೆಗಾರರನ್ನು ತಾತ್ಕಾಲಿವಾಗಿ ತೆಗೆದುಕೊಳ್ಳುವ ಬಗ್ಗೆ ಚಚರ್ೆಸಿದರು.
ಅಧ್ಯಕ್ಷರ ಅಪ್ಪಣೆಯ ಮೇರೆಗೆ ಇನ್ನಿತರೆ ವಿಷಯಗಳ ಕುರಿತು ಸಭೆಯಲ್ಲಿ ಚಚರ್ಿಸಿ ಅನುಮೋದಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ಹನುಮವ್ವ ಕೋರಿ ಸದಸ್ಯ ಅಂಬರೀಶ್ ಭಜಂತ್ರಿ, ರಾಮಣ್ಣ ಬಿನ್ನಾಳ, ವಸಂತ ಮೇಲಿನಮನಿ, ಕಲ್ಲೇಶ್ ತಾಳದ, ಬಸವರಾಜ್ ಬುಡಕುಂಟಿ, ಗೀತಾ ತುರಕಾಣಿ, ಜ್ಯೋತಿ ಚಲವಾದಿ ಜರೀನಾ ಬೇಗಂ, ಪ್ರಭಾರ ಮುಖ್ಯಾಧಿಕಾರಿ ಷಣ್ಮುಖಪ್ಪ, ಪುರಸಭೆ ದ್ವಿತೀಯ ದಜರ್ೆ ಸಹಾಯಕರಾದ ಚೀರಂಜೀವಿ, ನಾಗೇಂದ್ರ, ಲೆಕ್ಕ ಪರಿವೀಕ್ಷಕಿ ಪ್ರೀತಿ ಬಾಂಡಗೆ, ಕಂದಾಯ ನೀರಿಕ್ಷಕರು ಎಮ್.ಎನ್ ಖಾಜಾ ಹುಸೇನ್, ರಾಘವೇಂದ್ರ ಸೇರಿದಂತೆ ಪುರಸಭೆ ಸರ್ವ ಸದಸ್ಯರು, ನಾಮ ನಿದರ್ೆಶಕ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಸಭೆಯಲ್ಲಿ ಉಪಸ್ಥಿತರಿದ್ದರು