4ನೇ ಅಂತರಾಷ್ಟ್ರೀಯ ವ್ಯಂಗ್ಯ ಚಿತ್ರ ಸ್ಪರ್ಧೆ: ರಾಜ್ಯಪ್ರಶಸ್ತಿ ಪಡೆದ ಮಾಲತೇಶ
ಲೋಕದರ್ಶನ ವರದಿ
ರಾಣೇಬೆನ್ನೂರ 04: ರಸ್ತೆ ಸುರಕ್ಷತೆ ಕುರಿತಾಗಿ ರಷ್ಯಾ ದೇಶದ ತ್ಯುಮೆನ್ ನಗರದಲ್ಲಿ ನಡೆಸಿದ 4 ನೇ ಅಂತರಾಷ್ಟ್ರೀಯ ವ್ಯಂಗ್ಯಚಿತ್ರ ಸ್ಫರ್ಧೆಯಲ್ಲಿ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ವಿಕಲಚೇತನ ಚಿತ್ರಕಲಾವಿದ ಮಾಲತೇಶ ಗರಡಿಮನಿ ಭಾಗವಹಿಸಿ ಡಿಪ್ಲೋಮಾ 4 ನೇ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ರಸ್ತೆ ಸುರಕ್ಷತೆಗಾಗಿ ಮಾಲತೇಶರವರು ಶೀಟ್ ಬೆಲ್ಟ್ ಕುರಿತಾದ ವ್ಯಂಗ್ಯಚಿತ್ರವು ತುಂಭಾ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಮೂರು ಬೆಲ್ಟ್ಗಳ ಚಿತ್ರವನ್ನು ಕೆಂಪು ಹಳದಿ ಮತ್ತು ಹಸಿರು ಬಣ್ಣದಲ್ಲಿ ಚಿತ್ರಿಸಿದ್ದಾರೆ. ಕೆಂಪು ಬಣ್ಣದ ಬೆಲ್ಟ್ ಅಪಾಯದ ಸೂಚನೆಯ ಸಂಕೇತವಾಗಿ ಚಿತ್ರಿಸಿ ಬೆಲ್ಟ್ ಧರಿಸದೆ ವಾಹನ ಚಲಾಹಿಸಿದರೆ ಅಪಾಯವು ಆಹ್ವಾನಿಸುತ್ತದೆ. ಹಳದಿ ಬಣ್ಣದ ಬೆಲ್ಟ್ ಅರೆ ಮನಸ್ಸಿನಿಂದ ಹಾಕಿಕೊಳ್ಳುವುದೊ ಬೇಡವೂ ಎಂಬ ಚಂಚಲ ಮನಸ್ಸಿನಿಂದ ಸರಿಯಾಗಿ ಹಾಕಿಕೊಳ್ಳದೇ ಅಪಾಯಕ್ಕೆ ಗುರಿಯಾಗುತ್ತಿರುತ್ತಾರೆ
ಚಿತ್ರದ ಪ್ರಮುಖ ಅಂಶವೆನೆಂದರೆ ವಾಹನ ಚಲಾಯಿಸುವಾಗ ಎಲ್ಲರೂ ಕಡ್ಡಾಯವಾಗಿ ಬೆಲ್ಟ್ ಧರಿಸಬೇಕು ಎನ್ನುವ ಸಂಕೇತವಾಗಿ ಹಸಿರು ಬಣ್ಣದ ಬೆಲ್ಟ್ನ್ನು ಪೂರ್ಣಪ್ರಮಾಣದಲ್ಲಿ ಹಾಕಿಕೊಂಡು ನಮ್ಮ ದೇಶ ಮತ್ತು ನಮ್ಮ ಕುಟುಂಬವನ್ನು ಕಾಪಾಡಿಕೊಳ್ಳಬೇಕಾಗಿ ಜಾಗೃತಿ ಮೂಡಿಸುವಂತಹ ವಿಶಿಷ್ಠ ಕಲಾಕೃತಿಯಾಗಿದೆ. ಈ ವ್ಯಂಗ್ಯಚಿತ್ರದೊಂದಿಗೆ ಪ್ರಶಸ್ತಿ ಪಡೆದ ಎಲ್ಲಾ ಚಿತ್ರಗಳನ್ನು ರಷ್ಯಾ ದೇಶದ ಪ್ರಮುಖ ನಗರಗಳ ರಸ್ತೆಗಳ ಪಕ್ಕದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಪ್ರದರ್ಶನ ಮಾಡಲಾಗುತ್ತಿದೆ.
ಅಂತರಾಷ್ಟ್ರೀಯ ವ್ಯಂಗ್ಯ ಚಿತ್ರ ಸ್ಫರ್ಧೆಯಲ್ಲಿ ಒಟ್ಟು 5 ಬಹುಮಾನಗಳಲ್ಲಿ 4 ನೇ ಸ್ಥಾನ ಗಳಿಸುವುದರೊಂದಿಗೆ ಕರ್ನಾಟಕ ಮತ್ತು ಭಾರತದ ಕಲೆಯನ್ನು ವಿಶ್ವ ಮಟ್ಟದಲ್ಲಿ ಹೆಸರಿಸಿ ಅಮೋಘ ಸಾಧನೆಯನ್ನು ಮಾಡಿದ್ದಾರೆ. ಪ್ರಸ್ತುತ ಶಿಕಾರಿಪುರದ ಅಕ್ಷರಾ ರೆಸಿಡೆಸ್ಷಿಯಲ್ ಸ್ಕೂಲ್ನಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.