ಕಾರು ಹರಿದು 48 ಕುರಿಗಳ ದುರ್ಮರಣ, 15ಕ್ಕೂ ಹೆಚ್ಚು ಗಾಯ
ಲೋಕದರ್ಶನ ವರದಿ
ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನಜಾಲಿಕ್ಕೊಪ್ಪಗ್ರಾಮದ ಸಮೀಪ ನಡೆದ ಭೀಕರರಸ್ತೆಅಪಘಾತದಲ್ಲಿಕಾರೊಂದು ಕುರಿಗಳ ಹಿಂಡಿನ ಮೇಲೆ ಹರಿದ ಪರಿಣಾಮ 48ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಕುರಿಗಳು ಗಂಭೀರವಾಗಿಗಾಯಗೊಂಡಿವೆ.
ಬೈಲಹೊಂಗಲದಿಂದ ಬೆಳವಡಿ ಕಡೆಗೆಅತೀವೇಗದಲ್ಲಿ ಸಂಚರಿಸುತ್ತಿದ್ದಕಾರು, ರಸ್ತೆದಾಟುತ್ತಿದ್ದ ಕುರಿಗಳ ಹಿಂಡಿನ ಮೇಲೆ ಏಕಾಏಕಿ ಹರಿದಿದೆ. ಡಿಕ್ಕಿಯರಭಸಕ್ಕೆ ಹಲವು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದರೆ, ಗಾಯಗೊಂಡ ಕುರಿಗಳು ರಸ್ತೆಯಲ್ಲೇ ನರಳಾಡಿದವು.
ಮೃತಪಟ್ಟ ಕುರಿಗಳು ಕೆಂಗಾನೂರಗ್ರಾಮದಚಂದ್ರ್ಪ ಹಿತ್ತಲಮನಿ ಹಾಗೂ ದೊಡವಾಡಗ್ರಾಮದ ಬೀರ್ಪಅವರಿಗೆ ಸೇರಿವೆಎಂದು ತಿಳಿದುಬಂದಿದೆ. ಅಪಘಾತದಲ್ಲಿ ಹಲವು ಗರ್ಭಿಣಿ ಕುರಿಗಳೂ ಸಾವನ್ನಪ್ಪಿದ್ದು, ಸ್ಥಳದಲ್ಲಿನ ದೃಶ್ಯಕಂಡು ಸ್ಥಳೀಯರು ತೀವ್ರದುಃಖ ವ್ಯಕ್ತಪಡಿಸಿದ್ದಾರೆ.
ಘಟನೆಯಿಂದ ಕುರಿಗಳ ಮಾಲೀಕರಿಗೆ ಲಕ್ಷಾಂತರರೂಪಾಯಿ ನಷ್ಟ ಉಂಟಾಗಿದೆ. ತಪ್ಪಿತಸ್ಥಕಾರು ಚಾಲಕನ ವಿರುದ್ಧಕಠಿಣಕ್ರಮ ಕೈಗೊಳ್ಳಬೇಕು ಎಂದು ಮಾಲೀಕರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಅಪಘಾತದ ಬಳಿಕ ಕಾರು ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಬೈಲಹೊಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಾರಿಯಾಗಿರುವ ಚಾಲಕನ ಪತ್ತೆಗೆ ಪೊಲೀಸರುಕ್ರಮಕೈಗೊಂಡಿದ್ದು, ತನಿಖೆ ಮುಂದುವರಿದಿದೆ.