ರಾಷ್ಟ್ರೀಯ

ದೇಶದಲ್ಲಿ ಕೋವಿಡ್-19 ನ 47,905 ಹೊಸ ಪ್ರಕರಣಗಳು ವರದಿ: ಸಕ್ರಿಯ ಪ್ರಕರಣಗಳು 5 ಲಕ್ಷಕ್ಕೂ ಕಡಿಮೆ

ದೇಶದಲ್ಲಿ ಕೋವಿಡ್-19 ನ 47,905 ಹೊಸ ಪ್ರಕರಣಗಳು ವರದಿ:  ಸಕ್ರಿಯ ಪ್ರಕರಣಗಳು 5 ಲಕ್ಷಕ್ಕೂ ಕಡಿಮೆ

ನವದೆಹಲಿ, ನವೆಂಬರ್ 12: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 47,905 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 86,83,917 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ನವೀಕೃತ ಮಾಹಿತಿ ತಿಳಿಸಿದೆ.

ಕೋವಿಡ್-19ನ ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಕುಸಿದಿದ್ದು, ಸದ್ಯ  ಈ ಸಂಖ್ಯೆ ಐದು ಲಕ್ಷಕ್ಕಿಂತ ಕಡಿಮೆ ಇದೆ. ಬುಧವಾರದಿಂದ ಸಕ್ರಿಯ ಪ್ರಕರಣಗಳಲ್ಲಿ 5,363 ರಷ್ಟು ಕುಸಿದ ನಂತರ ಸದ್ಯ, ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,89,294 ರಷ್ಟಿದೆ.

ದೇಶಾದ್ಯಂತ ಬುಧವಾರ 550 ಸೋಂಕಿತರು ಸಾಂಕ್ರಾಮಿಕ ರೋಗಕ್ಕೆ ಬಲಿಯಾಗುವುದರೊಂದಿಗೆ ಸದ್ಯ ಸಾವಿನ ಸಂಖ್ಯೆ 1,28,121 ಕ್ಕೆ ತಲುಪಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

ಈ ಮಧ್ಯೆ, ಕಳೆದ 24 ಗಂಟೆಗಳಲ್ಲಿ 52,718 ರೋಗಿಗಳು ಗುಣಮುಖರಾಗುವುದರೊಂದಿಗೆ ಒಟ್ಟು ಚೇತರಿಕೆ ಪ್ರಮಾಣ 80,66,502 ಕ್ಕೆ ಏರಿದೆ.

ಶೇಕಡಾವಾರು ಪ್ರಮಾಣದಲ್ಲಿ  ಸಕ್ರಿಯ ಪ್ರಕರಣಗಳು ಒಟ್ಟು ಪ್ರಕರಣಗಳ ಪೈಕಿ ಶೇ 5.63 ರಷ್ಟಿವೆ, ಚೇತರಿಕೆ ಪ್ರಮಾಣ ಶೇ 92.89ರಷ್ಟಿದೆ. ಸಾವಿನ ಪ್ರಮಾಣ ಶೇ 1.48 ರಷ್ಟಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ವರದಿಯಂತೆ,  ಸಾಂಕ್ರಾಮಿಕ ರೋಗ ಉಲ್ಬಣವಾದಾಗಿನಿಂದ  ದೇಶಾದ್ಯಂತ ಒಟ್ಟು 12,19,62,509 ಕೋವಿಡ್ ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ.

ಸುದ್ದಿ ಓದಿ