ಬೈಲಹೊಂಗಲ: 45 ಜನರಿಗೆ ಕೊರೊನಾ, ನಾಲ್ವರ ಸಾವು
ಬೈಲಹೊಂಗಲ: ಪಟ್ಟಣದಲ್ಲಿ 17 ಸೇರಿದಂತೆ ತಾಲೂಕಿನಲ್ಲಿ ಮಂಗಳವಾರ 45 ಜನರಿಗೆ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಪಟ್ಟಣದ ಕೆ.ಸಿ.ನಗರ 1ನೇ ಅಡ್ಡ ರಸ್ತೆಯಲ್ಲಿ 3, ವಿದ್ಯಾನಗರ 2ನೇ 2, ಪತ್ರಿಬಸವ ನಗರ 1ನೇ ಕ್ರಾಸನ 1, ಗೋಧಿ ಚಾಳ 1, ಕುಡಸೋಮನ್ನವರ ಗಲ್ಲಿ 1, ಗೋಕಾವಿ ಗಲ್ಲಿಯ 1, ಸೋಮವಾರ ಪೇಟೆಯ 1, ನಮೋ ನಗರ 1, ಬಸವ ನಗರ 1, ಚನ್ನಮ್ಮ ಸಮಾಧಿ ರಸ್ತೆ 1, ಹೊಸಮನಿ ಚಾಳ 1 ಹಾಗೂ ತಾಲೂಕಿನ ಸಂಪಗಾಂವ, ಕಲ್ಲೂರ, ಗುಡಕಟ್ಟಿ, ನೇಗಿನಹಾಳ, ದೇಗಾಂವ ತಲಾ 3, ಕಾದ್ರೊಳ್ಳಿ 2, ಹುಣಶೀಕಟ್ಟಿ, ದಾಸ್ತಿಕೊಪ್ಪ, ನಾಗನೂರ, ಕೊಳದೂರ, ಉಡಿಕೇರಿ, ಶೀಗಿಹಳ್ಳಿ, ಗರ್ಜೂರ, ಯರಡಾಲ, ಕಡಸಗಟ್ಟಿ, ಆನಿಗೊಳ, ಕಿತ್ತೂರಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿವೆ.
ಪಟ್ಟಣದ ಬೋಳಶೆಟ್ಟಿ ಚಾಳದ 84 ವರ್ಷದ ವೃದ್ಧೆ, ಎಂ.ಜಿ.ಕಾಲೋನಿಯ 71 ವರ್ಷದ ವೃದ್ಧ, ಕೊಳದೂರಿನ 85 ವರ್ಷದ ವೃದ್ಧ, ಸಂಪಗಾಂವ 73 ವರ್ಷದ ವೃದ್ಧ ಮೃತರಾಗಿದ್ದಾರೆ.
ತಾಲೂಕಿನಲ್ಲಿ ಇಲ್ಲಿಯವರೆಗೆ ಒಟ್ಟು 711 ಪ್ರಕರಣ ಕಂಡುಬಂದಿದ್ದು, 166 ಸಕ್ರೀಯ ಪ್ರಕರಣಗಳಿವೆ. ಬುಧವಾರ 11 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ತಾಲೂಕಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.