ವಿಜಯಪುರ

4 ವರ್ಷದ ಮೇಕೆ 2 ಕ್ವಿಂಟಾಲ್ ಚೀಲ ಎಳೆದು ಅದ್ಭುತ ಸಾಹಸ

4 ವರ್ಷದ ಮೇಕೆ 2 ಕ್ವಿಂಟಾಲ್ ಚೀಲ ಎಳೆದು ಅದ್ಭುತ ಸಾಹಸ

ಕೊಲ್ಹಾರ 05 :  ಪಟ್ಟಣದ ಚಂದ್ರಾಮಪ್ಪ ಉಳ್ಳಾಗಡ್ಡಿ (ಬೆಳ್ಳುಬ್ಬಿ)ಅವರ ಮೇಕೆ ಭಾರವಾದ ಗೋಧಿ ಚೀಲವನ್ನು ಎಳೆದು ಶನಿವಾರ ಅದ್ಭುತ ಸಾಹಸ ಮೆರೆದಿದೆ 4 ವರ್ಷದ ಮೇಕೆಯು ಬರೊಬ್ಬರಿ 2 ಕ್ವಿಂಟಾಲ್ 60 ಕೆಜಿ ಗೋದಿ ಚೀಲದ ಭಾರವನ್ನು ಕೊಲ್ಹಾರ ಪಟ್ಟಣದ ಎಸ್ ಎಲ್ ಪಾಟೀಲ ಪೆಟ್ರೋಲ್ ಬಂಕ್ ದಿಂದ ಬಸವೇಶ್ವರ ವೃತ್ತ ರಾಣಿ ಚೆನ್ನಮ್ಮ ವೃತ್ತದಿಂದ ನೇರವಾಗಿ ದಿಗಂಬರೇಶ್ವರ ಮಠಕ್ಕೆ ಹೋಗಿ ಮರಳಿ ಸ್ವಾಮಿ ವಿವೇಕಾನಂದರ ವೃತ್ತದವರೆಗೆ ಸುಮಾರು ಎರಡು ಕಿಲೋಮೀಟರ್ ವರೆಗೆ ಭಾರವನ್ನು ಎಳೆದು ಸಾಹಸ ಮೆರೆದ ಹಿನ್ನೆಲೆಯಲ್ಲಿ ದಿಗಂಬರೇಶ್ವರ ಸಂಸ್ಥಾನ ಮಠದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಕಲ್ಲಿನಾಥಶ್ರೀಗಳು ಮೇಕೆಗೆ ಹಾರ ಹಾಕಿ ಮೇಕೆ ಮಾಲಿಕನಿಗೆ ಸನ್ಮಾನಿಸಿದರು ಇದೆ ಸಂದರ್ಭದಲ್ಲಿ ಹಣಮಂತ ಬೆಳ್ಳುಬ್ಬಿ ,ಪರಸಪ್ಪ ಬೆಳ್ಳುಬ್ಬಿ ನಿವೃತ್ತ ಶಿಕ್ಷಕ ಶಂಕ್ರ​‍್ಪ ಪತಂಗಿ,ಬಸಪ್ಪ ಕೋಠಾರಿ, ಬಸವರಾಜ ಉಳ್ಳಾಗಡ್ಡಿ,ಕಲ್ಲು ಬಾಲಗೊಂಡ ಇತರರು ಉಪಸ್ಥಿತರಿದ್ದರು 


ಸುದ್ದಿ ಓದಿ