ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆಯಿಂದ ಇನ್ನೂ 4 ವಿಶೇಷ ರೈಲುಗಳ ಸಂಚಾರ
ನಾಂದೇಡ್, ಸೆಪ್ಟೆಂಬರ್ 7: ಪ್ರಯಾಣಿಕರ ಅನುಕೂಲಕ್ಕಾಗಿ ದಕ್ಷಿಣ ಮಧ್ಯ ರೈಲ್ವೆ ಇದೇ 12 ರಿಂದ ಇನ್ನೂ 4 ವಿಶೇಷ ರೈಲುಗಳನ್ನು ಓಡಿಸಲಿದೆ.
ರೈಲು ಸೇವೆಗಳನ್ನು ಭಾಗಶಃ ಮರುಸ್ಥಾಪಿಸುವ ಭಾಗವಾಗಿ,ಇಲಾಖೆ ದೇಶಾದ್ಯಂತ 40 ವಿಶೇಷ ರೈಲುಗಳನ್ನು ಪರಿಚಯಿಸಿದೆ.
ರೈಲು (ಸಂಖ್ಯೆ 07563) ಹೈದರಾಬಾದ್-ಪರಬನಿ ಸ್ಪೆಷಲ್ ಎಕ್ಸ್‌ಪ್ರೆಸ್ ಪ್ರತಿದಿನ ಹೈದರಾಬಾದ್‌ನಿಂದ 2245 ಗಂಟೆಗೆ ಹೊರಟು ಮುಂದಿನ ದಿನ 0630 ಗಂಟೆಗೆ ಪರಬನಿಗೆ ತಲುಪಲಿದೆ.
ರೈಲು (ಸಂಖ್ಯೆ 07564) ಪರಬನಿ-ಹೈದರಾಬಾದ್ ಸ್ಪೆಷಲ್ ಎಕ್ಸ್‌ಪ್ರೆಸ್ ಪ್ರತಿದಿನ 2230 ಗಂಟೆಗೆ ಪರಬನಿಯಿಂದ ಹೊರಟು ಮರುದಿನ 0645 ಗಂಟೆಗೆ ಹೈದರಾಬಾದ್ ತಲುಪಲಿದೆ.
ರೈಲು (ಸಂಖ್ಯೆ 07007) ಸಿಕಂದರಾಬಾದ್-ದರ್ಭಂಗಾ ಸ್ಪೆಷಲ್ ಎಕ್ಸ್‌ಪ್ರೆಸ್ ಮಂಗಳವಾರ ಮತ್ತು ಶನಿವಾರ 2215 ಗಂಟೆಗೆ ಸಿಕಂದರಾಬಾದ್‌ನಿಂದ ಹೊರಡಲಿದೆ.
ರೈಲು (ಸಂಖ್ಯೆ 07008) ದರ್ಬಂಗಾ-ಸಿಕಂದರಾಬಾದ್ ಸ್ಪೆಷಲ್ ಎಕ್ಸ್‌ಪ್ರೆಸ್ ಪ್ರತಿ ಗುರುವಾರ ಮತ್ತು ಶುಕ್ರವಾರದಂದು 0700 ಗಂಟೆಗೆ ದರ್ಭಂಗದಿಂದ ಹೊರಡಲಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.