ರಾಷ್ಟ್ರೀಯ

ನಿವಾರ್‌ ಚಂಡಮಾರುತ: ಹಾನಿ ವಿಶ್ಲೇಷಣೆಯಲ್ಲಿ ತೊಡಗಿರುವ 4 ಐಸಿಜಿ ಹಡಗುಗಳು

ನಿವಾರ್‌ ಚಂಡಮಾರುತ: ಹಾನಿ ವಿಶ್ಲೇಷಣೆಯಲ್ಲಿ ತೊಡಗಿರುವ 4 ಐಸಿಜಿ ಹಡಗುಗಳು

ಚೆನ್ನೈ, ನವೆಂಬರ್ 26 : ತೀವ್ರವಾಗಿ ಬೀಇಸದ್ದ ಚಂಡಮಾರುತ ಗುರುವಾರ ಪುದುಚೆರಿಯಲ್ಲಿ ಭೂಕುಸಿತಕ್ಕೆ ಕಾರಣವಾದ ನಂತರ ನಾಲ್ಕು ಭಾರತೀಯ ಕರಾವಳಿ ಪಡೆ (ಐಸಿಜಿ) ಹಡಗುಗಳು ಸಾಗರ ಬದಿಯ ಪ್ರದೇಶದಲ್ಲಿ ಉಂಟಾಗಿರುವ ಹಾನಿಯ ಪರಿಶೀಲನೆ ಆರಂಭಿಸಿವೆ.

ಐಸಿಜಿ ಹಡಗುಗಳಾದ ಸುಜಯ್‌, ಶೌರ್ಯ, ಸಾರಂಗ್ ಮತ್ತು ಸಾಹುನಕ್‌ ಗಳು ನಿಜಾಮಪಟ್ನಂನಿಂದ  ವಿಪತ್ತಿನ ಹಾನಿ ವಿಶ್ಲೇಷಣೆ ಆರಂಭಿಸಿದೆ ಎಂದು ರಕ್ಷಣಾ ಸಚಿವಾಲಯ ವಕ್ತಾರರು ತಿಳಿಸಿದ್ದಾರೆ.

ಈ ನಡುವೆ, ಕರಾವಳಿ ರಕ್ಷಣಾ ಪಡೆ ಟಗ್‌ ದೋಣಿಯ ದುರಸ್ತಿಗೆ ಕೂಡ ನೆರವಾಗುತ್ತಿದೆ.

ಈ ತಂಡದಲ್ಲಿ ಮುಳುಗು ತಜ್ಞರು, ಹಾನಿ ತಡೆಯುವ ಉಪಕರಣಗಳು, ದುರಸ್ತಿ ಉಪಕರಣಗಳು ಇವೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.

ಸುದ್ದಿ ಓದಿ