ರಾಣೆಬೆನ್ನೂರ

3ನೇ ಅಲೆ ಮುನ್ನೆಚ್ಚರಿಕೆ: ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ

3ನೇ ಅಲೆ ಮುನ್ನೆಚ್ಚರಿಕೆ: ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ

ರಾಣಿಬೆನ್ನೂರ 11:  ಕೊರೊನಾ 3ನೇ ಅಲೆಯು ಮಕ್ಕಳಿಗೆ ತೊಂದರೆ ನೀಡಲಿದೆ ಎಂಬ ತಜ್ಞರ ವರದಿಯ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡುವುದರ ಮೂಲಕ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಈಗಿನಿಂದಲೇ ಅಗತ್ಯ ಚಿಕಿತ್ಸೆ ನೀಡುವುದು  ಸೂಕ್ತ  ಎಂದು ಇಟಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾಽ ಪ್ರಕಾಶ್ ಡಿ. ಡಿ ಹೇಳಿದರು. 

ತಾಲೂಕಿನ ಕಮದೋಡ ಗ್ರಾಮದ ಬಳಿ ಇರುವ  ರೇನ್ ಬೋ ರೆಸಿಡೆನ್ಸಿಯಲ್ ಪಬ್ಲಿಕ್ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸಂಸ್ಥೆಯ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. 

ಆರೋಗ್ಯ ತಮಾಸಣೆ ಶಿಬಿರದಲ್ಲಿ ಡಾಽ ನೇತ್ರಾವತಿ, ಡಾಽ ಅನಿಲ್‌ಕುಮಾರ್ ಅವರು  ಎಲ್ಲ ಮಕ್ಕಳನ್ನು ತಪಾಸಣೆ ನಡೆಸಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಹಾಗೂ ಪೌಷ್ಠಿಕ ಆಹಾರ  ಸೇವಿಸಲು ಸಲಹೆ ನೀಡಿದರು.  

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ್‌. ಸಿ. ಟಿ. ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಲಲಿತಾ ಸುರೇಶ್, ಕಾರ್ಯದರ್ಶಿ ಮಾಲತೇಶ್ ಐ. ಕೆ., ಹನುಮಂತಪ್ಪ,  ಮಂಜು ಡಿ. ಸಿ,   ಗಂಜೇದ್ರ ಕುಮಾರ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಸಹಾಯಕರು ಮತ್ತು ದಾದಿಯರು  ಇದ್ದರು.   


ಸುದ್ದಿ ಓದಿ