ರಾಷ್ಟ್ರೀಯ

ಕಂಪ್ಯೂಟರ್ ಬಾಬಾ ವಿರುದ್ಧ 3ನೇ ಎಫ್‍ಐಆರ್

ಕಂಪ್ಯೂಟರ್ ಬಾಬಾ ವಿರುದ್ಧ 3ನೇ ಎಫ್‍ಐಆರ್

ಇಂದೋರ್, 18: ಸ್ವಯಂಘೋಷಿತ ದೇವಮಾನನ ನಾಮದೇವ್ ದಾಸ್ ತ್ಯಾಗಿ ಅಲಿಯಾಸ್ ಕಂಪ್ಯೂಟರ್ ಬಾಬಾ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದ್ದು, ಆತ ಸದ್ಯಕ್ಕೆ ಕಾನೂನಿನ ಹಿಡಿತದಿಂದ ಹೊರಬರುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ.

ಗೊಮ್ಮಟ್ ಗಿರಿ ಜೈನ ದೇವಸ್ಥಾನದಲ್ಲಿ ಗೇಟ್‌ವೇ ನಿರ್ಮಾಣಕ್ಕೆ ನಿಯೋಜಿಸಲಾಗಿದ್ದ ಗುತ್ತಿಗೆದಾರರೊಬ್ಬರು (ಹೆಸರನ್ನು ತಡೆಹಿಡಿಯಲಾಗಿದೆ) ನೀಡಿದ ದೂರಿನ ಆಧಾರದ ಮೇಲೆ 3ನೇ ಎಫ್‍ಐಆರ್ ದಾಖಲಿಸಲಾಗಿದೆ.

ತ್ಯಾಗಿಯವರು ದೇವಾಲಯದ ಆವರಣದ ಸುತ್ತಮುತ್ತಲಿನ ಭೂಮಿಯನ್ನು "ಅತಿಕ್ರಮಣ" ಮಾಡಿದ ಆರೋಪ ಹಾಗೂ ಗುತ್ತಿಗೆದಾರರನ್ನು ಬೆದರಿಸಿ, ಹಲ್ಲೆ ಮಾಡಿರುವ ಆರೋಪವೂ ಕೇಳಿಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಮಂಗಳವಾರ ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುದ್ದಿ ಓದಿ