ಶ್ರೀಮಾರುತಿ ತೊಗಲುಗೊಂಬೆ ಟ್ರಸ್ಟ್ದ 3ನೇ ವಾರ್ಷಿಕೋತ್ಸವ
ಬಳ್ಳಾರಿ 30: ನಗರದ ಶ್ರೀರಾಂಪುರ ಕಾಲೋನಿಯಲ್ಲಿ ಶ್ರೀರಾಮ ದೇವಸ್ಥಾನದ ಆವರಣದಲ್ಲಿ ಶ್ರೀ ಮಾರುತಿ ತೊಗಲುಗೊಂಬೆ ಟ್ರಸ್ಟ್ನ ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶ್ರೀರಾಮ ನವಮಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀರಾಮ ದೇವಸ್ಥಾನ ಸಮಿತಿಯ ಅಧ್ಯಕ್ಷ ಮನೋಹರ್ ಉದ್ಘಾಟಿಸಿ ಮಾತನಾಡಿ ಈ ದೇವಸ್ಥಾನವನ್ನು 1975ನೇ ಇಸ್ವಿಯಲ್ಲಿ ನಿರ್ಮಾಣ ಮಾಡಲಾಗಿದೆ ಅಂದಿನಿಂದ ಇಂದಿನವರೆಗೆ ಪ್ರತಿವರ್ಷ ತಪ್ಪದೆ ಶ್ರೀರಾಮ ನವಮಿಯನ್ನು ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ರಾಮ ದೇವರನ್ನು ಮೆರವಣಿಗೆ ಸಹ ಮಾಡಲಾಗುತ್ತದೆ ಎಂದರು.
ಶ್ರೀ ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ಅಧ್ಯಕ್ಷ ಸುಬ್ಬಣ್ಣ ರೂಪನಗುಡಿ ಇವರು ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಮಾತನಾಡಿದ ಟಿ ಸಾಗರ್ ಕುಮಾರ್, ಕಲಾವಿದರಿಗೆ ಕಾರ್ಯಕ್ರಮ ಮಾಡುವುದು ಕಷ್ಟವೇನಲ್ಲ, ಅದಕ್ಕೆ ಬೇಕಾಗುವಂತಹ ಖರ್ಚು ವೆಚ್ಚಗಳನ್ನು ಕಲಾವಿದರಿಗೆ ಧನ ಸಹಾಯ ಮಾಡಬೇಕಾದ ಆವಶ್ಯಕತೆಯಿದೆ ಎಂದರು.
ಅಭಿನಯ ಕಲಾಕೇಂದ್ರ ಕೆ ಜಗದೀಶ್, ನೃತ್ಯ ಕಲಾವಿದ ಅಭಿಷೇಕ್, ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಲಾವಿದ ಸುಂದರ್, ಅಣ್ಣಾಜಿ ಕೃಷ್ಣರೆಡ್ಡಿ, ಪತ್ರಕರ್ತ ಎನ್ ವೀರಭದ್ರಗೌಡ, ಜಿ ನಾಗನಗೌಡ ಅಧ್ಯಕ್ಷರು ಬಯಲಾಟ ಪರಿಷತ್ ಬಳ್ಳಾರಿ, ಮೇಘಸ್ಟಾರ್ ಸುನಿಲ್ ಕುಮಾರ್, ಕೆ ನಾಗರಾಜ್, ಜಿ ಅರವಿಂದ್ ಕುಮಾರ್, ಪಿ ರಾಮಕೃಷ್ಣ, ಬಿ.ಪಿ ಕಾರ್ತಿಕ್, ಭೀಮಲಿಂಗ, ರಸೂಲ್ ಸೇರಿದಂತೆ ಇತರರಿದ್ದರು. ನಂತರ ಆರ್ ಕೆ ವೀರಾಂಜಿನೇಯ ತಂಡದವರಿಂದ ತೊಗಲುಗೊಂಬೆಯಾಟ, ಅಭಿಷೇಕ್ ತಂಡದವರಿಂದ ಜಾನಪದ ನೃತ್ಯಗಾಯನ, ಕುಮಾರಗೌಡ ಅಮರಾಪುರ ಮತ್ತು ಸಣ್ಣ ಹೊನ್ನೂರಸಾಬ್ ಶಂಕರಬಂಡೆ ಇವರಿಂದ ಜಾನಪದ ಗೀತೆಗಾಯನ ನಡೆಸಿಕೊಟ್ಟರು. ಅಕ್ಷಯ್ ಎಸ್ ನಿರೂಪಿಸಿ ವಂದಿಸಿದರು.