3 ಡಿ ಪುನೀತ ಪುತ್ಥಳಿ
ಬೆಂಗಳೂರು, ನ. 16 ನಗರದ ಅರಮನೆ ಮೈದಾನದಲ್ಲಿ ‘ಪುನೀತ ನಮನ’ ಕಾರ್ಯಕ್ರಮಕ್ಕಾಗಿ ವಿಶೇಷವಾಗಿ 3ಡಿ ಪುತ್ಥಳಿ ನಿರ್ಮಾಣವಾಗಿದೆ.
ಖ್ಯಾತ ಕಲಾ ನಿರ್ದೇಶಕ ಮೋಹನ್ ಬಿ ಕೆರೆ ಪುತ್ಥಳಿ ತಯಾರಿಸಿದ್ದಾರೆ. 4 ಅಡಿ ಅಗಲ, 4 ಅಡಿ ಎತ್ತರದ ಸುಮಾರಿ 35 ರಿಂದ 40 ಕೆಜಿ ತೂಕದ ಈ ಪುತ್ಥಳಿ ಇಂದು ಪುನೀತ ನಮನ ಕಾರ್ಯಕ್ರಮದ ವೇದಿಕೆಯಲ್ಲಿ ಅನಾವರಣಗೊಳ್ಳಲಿದೆ.
ಇನ್ನು ಕೆಲವೇ ಕ್ಷಣಗಳಲ್ಲಿ ಆರಂಭವಾಗುವ ಕಾರ್ಯಕ್ರಮಕ್ಕೆ ಬರುವ ಗಣ್ಯರಿಗೆ ವಿಐಪಿ, ವಿವಿಐಪಿ ಹಾಗೂ ಎಮ್ಐಪಿ ಹೀಗೆ ಮೂರು ಬಗೆಯ ಪಾಸ್ಗಳ ವ್ಯವಸ್ಥೆ ಮಾಡಲಾಗಿದೆ. 2 ಸಾವಿರ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೊದಲು ಸ್ಯಾಕ್ಸೋಫೋನ್ ಮೂಲಕ ಕಾರ್ಯಕ್ರಮ ಆರಂಭವಾಗಲಿದೆ. ನಂತರ ನಾಗೇಂದ್ರ ಪ್ರಸಾದ್ ಬರೆದಿರೋ ಅಪ್ಪು ಕುರಿತ 5 ನಿಮಿಷಗಳ ಹಾಡು ಪ್ಲೇ ಮಾಡಲಾಗುತ್ತೆ. ಬಳಿಕ ಪುನೀತ್ ರಾಜ್‍ಕುಮಾರ್ ಅವರ ಜೀವನದ ಕುರಿತ 10 ನಿಮಿಷಗಳ ವಿಡಿಯೋ ಪ್ರಸಾರ ಮಾಡಲಾಗುತ್ತದೆ ಎಂದು ಕಾರ್ಯಕ್ರಮ ಆಯೋಜಿಸಿರುವ ಕರ್ನಾಟಕ ವಾಣಿಜ್ಯ ಮಂಡಳಿ ತಿಳಿಸಿದೆ.