ಸೇನೆ ಹಾಗೂ ಎಸ್ಡಿಆರ್‌ಎಫ್ನಲ್ಲಿ 38 ವರ್ಷಗಳ ಸೇವೆ: ನಾಗೇಶ್ ವನ್ನೂರು ನಿವೃತ್ತಿ
ಬೆಳಗಾವಿ. 01 : ಮೊದಲು 17 ವರ್ಷಗಳ ಕಾಲ ಆರ್ಮಿಯಲ್ಲಿ ಸೇವೆ ಸಲ್ಲಿಸಿ ತದನಂತರ ಎಸ್ ಡಿ ಆರ್ ಎಫ್ ’ಸಿ’ ಕಂಪಪನಿಯಲ್ಲಿ 21 ವರ್ಷಗಳ ಕಾಲ ಪ್ರಾಮಾಣಿಕ ಸೇವೆ ಸಲ್ಲಿಸಿ ಇಂದು ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ನಾಗೇಶ ಐ ವನ್ನೂರ ಅವರು ಇಂದು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಅವರನ್ನು ಜಿಲ್ಲಾ ಅಗ್ನಿಶಾಮಕ ಕಾರ್ಯಾಲಯದಲ್ಲಿ ಹೃದಯಪೂರ್ವಕವಾಗಿ ಅಗ್ನಿಶಾಮಕ ಹಾಗೂ ಎಸ್ ಡಿ ಆರ್ ಎಫ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮ್ಮುಖದಲ್ಲಿ ಸನ್ಮಾನಿಸಿ, ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಅನೇಕ ಹಿರಿಯ ಅಧಿಕಾರಿಗಳು ಸೇನೆ ಹಾಗೂ ಎಸ್‌ಡಿಆರ್‌ಎಫ್ ನಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಕೊಂಡಾಡಿದರು. ಈ ಸಭೆಯಲ್ಲಿ ಎಸ್ ಡಿ ಆರ್ ಎಫ್ ’ಸಿ ’ ಕಂಪನಿಯ ಉಪ ಕಮಾಂಡರ ನಾಗೇಶ ಯಡಾಲ, ಬೆಳಗಾವಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಂಗನಾಥ ರಾಠೋಡ ಸೇರಿದಂತೆ ಅಗ್ನಿಶಾಮಕ ಹಾಗೂ ಎಸ್ ಡಿ ಆರ್ ಎಫ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ವನ್ನೂರ ಪರಿವಾರದ ಸದಸ್ಯರು ಉಪಸ್ಥಿತರಿದ್ದರು.