ರಾಷ್ಟ್ರೀಯ

ದೇಶದಲ್ಲಿ ಕೋವಿಡ್-19 ಸೋಂಕಿನ ಹೊಸ 36,604 ಪ್ರಕರಣಗಳು ವರದಿ: ಚೇತರಿಕೆ ಪ್ರಮಾಣ ಶೇ 94.03ಕ್ಕೆ ಏರಿಕೆ

ದೇಶದಲ್ಲಿ ಕೋವಿಡ್-19 ಸೋಂಕಿನ ಹೊಸ 36,604 ಪ್ರಕರಣಗಳು ವರದಿ: ಚೇತರಿಕೆ ಪ್ರಮಾಣ ಶೇ 94.03ಕ್ಕೆ ಏರಿಕೆ

ನವದೆಹಲಿ, ಡಿಸೆಂಬರ್ 2: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೋವಿಡ್-19 ಸೋಂಕಿನ 36,604 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ನವೀಕೃತ ಮಾಹಿತಿ ತಿಳಿಸಿದೆ.

ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 95 ಲಕ್ಷ ಸಮೀಪಿಸಿದೆ. ಸದ್ಯ, ಈ ಸಂಖ್ಯೆ 94,99,414ರಷ್ಟಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

ಕಳೆದ 24 ಗಂಟೆಗಳಲ್ಲಿ ಸಾಂಕ್ರಾಮಿಕ ರೋಗದಿಂದಾಗಿ 501 ಮಂದಿ ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 1,38,122 ಕ್ಕೆ ಏರಿದೆ.

ಕೊರೊನಾವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಮಂಗಳವಾರದಿಂದ 5,969 ರಷ್ಟು ಕುಸಿತ ಕಂಡುಬಂದಿದೆ. ಸದ್ಯ ದೇಶದಲ್ಲಿ ಕೋವಿಡ್-19ನ 4,28,644 ಸಕ್ರಿಯ ಪ್ರಕರಣಗಳಿವೆ.

ಈ ಮಧ್ಯೆ, ಕಳೆದ ಒಂದು ದಿನದಲ್ಲಿ 43,062 ಕೋವಿಡ್-19 ಸೋಂಕಿತರು ಗುಣಮುಖರಾಗುವುದರೊಂದಿಗೆ ಒಟ್ಟು ಚೇತರಿಕೆ ಸಂಖ್ಯೆ 89,32,647 ಕ್ಕೆ ಏರಿದೆ.

ಶೇಕಡಾವಾರು ಪ್ರಮಾಣದಂತೆ  ಒಟ್ಟು ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳು ಶೇ 4.51ರಷ್ಟಿದ್ದು, ಚೇತರಿಕೆಗೊಂಡ ಶೇ 94.03 ಪ್ರಕರಣಗಳು  ಮತ್ತು ಸಾವಿನ ಪ್ರಮಾಣ ಶೇ 1.45 ರಷ್ಟಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ವರದಿಯಂತೆ, ಈವರೆಗೆ 14,24,45,949 ಕೋವಿಡ್‍-19 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಸುದ್ದಿ ಓದಿ