ಬೆಳಗಾವಿ

300 ಕೆಜಿ ಗಾಂಜಾ ವಶ; ಕಂಟೇನರ್ ಚಾಲಕ ಬಂಧನ

300 ಕೆಜಿ ಗಾಂಜಾ ವಶ; ಕಂಟೇನರ್ ಚಾಲಕ ಬಂಧನ

 

ಸಂಬರಗಿ  21: ಸಾಂಗ್ಲಿ ಅಪರಾಧ ತನಿಖಾ ವಿಭಾಗದ ತಂಡವು   ಅಂತರರಾಜ್ಯ ರಸ್ತೆಯ ತಾನಗ ಕ್ರಾಸ್ ಬಳಿ ದಾಳಿ ನಡೆಸಿ, ಓಡಿಶಾದಿಂದ ಪುಣೆಗೆ ಸಾಗಿಸಲಾಗುತ್ತಿದ್ದ ಸುಮಾರು ?1.5 ಕೋಟಿ ಮೌಲ್ಯದ 300 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಟೇನರ್ ಚಾಲಕ ಮಂಗೇಶ ಪ್ರಕಾಶ್ ಮೋರೆ (40) ಅವರನ್ನು ಬಂಧಿಸಲಾಗಿದೆ.  

ಸಿಕ್ಕ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕಂಟೇನರ್ ವಾಹನ ಸಂಖ್ಯೆ ಓಐ 01 ಇಏ 9366 ಅನ್ನು ತಡೆದು ಪರೀಶೀಲಿಸಿದಾಗ ಕ್ಯಾಬಿನ್‌ನಲ್ಲಿ ಗಾಂಜಾ ಪತ್ತೆಯಾಗಿದೆ. ಸಾತಾರಾ ಜಿಲ್ಲೆಯ ಕೊರೇಗಾಂವ್ ತಾಲ್ಲೂಕಿನ ನಿವಾಸಿಯಾಗಿರುವ ಮಂಗೇಶ ಮೋರೆ ಅವರನ್ನು ವಶಕ್ಕೆ ಪಡೆದು ಮಿರಜ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತುಷಾರ್ ಜೋಶಿ ಹಾಗೂ ಹೆಚ್ಚುವರಿ ಪೊಲೀಸ್ ಮುಖ್ಯಸ್ಥೆ ಕಲ್ಪನಾ ಬರ್ವೇಕರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಪಿಐ ಅನಿಲ್ ಕೋಳೇಕರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು. ಗಡಿ ಪ್ರದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದ ಗಾಂಜಾ ವಶಪಡಿಸಿಕೊಂಡಿರುವುದು ಇದೇ ಮೊದಲ ಪ್ರಕರಣ ಎಂದು ಪೊಲೀಸರು ತಿಳಿಸಿದ್ದಾರೆ. 


ಸುದ್ದಿ ಓದಿ