ಟ್ರಕ್ ,ಕಾರು ಡಿಕ್ಕಿ 3 ಜನ ಸಾವು
ಕುಷ್ಟಗಿ 13; ಕಾರೊಂದು ಟ್ರಕ್ನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ 3 ಜನ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಗಿನ ಜಾವ ಇಲ್ಲಿನ ರಾಷ್ಟ್ರೀಯ ಹೆದ್ದಾರಿ (50) ರ ಬಳಿಯ ಅಮರಗುಂಡಪ್ಪ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಮೃತ ದುರ್ದಿವಿಗಳನ್ನು ಬಿದರಕುಂದಿ ಗ್ರಾಮದ ಗೌರಮ್ಮ ಹನುಮಗೌಡ ಕನ್ನೂರ (60), ನಬಗೇರಿ ಗ್ರಾಮದ ಸುರೇಶ ಈರಸಂಗಪ್ಪ ಹುಂಡರಗಲ್ (43), ಮುದ್ದೇಬಿಹಾಳ ತಾಲೂಕಿನ ಚಾಲಕ ಪ್ರವೀಣ ಕುಮಾರ ಭೋಜಪ್ಪ ಚವ್ಹಾಣ್ (27) ಎಂದು ಗುರುತಿಸಲಾಗಿದೆ.
ಘಟನೆ ವಿವಿರ: ಮೃತಪಟ್ಟ ವ್ಯಕ್ತಿಗಳು ತಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮ ಮುಗಿಸಿ ದಾವಣಗೇರಿಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಕುಷ್ಟಗಿ ಮಾರ್ಗವಾಗಿ ಮುದ್ದೇಬಿಹಾಳನ ತಮ್ಮ ಸ್ವಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ಕುಷ್ಟಗಿ ಸಮೀಪ ಅಮರಗುಂಡಪ್ಪ ಪೆಟ್ರೋಲ್ ಬಂಕ್ ಬಳಿ ವೇಗವಾಗಿ ಚಲಿಸುತ್ತಿದ್ದ ರಾಜಸ್ಥಾನ ಮೂಲದ ಟ್ರಕ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಕಾರು ರಭಸವಾಗಿ ಡಿಕ್ಕಿ ಹೊಡೆದು ಕಾರಿನಲ್ಲಿ ಪ್ರಯಾಣಿಸುತ್ತಿದ 3 ಜನರ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಚಾಲಕನಿಗೆ ಗಂಭೀರ ಗಾಯವಾದ ಕಾರಮ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ತೆರಳುವಾಗ ವಣಗೇರಿ ಟೋಲ್ ಗೇಟ್ ಬಳಿ ಸಾವನ್ನಪ್ಪಿದ್ದಾನೆ ಎಂದು ಪಿಎಸ್ಐ ಮೌನೇಶ ರಾಠೋಡ ತಿಳಿಸಿದ್ದಾರೆ.
ಈ ಘಟನೆ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ, ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಭೇಟಿ ನೀಡಿ ಪರಿಶೀಲಿಸಿದರು