ತಾಳಿಕೋಟಿ

3.50 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ನಡಹಳ್ಳಿ ಚಾಲನೆ

3.50 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ನಡಹಳ್ಳಿ ಚಾಲನೆ

ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ: 

ತಾಳಿಕೋಟಿ: ಮತ ಕ್ಷೇತ್ರದಲ್ಲಿರುವ ಎಲ್ಲ ಗ್ರಾಮಗಳಿಗೂ ಮೂಲಭೂತ ಸೌಲಭ್ಯಗಳಾದ ರಸ್ತೆ, ಕುಡಿಯುವ ನೀರು, ವಿದ್ಯತ್, ಆರೋಗ್ಯ, ಶಿಕ್ಷಣವನ್ನು ನೀಡಲು ಸಾಕಷ್ಟು ಅನುದಾನವನ್ನು ತಂದು ಶಕ್ತಿಮೀರಿ ಕೆಲಸಮಾಡಿದ್ದೇನೆ ಇದಕ್ಕೆ ಕ್ಷೇತ್ರದ ಜನರ ಸಹಕಾರವೆ ಕಾರಣ ಎಂದು ಆಹಾರ ಮತ್ತು ನಾಗರಿಕ ನಿಗಮದ ಅದ್ಯಕ್ಷ ಶಾಸಕ ಎ.ಎಸ್‌.ಪಾಟೀಲ್ (ನಡಹಳ್ಳಿ) ಹೇಳಿದರು. 

ತಾಲೂಕಿನ ಹರನಾಳ ಗ್ರಾಮದಲ್ಲಿ ಕೆಬಿಜೆ.ಎನ್‌.ಎಲ್ ಇಲಾಖೆಯ ರೂ.142.52 ಲಕ್ಷ ಸಿ.ಸಿ. ರಸ್ತೆ ಕಾಮಗಾರಿ ಹಾಗೂ ಜಿಲ್ಲಾಪಂಚಾಯತ್ ಇಲಾಖೆಯ ರೂ200-ಲಕ್ಷ ಮೋತ್ತದ ಹರನಾಳ-ನಾಗುರ ವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆತರವೇರಿಸಿ ಅವರು ಮಾತನಾಡಿದರು. 

ಈ ಭಾಗದ ಗ್ರಾಮಗಳ ಜನರು ಬಹುದಿನಗಳ ಬೇಡಿಕೆಯಾದ ಹರನಾಳ-ತಾಳಿಕೋಟಿ ಸೇತುವೆಯ ಕಾಮಗಾರಿ ಪ್ರಗತಿ ಹಂತದಲ್ಲಿದೆ ಆದಷ್ಟು ಬೇಗ ಮುಗಿಸಲಾಗುವುದು. ಈ ಗ್ರಾಮದಲ್ಲಿ ಸುಸಜ್ಜಿತವಾದ ರಸ್ತೆ ಇರದೆ ಇರುವದರಿಂದ ಮಳೆಗಾಲದಲ್ಲಿ ನಡೆದಾಡಲು ಸಾದ್ಯವಾಗುತ್ತಿರಲಿಲ್ಲ ನಾನು ಸ್ವಃತ ಸರ್ವೇ ಮಾಡಿಸಿ ಅನುದಾನ ಬಿಡುಗಡೆಗೊಳಿಸಿದ್ದೇನೆ ಸುಮಾರು 1.42 ಕೋಟಿ ಕಾಮಗಾರಿ ಇದಾಗಿದ್ದು ಉತ್ತಮ ಗುಣಮಟ್ಟವಾಗಿರುತ್ತದೆ, ಇಡೀ ಕ್ಷೇತ್ರದ ಗ್ರಾಮಗಳಿಗೆ ಶುದ್ದಕುಡಿಯುವ ನೀರು ಒದಗಿಸಲು ಜಲದಾರೆ ಹಾಗೂ ಜೆಜೆಎಂ ಯೋಜನೆ ಅಡಿ ರೂ 854 ಕೋಟಿ ಅನುದಾನ ಬಿಡುಗಡೆ ಮಾಡಿಕೋಂಡಿದ್ದೇನೆ ಇದರ ಜೊತೆಗೆ ನಮ್ಮ ರೈತರಗೆ ಕನಿಷ್ಟ 12 ತಾಸು ವಿದ್ಯತ್ ಸಿಗೂವಂತಾಗಲು ಹೋಸ ಯೋಜನೆ ಹಾಕಿಕೋಂಡು ಕೆಲಸ ಮಾಡಲಾಗುತ್ತಿದೆ. ಮತಕ್ಷೇತ್ರದ ಎಲ್ಲಾ ಕೆರೆಗಳನ್ನು ತುಂಬಿಸಲಾಗಿದೆ, ನೀರಾವರಿಗೆ ಒತ್ತು ಕೊಡಲಾಗಿದೆ ಆಲಮಟ್ಟಿ ಡ್ಯಾಂ ಎತ್ತರಕ್ಕೆ ಎರಿಸಿದ ನಂತರ ಇಡೀ ಕ್ಷೇತ್ರ ನೀರಾವರಿಗೆ ಒಳಪಡಿಸಲಿದೆ 25 ವರ್ಷ ಇಲ್ಲಿ ಒಂದೇ ಪಕ್ಷದ ಶಾಸಕರಿಂದರೂ ಅವರೇನು ಮಾಡಲಿಲ್ಲ ನಾನು ಬಂದಕೇವಲ 5 ವರ್ಷ ಗಳಲ್ಲಿ ಇಷೆಲ್ಲಾ ಕೆಲಸ ಮಾಡಿದ್ದೇನೆ ಇನ್ನೂ ನೀವು ನನಗೆ 25 ವರ್ಷಕೊಟ್ಟರೆ ನಾನು ಈ ಕ್ಷೇತ್ರವನ್ನು ಹೇಗೆ ಅಭಿವೃದ್ದಿ ಪಡಿಸುತ್ತೆನೆಂದು ನೀವೇ ಊಹಿಸಬಹುದಾಗಿದೆ ನನಗೆ ಮುಂದೆಯೂ ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದರು. 

ಜಿಪಂ ಮಾಜಿಸದಸ್ಯ ನಿಂಗಪ್ಪಗೌಡ ಬಪ್ಪರಗಿ ಮಾತನಾಡಿ ಶಾಸಕ ಎ.ಎಸ್ ಪಾಟೀಲ್ (ನಡಹಲ್ಲಿ) ಅವರು ನುಡಿದಂತೆ ನಡೆಯುವ ವ್ಯಕ್ತಿ, ಚುನಾವಣೆ ಸಂದರ್ಭದಲ್ಲಿ ನಿಮಗೆ ಕೊಟ್ಟ ಎಲ್ಲಾ ಆಶ್ವಾಸನೆಗಳನ್ನು ಪೂರೈಸಿದ್ದಾರೆ. ಆವರಿಗೆ ಮುಂದೆಯೂ ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದರು. 

ಈ ಸಮಯದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡಡ ಬಿರಾದಾರ (ಕವಡಿಮಟ್ಟಿ), ಗ್ರಾ,ಪಂ ಉಪಾಧ್ಯಕ್ಷ, ಮಾಳಮ್ಮ ಬಿರಾದಾರ, ಗ್ರಾ,ಪಂ ಅದ್ಯಕ್ಷ ಪ್ರತಿನಿಧಿ ರಾಜುಕುಮಾರ ತಳವಾರ ಗ್ರಾ,ಪಂ ಮಾಜಿಉಪಾದ್ಯಕ್ಷ ನಿಂಗಣ್ಣ ಚಳ್ಳಗಿ, ಗ್ರಾ,ಪಂ ಮಾಜಿ ಅದ್ಯಕ್ಷ ಕಾಶೀರಾಯ ನಾಗೂರ, ಕುರುಬರ ಸಂಘದ ಅದ್ಯಕ್ಷ ಅಯ್ಯಪ್ಪ ತುಂಬಗಿ, ಗ್ರಾ,ಪಂ ಸದಸ್ಯರಾದ ಪರಶುರಾಮ ನಾಗೂರ, ದೇವಣ್ಣ ಪೂಜಾರಿ, ಎಇಇ ಎಸಿ.ಡಿ. ಮಸೂತಿ. ಜೆಇ ಪ್ರವೀಣ ಇದ್ದರು. 


ಸುದ್ದಿ ಓದಿ