ಹೊಸಪೇಟೆ

2ನೇ ವಲಯ ಮಟ್ಟದ ಕ್ರೀಡಾಕೂಟ

2ನೇ ವಲಯ ಮಟ್ಟದ ಕ್ರೀಡಾಕೂಟ

ಹೊಸಪೇಟೆ,10 :  ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಶಾಲಾ ಶೀಕ್ಷಣ ಇಲಾಖೆಯ ವತಿಯಿಂದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ವಲಯ ಮಟ್ಟದ ಕ್ರೀಡಾಕೂಟ 2024-25ರ ಹೊಸಪೇಟೆ 2ನೇ ವಲಯ ಮಟ್ಟದ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು. 

ಈ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅಥಿತಿ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್‌.ಎನ್‌. ಮೊಹಮ್ಮದ್ ಇಮಾಮ್ ನಿಯಾಜಿ ರವರು ಪಾಲ್ಗೊಂಡು ಸಸಿ ನೀರು ಹಾಕುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. 

ನಂತರ ಮಾತನಾಡಿದ ಅವರು ಕ್ರೀಡೆಯಿಂದ ಮಕ್ಕಳಿಗೆ  ತಾಳ್ಮೆ ಹಾಗೂ ಏಕಾಗ್ರತೆ ಪಡೆಯಲು ಸಾಧ್ಯವಾಗುತ್ತಿದ್ದು, ವಿಧ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಬಹಳ ಮುಖ್ಯವಾಗಿದ್ದು ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ, ಸೋಲು ಮತ್ತು ಗೆಲವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎರಡನ್ನು ಸಮವಾಘಿ ಸ್ವೀಕರಿಸುವ ಮನೋಭಾವವನ್ನು ಕ್ರೀಡಾಪಟುಗಳು ಹೊಂದಿದ್ದರೆ ಮಾತ್ರ ಯಶಸ್ಸನ್ನು ಸಾಧಿಸಬಹುದು ಎಂದು ಹೇಳಿದರು. 

ನಂತರ ಅಥಿತಿಗಳೆಲ್ಲಾರೂ ಸೇರಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಕ್ರೀಡಾಪಥಾ ಸಂಚಲನ ಮತ್ತು ಗೌರವ ರಕ್ಷೆ ಸ್ವೀಕಾರಸಿದರು. 

ಈ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿ ಅಕ್ಷರ ದಾಸೋಹ  ಸಹ ನಿರ್ದೇಶಕ ಸುಧಾಕರ್, ಜಿಲ್ಲಾ ಡಿ.ಪಿ.ಇ.ಒ. ಮಂಜುನಾಥ, ತಾಲೂಕು ಟಿ.ಪಿ.ಇ.ಒ. ಹನುಮನಾಯ್ಕ್‌,  ಎನ್‌.ಜಿ.ಒ. ಜಿಲ್ಲಾ ಕಾರ್ಯದರ್ಶಿ ಈಡ್ಲಿ ವೀರಭದ್ರೇಶ, ಕ.ರಾ.ಸ. ನೌಕರರ  ಸಂಘದ ರಾಜ್ಯ ಪರಿಷತ್ ಸದಸ್ಯ ಬಸವರಾಜ್, ಜಿಲ್ಲಾ ದೈಹಿಕ ಶಿಕ್ಷಕರ ಸಂಗ ಗ್ರೇಡ್‌-2 ಮಾಜಿ ಅಧ್ಯಕ್ಷ ಗಣೇಶ್, ಹೊಸಪೇಟೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಸವರಾಜ್, ದೈಹಿಕ ಶಿಕ್ಷಕರ ಸಂಘ ಜಿಲ್ಲಾಧ್ಯಕ್ಷ ಜಾಕೀರ್ ಹುಸೇನ್, ದೈಹಿಕ ಶಿಕ್ಷಕರ ಸಂಘ ತಾಲೂಕು ಅಧ್ಯಕ್ಷ ನಿಸ್ಸಾರ್ ಅಹಮ್ಮದ್, ವಿನೋಭಾ ಬಾವೆ ಶಾಲಾಯ ಸಹ ಶಿಕ್ಷಕಿಯಾದ ಶ್ರೀದೇವಿ, ದೈಹಿಕ ಶಿಕ್ಷಕರ ಸಂಘದ ತಾಲೂಕು ಕಾರ್ಯದರ್ಶಿ ಚೌಡಪ್ಪ, ಸಮಾಜ ಸೇವಕ ಡಿ.ವೆಂಕಟರಮಣ, ನಿಜಾಮುದ್ದೀನ್ ಹಾಗೂ ಶಿಕ್ಷಕರು ವಿಧ್ಯಾರ್ಥಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ