ರಾಷ್ಟ್ರೀಯ

ಕರೋನ ಸೋಂಕು , ಮರಾಠವಾಡದಲ್ಲಿ 24 ಗಂಟೆಯಲ್ಲಿ 28 ರೋಗಿಗಳ ಸಾವು

ಕರೋನ ಸೋಂಕು , ಮರಾಠವಾಡದಲ್ಲಿ  24 ಗಂಟೆಯಲ್ಲಿ 28 ರೋಗಿಗಳ  ಸಾವು

ಔರಂಗಾಬಾದ್,  ಆಗಸ್ಟ್ 31: ಮರಾಠವಾಡ ಪ್ರದೇಶದ ಎಂಟು ಜಿಲ್ಲೆಗಳಲ್ಲಿ ಕನಿಷ್ಠ 28 ಕರೋನಾ ರೋಗಿಗಳು ಸಾವನ್ನಪ್ಪಿದ್ದಾರೆ, ಇದು 24 ಗಂಟೆಗಳಲ್ಲೇ ಸಂಭವಿಸಿದ    ಅತಿ ಹೆಚ್ಚಿನ ಸಾವಿನ  ಘಟನೆಯಾಗಿದೆ. 

ಇದೇ ಅವಧಿಯಲ್ಲಿ ಈ ಜಿಲ್ಲೆಗಳಲ್ಲಿ 1,323 ಹೊಸ ಕೊರೊನ ಸೋಂಕು  ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಎಲ್ಲಾ ಜಿಲ್ಲೆಗಳ ಮಾಹಿತಿಯಂತೆ  265 ಹೊಸ ಪ್ರಕರಣ ಹಾಗೂ 7 ಸಾವಿನ ಪ್ರಕರಣ ವರದಿಯಾದ ಲಾತೂರ್ ಜಿಲ್ಲೆ  ಹೆಚ್ಚು ಬಾಧಿತವಾಗಿದೆ. 

ಉಳಿದಂತೆ  ನಾಂದೇಡ್ 5 ಸಾವುಗಳು ಮತ್ತು 301 ಪ್ರಕರಣಗಳು, ಔ ರಂಗಾಬಾದ್ 239 ಪ್ರಕರಣಗಳು ಮತ್ತು ಐದು ಸಾವುಗಳು, ಉಸ್ಮಾನಾಬಾದ್ 207 ಪ್ರಕರಣಗಳು ಮತ್ತು 4 ಸಾವುಗಳು, ಬೀಡ್ 94 ಪ್ರಕರಣಗಳು ಮತ್ತು 4 ಸಾವುಗಳು, ಜಲ್ನಾ ಎರಡು ಸಾವುಗಳು ಮತ್ತು 116 ಪ್ರಕರಣಗಳು, ಪರಭಾನಿ 64 ಪ್ರಕರಣಗಳು ಮತ್ತು ಒಂದು ಸಾವು ಮತ್ತು ಹಿಂಗೋಲಿ 37 ಪ್ರಕರಣಗಳು ವರದಿಯಾಗಿದೆ. 


ಸುದ್ದಿ ಓದಿ