ರಾಷ್ಟ್ರೀಯ

ದೇಶದಲ್ಲಿ 26,567 ಹೊಸ ಕೋವಿಡ್‍-19 ಪ್ರಕರಣಗಳು ವರದಿ: ಚೇತರಿಕೆ ಪ್ರಮಾಣ ಶೇ 94.59

ದೇಶದಲ್ಲಿ 26,567 ಹೊಸ ಕೋವಿಡ್‍-19 ಪ್ರಕರಣಗಳು ವರದಿ: ಚೇತರಿಕೆ ಪ್ರಮಾಣ ಶೇ 94.59

ನವದೆಹಲಿ, ಡಿಸೆಂಬರ್ 8: ತುಂಬಾ ದಿನಗಳ ನಂತರ ಭಾರತದಲ್ಲಿ ಮಂಗಳವಾರ ಕೋವಿಡ್‍-19 ಹೊಸ ಪ್ರಕರಣಗಳ ಸಂಖ್ಯೆ 30,000ಕ್ಕೂ ಕಡಿಮೆ ವರದಿಯಾಗಿದ್ದು, ಕಳೆದ 24 ತಾಸಿನಲ್ಲಿ  26,567 ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ನವೀಕೃತ ಮಾಹಿತಿಯಲ್ಲಿ ಇಲ್ಲಿ ತಿಳಿಸಿದೆ.

ದೇಶದಲ್ಲಿ ಸದ್ಯ ಒಟ್ಟು ಪ್ರಕರಣಗಳ ಸಂಖ್ಯೆ 97,03,770 ಕ್ಕೆ ಏರಿದೆ ಹೊಸ ಮಾಹಿತಿಯಲ್ಲಿ ತಿಳಿಸಲಾಗಿದೆ. ಈ ಮಧ್ಯೆ, ಹೊಸ ಪ್ರಕರಣಗಳಿಗೆ ಹೋಲಿಸಿದರೆ ಗುಣಮುಖ ಹೊಂದಿದ ಪ್ರಕರಣಗಳು ಅಧಿಕವಾಗಿರುವುದು ಮುಂದುವರೆದಿದೆ. ಸೋಮವಾರದಿಂದ ಸಕ್ರಿಯ ಪ್ರಕರಣಗಳು, 12,863 ರಷ್ಟು ಕಡಿಮೆಯಾಗಿದ್ದು, ಸದ್ಯ, ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,83,866 ರಷ್ಟಿದೆ.

ಸರ್ಕಾರದ ಅಂಕಿಅಂಶಗಳಂತೆ,  ಕಳೆದ 24 ಗಂಟೆಗಳಲ್ಲಿ 39,045 ಜನರು ಹೆಚ್ಚು ಮಂದಿ ಸಾಂಕ್ರಾಮಿಕ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಸದ್ಯ, ಒಟ್ಟು ಚೇತರಿಕೆ ಸಂಖ್ಯೆ 91,78,946 ಕ್ಕೆ ತಲುಪಿದೆ. ಕಳೆದ 24 ತಾಸಿನಲ್ಲಿ 385 ಮಂದಿ ಸೋಂಕಿಗೆ ಬಲಿಯಾಗುವುದರೊಂದಿಗೆ ದೇಶದಲ್ಲಿ ಸಾವಿನ ಸಂಖ್ಯೆ  1,40,958 ಕ್ಕೆ ತಲುಪಿದೆ.

ಐಸಿಎಂಆರ್ ವರದಿಯಂತೆ ಇದುವರೆಗೆ 14,88,14,055 ಕೋವಿಡ್‍-19 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಶೇಕಡಾವಾರು ಪ್ರಮಾಣದಲ್ಲಿ ಸದ್ಯ, ಸಕ್ರಿಯ ಪ್ರಕರಣಗಳು ಶೇ 3.96, ಚೇತರಿಕ

ಪ್ರಮಾಣ 94.59 ಮತ್ತು ಸಾವಿನ ಪ್ರಮಾಣ ಶೇ 1.45 ರಷ್ಟಿದೆ.

ಸುದ್ದಿ ಓದಿ