ರಾಣೆಬೆನ್ನೂರ

ಮಹಾತ್ಮರು ವಸುದೈವ ಕುಟುಂಬಿಗಳು: ಚನ್ನಮಲ್ಲಿಕಾರ್ಜುನ ಶ್ರೀ

ಮಹಾತ್ಮರು  ವಸುದೈವ ಕುಟುಂಬಿಗಳು: ಚನ್ನಮಲ್ಲಿಕಾರ್ಜುನ ಶ್ರೀ

ರಾಣೇಬೆನ್ನೂರು 09:  ಇಲ್ಲಿನ ಮೃತ್ಯುಂಜಯ  ನಗರದ ಚೆನ್ನೇಶ್ವರ ಮಠದಲ್ಲಿ 257ನೆಯ ಮಾಸಿಕ  ಹುಣ್ಣಿಮೆ ಧಾರ್ಮಿಕ  ಕಾರ್ಯಕ್ರಮವು ಮಂಗಳವಾರ ಸಂಜೆ ನಡೆಯಿತು. ಇದೇ ಸಂದರ್ಭದಲ್ಲಿ  ಲಿಂಗೈಕ್ಯ ಒಡೆಯರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ   ಪಟ್ಟಾಧಿಕಾರದ 50ನೆಯ ಸುವರ್ಣ ಮಹೋತ್ಸವ ನೆರವೇರಿಸಲಾಯಿತು.ದಿವ್ಯ ಸಾನಿಧ್ಯ ವಹಿಸಿದ್ದ, ಹೊನ್ನಾಳಿ ಹಿರೇಕಲ್ ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ,  ಮಹಾತ್ಮರಾದವರು ವಿಶ್ವ ಕುಟುಂಬಿಗಳಾಗಿದ್ದಾರೆ ಹಾಗೂ ಪವಾಡ ಪುರುಷರಾಗಿದ್ದಾರೆ ಅವರ ದಯೆ,ಕರುಣೆ,ಸದಾ ಕಾಲ ಈ ನಾಡಿನ ಭಕ್ತ ಸಮುದಾಯದ ಮೇಲಿದೆ. ಲಿಂಗೈಕ್ಯ ಒಡೆಯರ್ ಶ್ರೀಗಳು ಈ ಭಾಗದಲ್ಲಿ  ನಡೆದಾಡುವ ದೇವರಾಗಿ ಭಕ್ತರ ಮನೆ,ಮನಗಳಲ್ಲಿ ನೆಲೆ ನಿಂತಿದ್ದಾರೆ. ಅಂಥವರ ಪಾದಸ್ಪರ್ಶದಿಂದ ಈ ಧರಣಿ ಪವಿತ್ರವಾಗಿದೆ ಎಂದ ಶ್ರೀಗಳು ದೇವರು ಕೊಟ್ಟಿದ್ದರಲ್ಲಿ ಧಾನ, ಧರ್ಮ, ಪುಣ್ಯ ಪರೋಪಕಾರ್ಯಗಳಿಗೆ ದಾನ ನೀಡುವುದರ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಆತ್ಮ ಸಂತೃಪ್ತಿಯನ್ನು ಹೊಂದಬೇಕು  ಎಂದು ಭಕ್ತ ಸಮುದಾಯಕ್ಕೆ ಕರೆ ನೀಡಿದರು.ನೀಡಿದರು. ನೆಗಳೂರು ಹಿರೇಮಠದ ಶ್ರೀ ಗದಿಗೆಯ್ಯ ಶಾಸ್ತ್ರಿಗಳು ಪಾಲಿಕೊಪ್ಪದಲ್ಲಿ ಹುಟ್ಟಿ ವಿಶ್ವಕ್ಕೆ ಬೆಳಕು ನೀಡಿದ ಜಗದ್ಗುರು ವೀರ ಗಂಗಾಧರ ಶ್ರೀಗಳವರನ್ನು ಕುರಿತು ಉಪನ್ಯಾಸ ನೀಡಿದರು.  ಪ್ರಸಾದ ಸೇವಾರ್ಥಿಗಳಾದ  ಉಮೇಶ ಗುಂಡಗಟ್ಟಿ ಕುಟುಂಬದವರು, ಜ್ಯೋತಿ ಬೆಳಗಿಸಿ  ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಗಣ್ಯರಾದ, ಎ ಬಿ ಪಾಟೀಲ್, ಜಿ.ಜಿ ಹೊಟ್ಟಿ ಗೌಡ್ರ, ಪ್ರೊ ಅ. ಸಿ.ಹಿರೇಮಠ, ಶಿವಪ್ಪ ಗುರಿಕಾರ್, ವಾಗೀಶ್ ಮಳಿಮಠ, ಪ್ರಕಾಶ್  ಗುಪ್ತ,, ಹಾಲ ಸಿದ್ದಯ್ಯ ಶಾಸ್ತ್ರಿಗಳು ಮಹಿಳಾ ಮಂಡಳದ ಅಧ್ಯಕ್ಷ  ಸುನಂದಮ್ಮ ತಿಳುವಳ್ಳಿ, ಕಸ್ತೂರಮ್ಮ ಪಾಟೀಲ್, ಗಾಯಿತ್ರಮ್ಮ ಕುರುವತ್ತಿ ನಿಂಗನಗೌಡ ಪಾಟೀಲ್,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಆರಂಭದಲ್ಲಿ  ಜಗದ್ಗುರು ವಾಗೀಶ ಪಂಡಿತಾರಾಧ್ಯ ಧಾರ್ಮಿಕ ಪಾಠಶಾಲಾ ವಟುಗಳು,ವೇದಘೋಷ ಮಾಡಿದರು. ಸ್ಥಳೀಯ ಕಲಾವಿದರು ಸಂಗೀತ ಸೇವೆ ಸಲ್ಲಿಸಿದರು. ವಿ.ವಿ. ಹರಪನಹಳ್ಳಿ ಸ್ವಾಗತಿಸಿದರು, ಕಸ್ತೂರಮ್ಮ ಪಾಟೀಲ್ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ