ಶಿಗ್ಗಾವ್

241 ಬೂತ್, 37 ಗ್ರಾಮ ಪಂಚಾಯತಿ ಕಾರ್ಯಕರ್ತರ ಸಮಾವೇಶ

241 ಬೂತ್, 37 ಗ್ರಾಮ ಪಂಚಾಯತಿ ಕಾರ್ಯಕರ್ತರ ಸಮಾವೇಶ

ಶಿಗ್ಗಾವಿ 19:   ಶಿಗ್ಗಾವಿ ಸವಣೂರ ವಿಧಾನಸಭೆ ಉಪಚುನಾವಣೆಯ ನಿಮಿತ್ಯ 241 ಭೂತ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು 37 ಗ್ರಾಮಪಂಚಾಯತಿ ಅದ್ಯಕ್ಷರು ಹಾಗೂ ಸರ್ವ ಸದಸ್ಯರ ಬೂತ್ ಪರೀಶೀಲನೆ ಯಶಸ್ವಿಯಾದ ನಿಮಿತ್ಯ ಅವರಿಗೆ  ಈ ಸಮಾವೇಶವನ್ನು ಎಐಸಿಸಿ ಕಾರ್ಯದರ್ಶಿ ಹಾಗೂ ಉಸ್ತುವಾರಿ ಮಯೂರ ಜಯಕುಮಾರ ಆದೇಶದ ಮೇರೆಗೆ ಈ ಸಮಾವೇಶ ಮಾಡುತ್ತಿದ್ದೇವೆ ಎಂದು ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.            

 ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಸಮಾವೇಶ ಪೂರ್ವಬಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಸಮಾವೇಶಕ್ಕೆ ರಾಜ್ಯ ನಾಯಕರು, ಸಚಿವರು, ವಿಧಾನಸಭೆ ಸದಸ್ಯರು , ಮುಖಂಡರು, ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದು ಹೇಳಿದರು.  ಆಕಾಂಕ್ಷಿ ಯಾಸಿರಖಾನ ಪಠಾಣ ಮಾತನಾಡಿ  ಕಳೆದ 3-4 ತಿಂಗಳಿಂದ ಈ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಜೊತೆಗೆ ಎಲ್ಲ ಕಾರ್ಯಕರ್ತರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಮಹತ್ವದ ಕಾರ್ಯವು ಈ ಕ್ಷೇತ್ರದಲ್ಲಿ ಆಗಿದೆ ಎಂದರು.        

 ಮಾಜಿ ಸಚಿವ ಆರ್ ಶಂಕರ ಮಾತನಾಡಿ   ಈ ಕ್ಷೇತ್ರವು ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ ಬರುವ ಮುಂಚೆ ಹೊಡೆದ ಮನೆ ಆಗಿತ್ತು ಈಗ ಅವರು ಬಂದ ಮೇಲೆ ಈ ಕ್ಷೇತ್ರವು ತುಂಬಿದ ಮನೆಯಾಗಿದೆ ಎಲ್ಲರೂ ಹೊಂದಾಣಿಕೆಯಿಂದ ಒಗ್ಗಟ್ಟಿನಿಂದ ಸಂಘಟನೆ ಮಾಡುತ್ತಿದ್ದಾರೆ ಎಂದರು.   ಮಹಿಳಾ ರಾಜ್ಯ ಕಾರ್ಯದರ್ಶಿ ರಾಜೇಶ್ವರಿ ಪಾಟೀಲ ಮಾತನಾಡಿ ಎಲ್ಲ 241 ಬೂತಗಳಲ್ಲಿ ಮತ್ತು ಗ್ರಾಮ ಪಂಚಾಯತಿಗಳಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ ಇದಕ್ಕೆ ಸಂಘಟನೆ ಕಾರಣ ಎಂದರು.         

ಮಹಿಳಾ ಜಿಲ್ಲಾ ಅಧ್ಯಕ್ಷೆ ಪ್ರೇಮಾ ಪಾಟೀಲ ಮಾತನಾಡಿದರು.  ಬ್ಲಾಕ ಅಧ್ಯಕ್ಷರಾದ ಬಿ.ಸಿ.ಪಾಟೀಲ,  ಎಂ.ಜೆ.ಮುಲ್ಲಾ, ಪುರಸಭೆ ಸದಸ್ಯ ಗೌಸಖಾನ ಮುನಶಿ, ಮುನ್ನಾ ಲಕ್ಷ್ಮೇಶ್ವರ, ಸುಬಹಾನಿ ಚೂಡಿಗಾರ, ಮಂಜುನಾಥ ಮಣ್ಣಣ್ಣವರ, ನೂರಹ್ಮದ ಮಳಗಿ, ಹನುಮಂತಪ್ಪ ಬಂಡಿವಡ್ಡರ, ಅಬ್ದುಲಕರೀಂ ಮೊಗಲಲ್ಲಿ, ಎಸ್‌.ಎಫ್‌.ಮಣಕಟ್ಟಿ, ಗುಡ್ಡಪ್ಪ ಜಲದಿ, ಸಂತೋಷ ಚಾಕಲಬ್ಬಿ, ಬಾಬರ ಬಾವೋಜಿ, ಮಹಾಂತೇಶ ಸಾಲಿ, ಅನುಸೂಯಾ ಬಳಿಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.            

ಭಾಕ್ಸ ಸುದ್ದಿ : ಕಾರ್ಯಕರ್ತರ ಸಮಾವೇಶವು ಶನಿವಾರ ದಿ 21 ರಂದು ತಾಲೂಕ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಸಮಾವೇಶಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸಚಿವರಾದ  ಈಶ್ವರ ಖಂಡ್ರೆ,  ಜಾರಕಿಹೋಳಿ, ಎಚ್‌.ಕೆ.ಪಾಟೀಲ, ಸಂತೋಷ ಲಾಡ, ಶಿವಾನಂದ ಪಾಟೀಲ, ಮುಖ್ಯ ಸಚೇತಕ ಸಲೀಂ ಅಹ್ಮದ, ಜಿ.ಸಿ.ಚಂದ್ರಶೇಖರ, ತನ್ವೀರ ಶೇಟ, ವಿನಯ ಕುಲಕರ್ಣಿ, ಬಸವರಾಜ ಶಿವಣ್ಣವರ, ರುದ್ರ​‍್ಪ ಲಮಾಣಿ, ಶ್ರೀನಿವಾಸ ಮಾನೆ, ಯು.ಬಿ.ಬಣಕಾರ, ಪ್ರಕಾಶ ಕೋಳಿವಾಡ ಸೇರಿದಂತೆ ಉಪ ಚುನಾವಣೆ ಆಕಾಂಕ್ಷಿಗಳು ಉಪಸ್ಥಿತರಿರುತ್ತಾರೆ. 


ಸುದ್ದಿ ಓದಿ