24*7 ಕಾಮಗಾರಿ ಪರೀಶೀಲನೆ
ರಾಣೀಬೆನ್ನೂರ 09: ಸ್ಥಳೀಯ ನಗರಸಭೆಗೆ ಇಂದು ಕೆಯುಐಡಿಎಫ್ಸಿ ಯ ವ್ಯವ ಸ್ಥಾಪಕ ನಿರ್ದೇಶಕ ರೇಜುರವರು ಆಗಮಿಸಿ ನಗರ ಸಭಾ ಅಧ್ಯಕ್ಷೆ ರೂಪಾ ಚಿನ್ನಿ ಕಟ್ಟಿ, ಪೌರಾಯುಕ್ತ ಉದಯ ಕುಮಾರ, ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ ಹಾಗೂ ಎಲ್ಲ ನಗರ ಸಭಾ ಸದಸ್ಯರುಗಳ ಸಭೆ ನಡೆಸಿ 24*7 ಕಾಮಗಾರಿಯ ಪರಿ ಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷರು 24*7 ಯೋಜನೆಯು ಪೂರ್ಣ ಗೊಂಡಿಲ್ಲ, ಅನೇಕ ಕಡೆ ಪೈಪ ಒಡೆದು ನೀರು ಸೋರಿಕೆಯಾ ಗುತ್ತಿದೆ, ನಲ್ಲಿಗಳಿಗೆ ಸರಿಯಾಗಿ ವಾಲ್ ಕೂಡ್ರಿಸಿರುವುದಿಲ್ಲ, ಪೈಪ ಲೈನ್ ಹಾಕಲು ರಸ್ತೆಯನ್ನು ಅಗೆ ದಿದ್ದು ಪೈಪಲೈನ್ ಹಾಕಿದ ನಂತರ ಸರಿಯಾಗಿ ಮುಚ್ಚದೆ ಹಾಗೂ ರಸ್ತೆ ಕಾಮಗಾರಿ ಮಾಡದೆ ಹಾಗೆಯೇ ಬಿಟ್ಟಿರುವುದರ ಬಗ್ಗೆ ಎಂಡಿ ಯ ವರ ಗಮನ ಸೆಳೆದಾಗ ಅವರು ಎಲ್ಲ ಲೋಪದೋಷಗಳನ್ನು ಅವಲೋಕಿಸಿ ಇನ್ನೊಂದು ತಿಂಗ ಳಲ್ಲಿ ಈ ಯೋಜನೆ ಪೂರ್ಣ ಗೊಳಿಸಲಾಗುವುದೆಂದು ಹೇಳಿ ಕೆಯುಐಡಿಎಫ್ಸಿ ತಾ.ಅಧಿಕಾರಿ ಗಳಿಗೆ ಸಭೆಯಲ್ಲಿ ಪ್ರಸ್ತಾಪಗೊಂಡ ಎಲ್ಲ ಅವ್ಯವಸ್ಥೆಗಳನ್ನು ಸರಿಪಡಿಸಲು ತುರ್ತುಕ್ರಮ ಜರುಗಿಸಬೇಕೆಂದು